PM Kisan eKYC: ಪಿಎಂ ಕಿಸಾನ್ ಇಕೆವೈಸಿ ಪೂರ್ಣಗೊಳಿಸಲು ಜುಲೈ 31ರ ತನಕ ಗಡುವು ವಿಸ್ತರಣೆ

ಪಿಎಂ-ಕಿಸಾನ್ ಸಮ್ಮಾನ್ ಯೋಜನೆ ಇ-ಕೆವೈಸಿಗೆ ಗಡುವನ್ನು ಜುಲೈ 31, 2022ರ ತನಕ ವಿಸ್ತರಣೆ ಮಾಡಲಾಗಿದೆ. ಹೇಗೆ ಈ ಕಾರ್ಯ ಪೂರ್ಣಗೊಳಿಸುವುದು ಎಂಬ ವಿವರ ಇಲ್ಲಿದೆ.

PM Kisan eKYC: ಪಿಎಂ ಕಿಸಾನ್ ಇಕೆವೈಸಿ ಪೂರ್ಣಗೊಳಿಸಲು ಜುಲೈ 31ರ ತನಕ ಗಡುವು ವಿಸ್ತರಣೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Jun 04, 2022 | 3:20 PM

ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ, ಭಾರತ ಸರ್ಕಾರವು ಪಿಎಂ ಕಿಸಾನ್ (PM-Kisan) ಖಾತೆ ಕೆವೈಸಿ ಪೂರ್ತಿ ಮಾಡಲು ಗಡುವನ್ನು ವಿಸ್ತರಿಸಿದೆ. ಕೇಂದ್ರವು 2022ರ ಮೇ 31ರ ಗಡುವನ್ನು ನಿಗದಿಪಡಿಸಿತ್ತು, ಆದರೆ ರೈತರ ಅನುಕೂಲಕ್ಕಾಗಿ 11ನೇ ಕಂತು ರೂ. 2000 ಪಡೆಯಲು ಅದನ್ನು ಈಗ 31ನೇ ಜುಲೈ 2022ರ ವರೆಗೆ ವಿಸ್ತರಿಸಲಾಗಿದೆ. ಪಿಎಂ ಕಿಸಾನ್ ಪೋರ್ಟಲ್ ಪ್ರಕಾರ, “ಪಿಎಂ ಕಿಸಾನ್ ನೋಂದಾಯಿತ ರೈತರಿಗೆ eKYC ಕಡ್ಡಾಯವಾಗಿದೆ. OTP ಆಧಾರಿತ eKYC PMKISAN ಪೋರ್ಟಲ್‌ನಲ್ಲಿ ಲಭ್ಯವಿದೆ ಅಥವಾ ಬಯೋಮೆಟ್ರಿಕ್ ಆಧಾರಿತ eKYCಗಾಗಿ ಹತ್ತಿರದ ಸಿಎಸ್​ಸಿ ಕೇಂದ್ರಗಳನ್ನು ಸಂಪರ್ಕಿಸಬಹುದು. ಎಲ್ಲ ಪಿಎಂಕಿಸಾನ್ ಫಲಾನುಭವಿಗಳಿಗೆ eKYCಯ ಗಡುವನ್ನು 31 ಜುಲೈ 2022ರ ವರೆಗೆ ವಿಸ್ತರಿಸಲಾಗಿದೆ.”

ಕೇಂದ್ರ ಸರ್ಕಾರವು ಇತ್ತೀಚೆಗೆ 10 ಕೋಟಿ ರೈತರಿಗೆ ಸುಮಾರು ರೂ. 21,000 ಕೋಟಿ ಮೊತ್ತವನ್ನು ನಿಗದಿಪಡಿಸುವ ಮೂಲಕ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯ 11ನೇ ಕಂತನ್ನು ಘೋಷಿಸಿತು. ಪ್ರಯೋಜನವನ್ನು ಪಡೆಯಲು ಅರ್ಹರಾಗಲು ರೈತರು ಹೊಸ ಗಡುವಿನೊಳಗೆ ಅಥವಾ ಮೊದಲು ಕೆವೈಸಿ ಮಾನದಂಡಗಳನ್ನು ಪೂರ್ಣಗೊಳಿಸಬೇಕು.

ಪಿಎಂ ಕಿಸಾನ್ ಯೋಜನೆಗಾಗಿ ಇಕೆವೈಸಿ ಪ್ರಕ್ರಿಯೆಯನ್ನು ಹೇಗೆ ಪೂರ್ಣಗೊಳಿಸುವುದು?

1. http://pmkisan.nic.in/ ಗೆ ಭೇಟಿ ನೀಡಿ ಮತ್ತು ‘ಫಾರ್ಮರ್ಸ್ ಕಾರ್ನರ್’ ವಿಭಾಗದ ಅಡಿಯಲ್ಲಿ ‘eKYC’ ಕ್ಲಿಕ್ ಮಾಡಿ.

2. ಈಗ ನಿಮ್ಮನ್ನು ‘OTP ಆಧಾರಿತ Ekyc’ ಪುಟಕ್ಕೆ ಮರು ನಿರ್ದೇಶಿಸಲಾಗುತ್ತದೆ, ಅಲ್ಲಿ ನೀವು ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು ಮತ್ತು ನಂತರ ‘search’ ಕ್ಲಿಕ್ ಮಾಡಿ.

3. ನಿಮ್ಮ ಆಧಾರ್ ಸಂಖ್ಯೆಯನ್ನು ಪ್ರದರ್ಶಿಸಿದ ನಂತರ, ಆಧಾರ್‌ನೊಂದಿಗೆ ಲಿಂಕ್ ಮಾಡಲಾದ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು ನಂತರ ‘Get OTP’ ಕ್ಲಿಕ್ ಮಾಡಿ.

4. ನೀವು ಈಗ ನಿಮ್ಮ ನೋಂದಾಯಿತ ಅಥವಾ ಆಧಾರ್-ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಯಲ್ಲಿ ಒಂದು-ಬಾರಿ ಪಾಸ್‌ವರ್ಡ್ (OTP) ಅನ್ನು ಪಡೆಯುತ್ತೀರಿ, ಅಗತ್ಯವಿರುವ ಕ್ಷೇತ್ರದಲ್ಲಿ OTP ಅನ್ನು ನಮೂದಿಸಿ ಮತ್ತು ಮುಂದುವರಿಯಿರಿ.

5. ಒಮ್ಮೆ OTP ಪರಿಶೀಲಿಸಿದ ನಂತರ, ಎಲ್ಲ ವಿವರಗಳು ಹೊಂದಾಣಿಕೆಯಾದರೆ eKYC ಕಾರ್ಯವು ಯಶಸ್ವಿಯಾಗಿ ಪೂರ್ಣಗೊಳ್ಳುತ್ತದೆ.

ಪಿಎಂ ಕಿಸಾನ್ ಯೋಜನೆಯಡಿ, ಜಮೀನು ಹೊಂದಿರುವ ಪ್ರತಿ ರೈತ ಕುಟುಂಬವು ವರ್ಷಕ್ಕೆ ರೂ. 6000 ನಗದು ಪ್ರಯೋಜನವನ್ನು ಪಡೆಯುತ್ತದೆ. ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೂ. 2000ರಂತೆ ಮೂರು ಸಮಾನ ಕಂತುಗಳಲ್ಲಿ ಪಾವತಿಸಲಾಗುತ್ತದೆ. ಜಮೀನು ಹೊಂದಿರುವ ಎಲ್ಲ ರೈತರ ಕುಟುಂಬಗಳು ತಮ್ಮ ಹೆಸರಿನಲ್ಲಿ ಸಾಗುವಳಿ ಭೂಮಿ ಹೊಂದಿರುವವರು ಯೋಜನೆ ಪ್ರಯೋಜನಗಳಿಗೆ ಅರ್ಹರಾಗಿರುತ್ತಾರೆ. ಯಾವುದೇ ಕಾರಣಕ್ಕೂ ರೈತರು eKYC ಪೂರ್ಣಗೊಳಿಸಿದ ನಂತರ ಕಂತು ಪಡೆಯದಿದ್ದರೆ ಅವರು ಪಿಎಂ ಕಿಸಾನ್ ಸಹಾಯವಾಣಿ 011-24300606 ಅಥವಾ ಪಿಎಂ ಕಿಸಾನ್ ಟೋಲ್ ಫ್ರೀ ಸಂಖ್ಯೆ 18001155266ಗೆ ಸಂಪರ್ಕಿಸಬಹುದು ಅಥವಾ pmkisan-ict@gov.in ಮತ್ತು pmkisan- fund@gov.inಗೆ ಇಮೇಲ್ ಕಳುಹಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ