ಭಾರತದ ಗಡಿ ದಾಟಿದ ಪಾಕಿಸ್ತಾನಿ ಬಾಲಕನನ್ನು ಆತನ ತಂದೆಗೆ ಒಪ್ಪಿಸಿದ ಭಾರತ ಬಿಎಸ್‌ಎಫ್ ಪಡೆ

ಮಗುವೊಂದು ಆಟವಾಡುತ್ತ ಪಂಜಾಬ್‌ನ ಅಂತರರಾಷ್ಟ್ರೀಯ ಗಡಿ (ಐಬಿ) ದಾಟಿದ ಮೂರು ವರ್ಷದ ಪಾಕಿಸ್ತಾನಿ ಬಾಲಕನನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಆತನ ಕುಟುಂಬಕ್ಕೆ ಹಸ್ತಾಂತರಿಸಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಭಾರತದ ಗಡಿ ದಾಟಿದ ಪಾಕಿಸ್ತಾನಿ ಬಾಲಕನನ್ನು ಆತನ ತಂದೆಗೆ ಒಪ್ಪಿಸಿದ ಭಾರತ ಬಿಎಸ್‌ಎಫ್ ಪಡೆ
Indian BSF
TV9kannada Web Team

| Edited By: ಅಕ್ಷಯ್​ ಕುಮಾರ್​​

Jul 02, 2022 | 11:58 AM

ಚಂಡೀಗಢ: ಮಗುವೊಂದು ಆಟವಾಡುತ್ತ ಪಂಜಾಬ್‌ನ ಅಂತರರಾಷ್ಟ್ರೀಯ ಗಡಿ (ಐಬಿ) ದಾಟಿದ ಮೂರು ವರ್ಷದ ಪಾಕಿಸ್ತಾನಿ ಬಾಲಕನನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಆತನ ಕುಟುಂಬಕ್ಕೆ ಹಸ್ತಾಂತರಿಸಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಶುಕ್ರವಾರ ಸಂಜೆ 7 ಗಂಟೆ ಸುಮಾರಿಗೆ ರಾಜ್ಯದ ಫಿರೋಜ್‌ಪುರ ಸೆಕ್ಟರ್‌ನಲ್ಲಿ ಈ ಘಟನೆ ವರದಿಯಾಗಿದ್ದು, ಗಡಿ ಭದ್ರತಾ ಪಡೆಯ ಪಡೆಗಳು ಐಬಿ ಬೇಲಿ ಬಳಿ ಅಳುತ್ತಿದ್ದ ಮಗುವನ್ನು ಗಮನಿಸಿದೆ.

ಮಗು ಅಳುತ್ತಲೇ ತನ್ನ ತಂದೆಗೆ ಕರೆ ಮಾಡಿತು, ಅದರ ನಂತರ ಬಿಎಸ್‌ಎಫ್ ಫೀಲ್ಡ್ ಕಮಾಂಡರ್ ಪಾಕಿಸ್ತಾನಿ ರೇಂಜರ್‌ಗಳೊಂದಿಗೆ ತಕ್ಷಣದ ಫ್ಲ್ಯಾಗ್ ಮೀಟಿಂಗ್ ಅನ್ನು ಮಾಡಿದ್ದಾರೆ. ನಂತರದಲ್ಲಿ ಆ ಹುಡುಗನನ್ನು ಪಾಕಿಸ್ತಾನಕ್ಕೆ ಒಪ್ಪಿಸುವಂತೆ ಹೇಳಿದೆ.

ಸ್ವಲ್ಪ ಸಮಯದ ನಂತರ ಮಗುವನ್ನು ಅವನ ತಂದೆಯ ಸಮ್ಮುಖದಲ್ಲಿ ರೇಂಜರ್‌ಗಳಿಗೆ ಹಸ್ತಾಂತರಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ANI ವರದಿ ಮಾಡಿದೆ.

ಇದನ್ನು ಓದಿ: ಜಗತ್ತಿನ 5 ಬಲಿಷ್ಠ ಸೈನಿಕ ಪಡೆಗಳು ಇಲ್ಲಿವೆ

ಇದನ್ನೂ ಓದಿ

Follow us on

Related Stories

Most Read Stories

Click on your DTH Provider to Add TV9 Kannada