FD Interest Rate: ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ನಿಂದ ಎಫ್ಡಿ ಮೇಲೆ ಶೇ 7.99 ಬಡ್ಡಿ
ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ನಿಂದ ಫಿಕ್ಸೆಡ್ ಡೆಪಾಸಿಟ್ ಮೇಲಿನ ಬಡ್ಡಿ ದರ ಶೇ 7.99ರ ಬಡ್ಡಿ ದರ ಮೊತ್ತ ನಿಗದಿ ಮಾಡಲಾಗಿದೆ. ಯಾವ ಮೊತ್ತಕ್ಕೆ, ಅವಧಿಗೆ ಹಾಗೂ ಯಾರಿಗೆ ಎಂಬ ಮಾಹಿತಿ ಇಲ್ಲಿದೆ.
ಮಹಾರಾಷ್ಟ್ರದಲ್ಲಿನ ಆರ್ಬಿಐ ಲೈಸೆನ್ಸ್ ಇರುವ ಸಣ್ಣ ಹಣಕಾಸು ಸಂಸ್ಥೆ, ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಘೋಷಣೆ ಮಾಡಿರುವಂತೆ, ಫಿಕ್ಸೆಡ್ ಡೆಪಾಸಿಟ್ಸ್ಗಳ (Fixed Deposits) ಮೇಲೆ ಬಡ್ಡಿ ದರ ಏರಿಕೆ ಮಾಡುವುದಾಗಿ ಘೋಷಣೆಯಲ್ಲಿ ತಿಳಿಸಿದೆ. ಕಳೆದ ತಿಂಗಳು ಆರ್ಬಿಐ ರೆಪೋ ದರವನ್ನು 40 ಬೇಸಿಸ್ ಪಾಯಿಂಟ್ಸ್ ಅಥವಾ ಶೇ 0.40ರಷ್ಟು ಏರಿಕೆ ಮಾಡಲಾಗಿತ್ತು. ಆ ನಂತರ ಈ ಬೆಳವಣಿಗೆ ಆಗಿದೆ. ಹಣದುಬ್ಬರವನ್ನು ನಿಯಂತ್ರಿಸುವ ಉದ್ದೇಶ ಇದ್ದ ಆ ತೀರ್ಮಾನದಿಂದ ಎಲ್ಲ ಬ್ಯಾಂಕ್ಗಳು ಮತ್ತು ಎನ್ಬಿಎಫ್ಸಿಗಳು ತಮ್ಮ ಬಡ್ಡಿದರಗಳನ್ನು ಎಲ್ಲ ಸಾಲಗಳು ಮತ್ತು ಎಫ್ಡಿ ಸೇರಿದಂತೆ ಇತರ ಠೇವಣಿಗಳನ್ನು ಏರಿಕೆ ಮಾಡಲು ಸೂಚನೆ ಸಿಕ್ಕಂತೆ ಆಯಿತು. ನ್ಯೂ ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಎಫ್ಡಿ ದರಗಳು ಜೂನ್ 6, 2022ರಿಂದ ಅನ್ವಯ ಆಗಲಿದೆ.
999 ದಿನಗಳ ಅವಧಿಗೆ 2 ಕೋಟಿ ರೂಪಾಯಿಗಿಂತ ಹೆಚ್ಚಿನ ಮೊತ್ತಕ್ಕೆ ಹಿರಿಯ ನಾಗರಿಕರಿಗೆ ಎಫ್ಡಿ ಬಡ್ಡಿ ದರ ಶೇ 7.99 ಎಂದು ನಿಗದಿ ಮಾಡಲಾಗಿದೆ. ಇದು ಹಿರಿಯ ನಾಗರಿಕರು ಮತ್ತು 60 ವರ್ಷ ಮೇಲ್ಪಟ್ಟವರಿಗೆ ಅನ್ವಯಿಸುತ್ತದೆ. ಜತೆಗೆ ಅವರು ಭಾರತೀಯರಾಗಿರಬೇಕು. ಎಫ್ಡಿಗೆ ಅತಿ ಹೆಚ್ಚು ಬಡ್ಡಿ ದರವನ್ನು ನೀಡುತ್ತಿರುವ ಪ್ರಮುಖವಾದ ಸಣ್ಣ ಹಣಕಾಸು ಬ್ಯಾಂಕ್ ಇದು.
ಜೂನ್ 6ರಿಂದ 2 ಕೋಟಿ ರೂ. ಮೇಲ್ಪಟ್ಟ ಎಫ್ಡಿಗೆ ಅನ್ವಯ ಆಗುವ ಬಡ್ಡಿ ದರದ ವಿವರ ಹೀಗಿದೆ:
7ರಿಂದ 14 ದಿನ: ಸಾರ್ವಜನಿಕರು- ಶೇ 3.25, ಹಿರಿಯ ನಾಗರಿಕರು- ಶೇ 3.75
15ರಿಂದ 45 ದಿನ: ಸಾರ್ವಜನಿಕರು- ಶೇ 3.25, ಹಿರಿಯ ನಾಗರಿಕರು- ಶೇ 3.75
46ರಿಂದ 90 ದಿನ: ಸಾರ್ವಜನಿಕರು- ಶೇ 4.25, ಹಿರಿಯ ನಾಗರಿಕರು- ಶೇ 4.75
91 ದಿನದಿಂದ 6 ತಿಂಗಳು: ಸಾರ್ವಜನಿಕರು- ಶೇ 4.75, ಹಿರಿಯ ನಾಗರಿಕರು- ಶೇ 5.25
6 ತಿಂಗಳು ಮೇಲ್ಪಟ್ಟು 9 ತಿಂಗಳ ತನಕ: ಸಾರ್ವಜನಿಕರು- ಶೇ 5.25, ಹಿರಿಯ ನಾಗರಿಕರು- ಶೇ 5.75
9 ತಿಂಗಳು ಮೇಲ್ಪಟ್ಟು 1 ವರ್ಷದೊಳಗೆ: ಸಾರ್ವಜನಿಕರು- ಶೇ 5.75, ಹಿರಿಯ ನಾಗರಿಕರು- ಶೇ 6.25
1 ವರ್ಷದಿಂದ 1 ವರ್ಷ 6 ತಿಂಗಳು: ಸಾರ್ವಜನಿಕರು- ಶೇ 6.50, ಹಿರಿಯ ನಾಗರಿಕರು- ಶೇ 7
1 ವರ್ಷ 6 ತಿಂಗಳಿಂದ 2 ವರ್ಷದೊಳಗೆ: ಸಾರ್ವಜನಿಕರು- ಶೇ 6.50, ಹಿರಿಯ ನಾಗರಿಕರು- ಶೇ 7
2 ವರ್ಷದಿಂದ 998 ದಿನಗಳು: ಸಾರ್ವಜನಿಕರು- ಶೇ 7.49, ಹಿರಿಯ ನಾಗರಿಕರು- ಶೇ 7.99
999 ದಿನಕ್ಕೆ: ಸಾರ್ವಜನಿಕರು- ಶೇ 7.49, ಹಿರಿಯ ನಾಗರಿಕರು- ಶೇ 7.99
1000 ದಿನಗಳಿಂದ 3 ವರ್ಷಗಳ ತನಕ: ಸಾರ್ವಜನಿಕರು- ಶೇ 6.80, ಹಿರಿಯ ನಾಗರಿಕರು- ಶೇ 7
3 ವರ್ಷ ಮೇಲ್ಪಟ್ಟು 5 ವರ್ಷದೊಳಗೆ: ಸಾರ್ವಜನಿಕರು- ಶೇ 6.50, ಹಿರಿಯ ನಾಗರಿಕರು- ಶೇ 7
5 ವರ್ಷಕ್ಕೆ: ಸಾರ್ವಜನಿಕರು- ಶೇ 6.75, ಹಿರಿಯ ನಾಗರಿಕರು- ಶೇ 7.25
5 ವರ್ಷ ಮತ್ತು 10 ವರ್ಷ ಮೇಲ್ಪಟ್ಟು: ಸಾರ್ವಜನಿಕರು- ಶೇ 6, ಹಿರಿಯ ನಾಗರಿಕರು- ಶೇ 6.50
ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಬಡ್ಡಿ ದರಗಳು ಆಯಾ ಸಮಯಕ್ಕೆ ಬದಲಾಗಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: FD Interest Rates: ಎಚ್ಡಿಎಫ್ಸಿ ಬ್ಯಾಂಕ್ Vs ಎಸ್ಬಿಐ Vs ಆಕ್ಸಿಸ್ ಬ್ಯಾಂಕ್ ಎಲ್ಲಿ, ಎಷ್ಟಿದೆ ಎಫ್ಡಿ ಮೇಲೆ ಬಡ್ಡಿ ದರ