AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Forbes Richest People: ಲೇಟೆಸ್ಟ್​ ಲೆಕ್ಕಾಚಾರ -ಮತ್ತೆ ಮುಖೇಶ್ ಅಂಬಾನಿಯೇ ಏಷ್ಯಾದ ನಂಬರ್ ಒನ್ ಶ್ರೀಮಂತ! ಅತ್ತ ಎಲಾನ್ ಮಸ್ಕ್​ ಕತೆಯೇನು?

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಮುಖೇಶ್ ಅಂಬಾನಿ ಮತ್ತೆ ಭಾರತದ ಹಾಗೂ ಏಷ್ಯಾದ ನಂಬರ್ ಒನ್ ಶ್ರೀಮಂತರಾಗಿ ಹೊರಹೊಮ್ಮಿದ್ದಾರೆ. ಅದಾನಿ ಕಂಪನಿಯ ಗೌತಮ್ ಅದಾನಿರನ್ನು ಹಿಂದಿಕ್ಕಿ ಮುಖೇಶ್ ಅಂಬಾನಿ ಭಾರತದ ನಂಬರ್ ಒನ್ ಶ್ರೀಮಂತರಾಗಿದ್ದಾರೆ ಎಂದು ಪೋರ್ಬ್ಸ್ ನಿಯತಕಾಲಿಕದ ಶ್ರೀಮಂತರ ಪಟ್ಟಿಯಲ್ಲಿ ಪ್ರಕಟಿಸಲಾಗಿದೆ. ಕಳೆದ 5 ದಿನಗಳಿಂದ ಷೇರುಪೇಟೆಯಲ್ಲಿ ರಿಲಯನ್ಸ್ ಕಂಪನಿಯ ಷೇರುಗಳ ಬೆಲೆ ಏರಿಕೆಯಾಗಿದ್ದರಿಂದ ಮುಖೇಶ್ ಅಂಬಾನಿ ಮತ್ತೆ ಭಾರತದ ನಂಬರ್ ಒನ್ ಸ್ಥಾನಕ್ಕೇರಿದ್ದಾರೆ.

Forbes Richest People: ಲೇಟೆಸ್ಟ್​ ಲೆಕ್ಕಾಚಾರ -ಮತ್ತೆ ಮುಖೇಶ್ ಅಂಬಾನಿಯೇ ಏಷ್ಯಾದ ನಂಬರ್ ಒನ್ ಶ್ರೀಮಂತ! ಅತ್ತ ಎಲಾನ್ ಮಸ್ಕ್​ ಕತೆಯೇನು?
ಲೇಟೆಸ್ಟ್​ ಲೆಕ್ಕಾಚಾರ: ಮತ್ತೆ ಅಂಬಾನಿಯೇ ಏಷ್ಯಾದ ನಂಬರ್ ಒನ್ ಶ್ರೀಮಂತ! ಅತ್ತ ಎಲಾನ್ ಮಸ್ಕ್​ ಕತೆಯೇನು?
S Chandramohan
| Updated By: ಸಾಧು ಶ್ರೀನಾಥ್​|

Updated on: Jun 03, 2022 | 5:06 PM

Share

ಭಾರತದಲ್ಲಿ ಅದಾನಿ ಕಂಪನಿಯ ಗೌತಮ್ ಅದಾನಿ ಧೀಡೀರನೇ ನಂಬರ್ ಒನ್ ಶ್ರೀಮಂತ ವ್ಯಕ್ತಿ ಸ್ಥಾನಕ್ಕೇರಿದ್ದರು. ಕೊರೊನಾದ ಬಳಿಕ ಉಂಟಾದ ಪರಿಸ್ಥಿತಿಯ ಲಾಭ ಪಡೆದು ಗೌತಮ್ ಅದಾನಿ ಕಳೆದ ಕೆಲ ತಿಂಗಳಿನಿಂದ ಭಾರತ ಹಾಗೂ ಏಷ್ಯಾದ ನಂಬರ್ ಒನ್ ಶ್ರೀಮಂತರಾಗಿದ್ದರು. ಆದರೇ, ಕಳೆದ 5 ದಿನಗಳಿಂದ ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಂಪನಿಗಳ ಷೇರುಗಳ ಬೆಲೆ ಶೇ.2.03 ರಷ್ಟು ಏರಿಕೆಯಾಗಿದೆ. ಇದರ ಪರಿಣಾಮವಾಗಿ ಈಗ ಮುಖೇಶ್ ಅಂಬಾನಿ ಮತ್ತೆ ಭಾರತದ ಶ್ರೀಮಂತ ವ್ಯಕ್ತಿಗಳ ಸಾಲಿನಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ. ಪೋರ್ಬ್ಸ್ ನಿಯತಕಾಲಿಕ ಈ ಬಗ್ಗೆ ಪಟ್ಟಿ ಬಿಡುಗಡೆ ಮಾಡಿದೆ.

ಶ್ರೀಮಂತಿಕೆಯಲ್ಲಿ ಅದಾನಿ ಹಿಂದಿಕ್ಕಿದ ಮುಖೇಶ್ ಅಂಬಾನಿ ಮುಖೇಶ್ ಅಂಬಾನಿ ಮತ್ತೆ ಭಾರತದ ನಂಬರ್ ಒನ್ ಶ್ರೀಮಂತ

ಪೋರ್ಬ್ಸ್ ರಿಯಲ್ ಟೈಮ್ ಶ್ರೀಮಂತರ ಪಟ್ಟಿಯಲ್ಲಿ ಮುಖೇಶ್ ಅಂಬಾನಿ ವಿಶ್ವದ 6ನೇ ಅತಿ ದೊಡ್ಡ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಮುಖೇಶ್ ಅಂಬಾನಿ ಸಂಪತ್ತು ಶೇ.6 ರಷ್ಟು ವೃದ್ದಿಯಾಗಿದ್ದು, 6.1 ಬಿಲಿಯನ್ ಡಾಲರ್ ಏರಿಕೆಯಾಗಿದೆ. ಇದರಿಂದಾಗಿ ಮುಖೇಶ್ ಅಂಬಾನಿ ಒಟ್ಟಾರೆ ಸಂಪತ್ತು 104.3 ಬಿಲಿಯನ್ ಡಾಲರ್ ಗೆ ಏರಿಕೆಯಾಗಿದೆ. ಅದೇ ವೇಳೆ ಗೌತಮ್ ಅದಾನಿ ನಿವ್ವಳ ಸಂಪತ್ತು ಶೇ.0.66 ರಷ್ಟು ಏರಿಕೆಯಾಗಿದ್ದು, ಅದಾನಿ ಒಟ್ಟಾರೆ ಸಂಪತ್ತು 99.9 ಬಿಲಿಯನ್ ಡಾಲರ್ ಗೆ ಏರಿಕೆಯಾಗಿದೆ. ಗೌತಮ್ ಅದಾನಿ ವಿಶ್ವದ 9ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ.

ಅದಾನಿ ಕಂಪನಿಯ ಎನರ್ಜಿ, ಎಫ್ಎಂಸಿಜಿ, ಸೋಲಾರ್, ಟೆಲಿಕಾಂ, ಪೋರ್ಟ್ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಹೂಡಿಕೆಯನ್ನು ಹೊಂದಿದೆ. ಗೌತಮ್ ಅದಾನಿ ಭಾರತದ ನಂಬರ್ ಒನ್ ಶ್ರೀಮಂತ ಸ್ಥಾನವನ್ನು ಕಳೆದುಕೊಂಡಿರಬಹುದು, ಆದರೇ, ಕಳೆದೆರೆಡು ವರ್ಷದಲ್ಲಿ ಗೌತಮ್ ಅದಾನಿ ಸಂಪತ್ತು ಬಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳುತ್ತಾರೆ. ಹಾಗಾದರೇ, ಪೋರ್ಬ್ಸ್ ನಿಯತಕಾಲಿಕದ ಪ್ರಕಾರ, ವಿಶ್ವದ ಟಾಪ್ ಟೆನ್ ಶ್ರೀಮಂತರು ಯಾರು ಯಾರು? ಅವರ ಸಂಪತ್ತು ಎಷ್ಟಿದೆ? ಟಾಪ್ ಟೆನ್ ಶ್ರೀಮಂತರಲ್ಲಿ ಭಾರತದ ಎಷ್ಟು ಮಂದಿ ಇದ್ದಾರೆ ಎಂಬುದು ಈ ಪಟ್ಟಿಯಿಂದ ಸ್ಪಷ್ಟವಾಗುತ್ತೆ.

ಪೋರ್ಬ್ಸ್ ವಿಶ್ವದ ಶ್ರೀಮಂತರ ಪಟ್ಟಿ 1-ಟೆಸ್ಲಾದ ಎಲಾನ್ ಮಸ್ಕ್ -233 ಬಿಲಿಯನ್ ಡಾಲರ್ 2-ಬರ್ನಾಡ್ ಅರ್ನಾಲ್ಟ್-157 ಬಿಲಿಯನ್ ಡಾಲರ್ 3-ಜೆಫ್ ಬೆಜೋಸ್-151 ಬಿಲಿಯನ್ ಡಾಲರ್ 4-ಬಿಲ್ ಗೇಟ್ಸ್ -129 ಬಿಲಿಯನ್ ಡಾಲರ್ 5-ವಾರೆನ್ ಬಫೆಟ್-113 ಬಿಲಿಯನ್ ಡಾಲರ್ 6-ಮುಖೇಶ್ ಅಂಬಾನಿ-104 ಬಿಲಿಯನ್ ಡಾಲರ್ 7-ಲ್ಯಾರಿ ಪೇಜ್-100.9 ಬಿಲಿಯನ್ ಡಾಲರ್ 8-ಲ್ಯಾರಿ ಎಲಿಸನ್-100.8 ಬಿಲಿಯನ್ ಡಾಲರ್ 9-ಗೌತಮ್ ಅದಾನಿ-99.9 ಬಿಲಿಯನ್ ಡಾಲರ್ 10-ಸೆರ್ಗಿ ಬ್ರಿನ್ಸ್-97.1 ಬಿಲಿಯನ್ ಡಾಲರ್