ನಾಲ್ವರು ಪಾಕಿಸ್ತಾನಿ ಮೀನುಗಾರರನ್ನು ಬಂಧಿಸಿದ ಗಡಿ ಭದ್ರತಾ ಪಡೆ

ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಗುರುವಾರ ಮುಂಜಾನೆ ಕಚ್ ಬಳಿ ಭಾರತ-ಪಾಕಿಸ್ತಾನ ಕಡಲ ಗಡಿಯಲ್ಲಿ ನಾಲ್ವರು ಪಾಕಿಸ್ತಾನಿ ಮೀನುಗಾರರನ್ನು ಬಂಧಿಸಿದೆ ಮತ್ತು 10 ಪಾಕಿಸ್ತಾನದ ದೋಣಿಗಳನ್ನು ವಶಪಡಿಸಿಕೊಂಡಿದೆ.

ನಾಲ್ವರು ಪಾಕಿಸ್ತಾನಿ ಮೀನುಗಾರರನ್ನು ಬಂಧಿಸಿದ ಗಡಿ ಭದ್ರತಾ ಪಡೆ
Border Security Force
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Jul 07, 2022 | 11:31 AM

ಗುಜರಾತ್: ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಗುರುವಾರ ಮುಂಜಾನೆ ಕಚ್ ಬಳಿ ಭಾರತ-ಪಾಕಿಸ್ತಾನ ಕಡಲ ಗಡಿಯಲ್ಲಿ ನಾಲ್ವರು ಪಾಕಿಸ್ತಾನಿ ಮೀನುಗಾರರನ್ನು ಬಂಧಿಸಿದೆ ಮತ್ತು 10 ಪಾಕಿಸ್ತಾನದ ದೋಣಿಗಳನ್ನು ವಶಪಡಿಸಿಕೊಂಡಿದೆ. ಗುಜರಾತ್‌ನ ಕಚ್ ಜಿಲ್ಲೆಯ ಗಡಿಯ ಸಮೀಪವಿರುವ ಹರಾಮಿ ನಲ್ಲಾದ  ಕಾಲುವೆಗಳ ಮೂಲಕ ಭಾರತದ ಭೂಪ್ರದೇಶಕ್ಕೆ ನುಸುಳುತ್ತಿದ್ದಾಗ BSF ಭುಜ್‌ನ ವಿಶೇಷ ತಂಡವು ನಾಲ್ವರು ಪಾಕಿಸ್ತಾನಿ ಮೀನುಗಾರರನ್ನು ಬಂಧಿಸಿ 10 ಪಾಕಿಸ್ತಾನದ ಮೀನುಗಾರಿಕೆ ದೋಣಿಗಳನ್ನು ವಶಪಡಿಸಿಕೊಂಡಿದೆ ಎಂದು ಬಿಎಸ್‌ಎಫ್ ಹೇಳಿಕೆಯಲ್ಲಿ ತಿಳಿಸಿದೆ.

BSF ಭುಜ್‌ನ ವಿಶೇಷ  ತಂಡವು ಬಾರ್ಡರ್ ಪೋಸ್ಟ್ ಸಂಖ್ಯೆ. 1165 ಮತ್ತು 1166 ನಡುವಿನ ಚಲನೆಯನ್ನು ಗಮನಿಸಿತು ಮತ್ತು ಪ್ರದೇಶವನ್ನು ಸುತ್ತುವರೆದಿದೆ. ಈ ಪ್ರದೇಶದಲ್ಲಿ ಶೋಧ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದೆ. ವಶಪಡಿಸಿಕೊಂಡ ನಂತರ, BSF ಗಸ್ತು ತಂಡಗಳು ನೆರೆಯ ದೇಶದಿಂದ ಅಂತಹ ಯಾವುದೇ ದೋಣಿಗಳು ಭಾರತದ ಜಲಭಾಗವನ್ನು ಪ್ರವೇಶಿಸಿವೆಯೇ ಎಂದು  ಕಾರ್ಯಾಚರಣೆಯನ್ನು ನಡೆಸಿದೆ.

ಮೀನುಗಾರಿಕೆ ದೋಣಿಗಳಿಂದ ಅನುಮಾನಾಸ್ಪದ ವಸ್ತುಗಳು ಏನೂ ಪತ್ತೆಯಾಗಿಲ್ಲ ಎಂದು  ಅಧಿಕಾರಿಗಳು ತಿಳಿಸಿದ್ದಾರೆ.   ಅಂತರರಾಷ್ಟ್ರೀಯ ಗಡಿಯನ್ನು (ಐಬಿ) ದಾಟಿದ ಮೂರು ವರ್ಷದ ಪಾಕಿಸ್ತಾನಿ ಮಗುವನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ನೆರೆಯ ದೇಶದ ಭದ್ರತಾ ಸಿಬ್ಬಂದಿಗೆ ಹಸ್ತಾಂತರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನು ಓದಿ: ಭಾರತದ ಗಡಿ ದಾಟಿದ ಪಾಕಿಸ್ತಾನಿ ಬಾಲಕನನ್ನು ಆತನ ತಂದೆಗೆ ಒಪ್ಪಿಸಿದ ಭಾರತ ಬಿಎಸ್‌ಎಫ್ ಪಡೆ

ಶುಕ್ರವಾರ ರಾತ್ರಿ 7:15 ರ ಸುಮಾರಿಗೆ, 182 ಬಿಎನ್ ಬಿಎಸ್ಎಫ್, ಫಿರೋಜ್‌ಪುರ ಸೆಕ್ಟರ್‌ನ ಪಡೆಗಳು ಸುಮಾರು 3 ವರ್ಷ ವಯಸ್ಸಿನ ಒಬ್ಬ ಪಾಕಿಸ್ತಾನಿ ಮಗುವನ್ನು ಗಡಿ ದಾಟಿ ಭಾರತದ ಪ್ರದೇಶಕ್ಕೆ ಪ್ರವೇಶಿಸಿದಾಗ ಬಂಧಿಸಿವೆ ಎಂದು ಬಿಎಸ್‌ಎಫ್ ಮಾಹಿತಿ ನೀಡಿದೆ.ಇದು ಅಚಾತುರ್ಯದಿಂದ ದಾಟಿದ ಪ್ರಕರಣವಾದ್ದರಿಂದ, BSF  ಪಾಕ್ ರೇಂಜರ್‌ಗಳನ್ನು ಸಂಪರ್ಕ ಮಾಡಿ  ರಾತ್ರಿ 9:45 ರ ಸುಮಾರಿಗೆ, ಪಾಕಿಸ್ತಾನಿ ಮಗುವನ್ನು ಸದ್ಭಾವನೆಯ ಸೂಚಕವಾಗಿ ಮತ್ತು ಮಾನವೀಯ ನೆಲೆಯಲ್ಲಿ ಪಾಕ್ ರೇಂಜರ್‌ಗಳಿಗೆ ಹಸ್ತಾಂತರಿಸಲಾಗಿದೆ ಎಂದು ಹೇಳಿದರು.

Published On - 11:30 am, Thu, 7 July 22