ಶಿಕ್ಷೆಯ ಭಾಗವಾಗಿ ಕೆಲ್ಲಿಯನ್ನು ಸೂಸೈಡ್ ವಾಚ್‌ನಲ್ಲಿ ಇಟ್ಟಿರುವುದಕ್ಕೆ ಅವರ ವಕೀಲರು ಜೈಲು ಪ್ರಾಧಿಕಾರದ ವಿರುದ್ಧ ದಾವೆ ಹೂಡಿದ್ದಾರೆ
ಕೋರ್ಟ್ನ ದಾಖಲಾತಿಗಳ ಪ್ರಕಾರ ಶಿಕ್ಷೆಯನ್ನು ಪ್ರಕಟಿಸುವ ಮೊದಲು ಮತ್ತು ನಂತರ ಕೆಲ್ಲಿ ಮಾನಸಿಕವಾಗಿ ಸ್ಥಿರವಾಗಿದ್ದರು ಮತ್ತು ಅವರನ್ನು ಸೂಸೈಡ್ ವಾಚ್ ಅಡಿಯಲ್ಲಿ ಇಡಬೇಕೆನಿಸುವ ಯಾವ ಲಕ್ಷಣವೂ ಕಾಣಿಸಿರಲಿಲ್ಲ.
New York: ಪ್ರಖ್ಯಾತ ಗಾಯಕ ಆರ್ ಕೆಲ್ಲಿಯನ್ನು (R Kelly) ಲೈಂಗಿಕ ಹಗರಣ ಪ್ರಕರಗಳಲ್ಲಿ 30 ವರ್ಷಗಳ ಸೆರೆವಾಸದ ಶಿಕ್ಷೆಯನ್ನು ಪ್ರಕಟಿಸಿದ ಬಳಿಕ ಅವರ ವಕೀಲರು ಜೈಲಿನಲ್ಲಿ ಕೈಲಿ ಅತ್ಮಹತ್ಯೆಗೆ ಪ್ರಯತ್ನಿಸದ ಹಾಗೆ ಕಾನೂನುಬಾಹಿರವಾಗಿ ಮತ್ತು ಶಿಕ್ಷೆಯ ಭಾಗವಾಗಿ ನಿಗ್ರಾಣಿಯಲ್ಲಿ (ಸೂಸೈಡ್ ವಾಚ್) ಇಟ್ಟಿದ್ದಕ್ಕೆ ಫೆಡರಲ್ ಜೈಲು (federal prison) ಪ್ರಾಧಿಕಾರ ಮತ್ತು ಅದರ ಅಧಿಕಾರಿಗಳ ವಿರುದ್ಧ ಮೊಕದ್ದಮೆ ಹೂಡಿದ್ದಾರೆ. ನ್ಯೂ ಯಾರ್ಕ್ ನಗರಕ್ಕೆ ಹತ್ತಿರದ ಬ್ರೂಕ್ಲಿನ್ ಮೆಟ್ರೋಪಾಲಿಟನ್ ಸೆರೆಮನೆಯಲ್ಲಿ (Brooklyn Metropolitan Prison) 55-ವರ್ಷ ವಯಸ್ಸಿನ ಗಾಯಕನನ್ನು ಸೂಸೈಡ್ ವಾಚ್ ಅಡಿ ಇಡುವುದಕ್ಕೆ ಪೂರಕವೆನಿಸುವ ಯಾವ ಕಾರಣವೂ ಇಲ್ಲ. ಹಾಗೆ ಮಾಡಿದ್ದು ಕೆಲ್ಲಿ ಮೇಲೆ ಬಹಳ ಕೆಟ್ಟ ಪರಿಣಾಮ ಬೀರಿದೆ ಎಂದು ಅವರ ವಕೀಲರು ವಾದಿಸಿದ್ದಾರೆ.
ಕೋರ್ಟ್ನ ದಾಖಲಾತಿಗಳ ಪ್ರಕಾರ ಶಿಕ್ಷೆಯನ್ನು ಪ್ರಕಟಿಸುವ ಮೊದಲು ಮತ್ತು ನಂತರ ಕೆಲ್ಲಿ ಮಾನಸಿಕವಾಗಿ ಸ್ಥಿರವಾಗಿದ್ದರು ಮತ್ತು ಅವರನ್ನು ಸೂಸೈಡ್ ವಾಚ್ ಅಡಿಯಲ್ಲಿ ಇಡಬೇಕೆನಿಸುವ ಯಾವ ಲಕ್ಷಣವೂ ಕಾಣಿಸಿರಲಿಲ್ಲ.
‘ಆತ್ಮಹತ್ಯೆ ಮಾಡಿಕೊಳ್ಳಬೇಕೆನ್ನುವ ಯೋಚನೆ ನನ್ನಲ್ಲಿ ಯಾವತ್ತೂ ಹುಟ್ಟಿಲ್ಲ, ಆದರೆ ಎಮ್ ಡಿ ಸಿ ನನ್ನನ್ನು ಆತ್ಮಹತ್ಯೆ ನಿಗ್ರಾಣಿಯಲ್ಲಿಟ್ಟಿದ್ದು ಮಾನಸಿಕವಾಗಿ ಬಹಳ ಯಾತನೆ ನೀಡಿದೆ, ಎಂದು ಮಿಸ್ಟರ್ ಕೆಲ್ಲಿ ನನಗೆ ಹೇಳಿದರೆಂದು, ಪ್ರಕರಣಕ್ಕೆ ಸಂಬಧಿಸಿದ ದಾಖಲಾತಿಗಳೊಂದಿಗೆ ಲಗತ್ತಿಸಲಾಗಿರುವ ಅಫಿಡವಿಟ್ನಲ್ಲಿ ಕೆಲ್ಲಿ ಅವರ ವಕೀಲರು ಹೇಳಿದ್ದಾರೆ. ಸೂಸೈಡ್ ವಾಚ್ ನಲ್ಲಿರುವುದು ನನಗಿಷ್ಟವಿಲ್ಲ, ನನಗೆ ಅಂಥ ಯೋಚನೆ ಬರುವುದು ಸಾಧ್ಯವೇ ಇಲ್ಲ. ನನ್ನನ್ನು ಹಿಂಸಿಸಿಕೊಳ್ಳುವುದು ಅಥವಾ ಬೇರೆಯವರನ್ನು ಹಿಂಸಿಸುವುದನ್ನು ನಾನ್ಯಾವತ್ತೂ ಮಾಡಲಾರೆ, ಅಂತ ಕೆಲ್ಲಿ ನನಗೆ ಹಲವಾರು ಬಾರಿ ಹೇಳಿದ್ದರು.’ ಎಂದು, ವಕೀಲರು ಆಫಿಡವಿಟ್ ನಲ್ಲಿ ಹೇಳಿದ್ದಾರೆ.
ಸೂಸೈಡ್ ವಾಚ್ ಗೆ ಕೆಲ್ಲಿಯನ್ನು ಕಳಿಸದಂತಾಗಬೇಕಾದರೆ, ಶಿಕ್ಷೆ ಪ್ರಕಟವಾದ ಬಳಿಕ ಜೈಲಿನ ಸೆಲ್ ಗೆ ಹೋದ ಕೂಡಲೇ ತಮಗೆ ಈಮೇಲ್ ಮಾಡುವಂತೆ ಅವರಿಗೆ ತಾವು ಸಲಹೆ ನೀಡಿದ್ದೆವು ಅಂತ ಅವರ ವಕೀಲರು ಅಫಿಡವಿಟ್ ನಲ್ಲಿ ಹೇಳಿದ್ದಾರೆ. ಆದರೆ, ಅವರು ನಮಗೆ ಮೇಲ್ ಮಾಡದೆ ಹೋದಾಗ ಅವರನ್ನು ಸಂಪರ್ಕಿಸುವ ನಮ್ಮ ಎಲ್ಲ ಪ್ರಯತ್ನಗಳು ವ್ಯರ್ಥಗೊಂಡವು. ಅವರು ಹೇಗಿದ್ದಾರೆ ಅನ್ನೋದು ಗೊತ್ತಾಗಂಥ ಸ್ಥಿತಿಯಲ್ಲಿ ನಾವಿದ್ದಾಗ ಎರಡು ದಿನ ಬಳಿಕ ಅವರನ್ನು ಸೂಸೈಡ್ ವಾಚ್ ನಲ್ಲಿ ಇಡಲಾಗಿದೆಯೆಂದು ಒಬ್ಬ ಪ್ರಾಸಿಕ್ಯೂಟರ್ ನಮಗೆ ತಿಳಿಸಿದರು.
ಕೆಲ್ಲಿಯನ್ನು ಅವರ ವಯಸ್ಸು, ನಡೆಸಿದ ಅಪರಾಧ, ಪ್ರಚಾರ ಮತ್ತು ಶಿಕ್ಷೆಯ ಪ್ರಮಾಣ ಮೊದಲಾದ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ಸೂಸೈಡ್ ವಾಚ್ ನಲ್ಲಿ ಇಡಲಾಗಿದೆ ಅಂತ ಎಮ್ ಡಿ ಸಿಯ ಲೀಗಲ್ ತಂಡ ತನಗೆ ತಿಳಿಸಿದೆ ಎಂದು ಪ್ರಾಸಿಕ್ಯೂಟರ್ ಗಾಯಕನ ಲೀಗಲ್ ತಂಡಕ್ಕೆ ತಿಳಿಸಿದ್ದಾರೆ.
ಈ ಎಲ್ಲ ವಿವರಣೆಗಳ ಹಿನ್ನೆಲೆಯಿಂದ ನೋಡುವುದಾದರೆ ಕೆಲ್ಲಿಯನ್ನು ಸೂಸೈಡ್ ವಾಚ್‌ನಲ್ಲಿ ಇರಿಸಲು ನೀಡಿರುವ ಕಾರಣಗಳು ಸಮರ್ಥನೆಗೆ ಸಿಗುವುದಿಲ್ಲ ಮತ್ತು ಅವರ ವ್ಯಕ್ತಿತ್ವದೊಂದಿಗೆ ತಾಳೆಯಾಗುವುದಿಲ್ಲ, ಅಷ್ಟ್ಯಾಕೆ ಅವರು ಆತ್ಮಹತ್ಯೆ ಮಾಡಿಕೊಳ್ಳುವ ರಿಸ್ಕ್ ನಲ್ಲಿದ್ದಾರೆ ಎಂಬ ಅಂಶವನ್ನು ಸಹ ಸೂಚಿಸುವುದಿಲ್ಲ, ಎಂದು ಕೆಲ್ಲಿ ವಕೀಲರು ದಾಖಲಿಸಿರುವ ಮೊಕದ್ದಮೆ ಹೇಳಲಾಗಿದೆ.
ಮೊಕದ್ದಮೆಯಲ್ಲಿ ಕೆಲ್ಲಿಯವರನ್ನು ‘ಸಂಪೂರ್ಣವಾಗಿ ಶಿಕ್ಷಾರ್ಹ ಕಾರಣಗಳಿಗಾಗಿ’ ಸೂಸೈಡ್ ವಾಚ್ ನಲ್ಲಿ ಇರಿಸಲಾಗಿದೆ ಎಂದು ಆರೋಪಿಸಲಾಗಿದೆ. ಎಮ್ ಡಿಸಿ ಸೌಲಭ್ಯಗಳು ‘ಹೈಪ್ರೊಫೈಲ್ ವ್ಯಕ್ತಿಗಳನ್ನು ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿ ಹೊಂದಿರಲಿ ಅಥವಾ ಇಲ್ಲದಿರಲಿ ಸೂಸೈಡ್ ವಾಚ್ ಕಠಿಣ ಸ್ಥಿತಿಗಳ ಅಡಿಯಲ್ಲಿ ಇರಿಸುವ ನೀತಿಯನ್ನು ಹೊಂದಿವೆ’ ಎಂದು ಅದು ಆರೋಪಿಸಲಾಗಿದೆ. ಘಿಸ್ಲೇನ್ ಮ್ಯಾಕ್ಸ್‌ವೆಲ್ ಅವರ ಕಾನೂನು ತಂಡ ಸಹ ಇತ್ತೀಚೆಗೆ ಇದೇ ರೀತಿಯ ಆರೋಪಗಳನ್ನು ಮಾಡಿತ್ತು.
ಆತ್ಮಹತ್ಯೆ ಮಾಡಿಕೊಳ್ಳುವ ಪ್ರವತ್ತಿ ಅಥವಾ ಮನಸ್ಥಿತಿ ಒಬ್ಮ ಕೈದಿಯಲ್ಲಿ ಕಂಡುಬಂದರೆ ಅಂಥವರಿಗೆ ಸೂಸೈಡ್ ವಾಚ್ ಸೂಕ್ತವಾಗಿರಬಹುದು ಎಂದು ಹೇಳಿರುವ ಕೆಲ್ಲಿ ವಕೀಲರು, ಆತ್ಮಹತ್ಯೆ ಪ್ರವೃತ್ತಿ ಇರದ ಜನರಿಗೆ ಪರಿಸ್ಥಿತಿಗಳು ಕ್ರೂರ ಮತ್ತು ಅಸಂವೈಧಾನಿಕ ಅನಿಸುತ್ತವೆ ಎಂದಿದ್ದಾರೆ. ಸೂಸೈಡ್ ವಾಚ್ನಲ್ಲಿರುವ ಕೈದಿಗಳಿಗೆ ಸರಕು ಸಾಗಾಣಿಕೆಯಲ್ಲಿ ಬಳಸುವ ತಾರ್ಪಲೀನ್ ನಂಥ ವಸ್ತುವಿನಿಂದ ಮಾಡಿದ ಬಟ್ಟೆಗಳನ್ನು ಉಡಲು ನೀಡಲಾಗುತ್ತದೆ. ಸ್ನಾನ ಮಾಡಲು ಅಥವಾ ಕ್ಷೌರ ಮಾಡಿಕೊಳ್ಳಲು ಅವರಿಗೆ ಅವಕಾಶವಿರುವುದಿಲ್ಲ. ಚಮಚ ಮತ್ತು ಫೋರ್ಕ್ಗಳನ್ನು ಬಳಸದೆ ತಮ್ಮ ಕೈಗಳಿಂದ ಉಣ್ಣುವಂತೆ ಬಲವಂತಪಡಿಸಲಾಗುತ್ತದೆ.
ಕುಟುಂಬದವರೊಂದಿಗೆ ಭೇಟಿಯ ಅವಕಾಶ ನಿರಾಕರಿಸಲಾಗುತ್ತದೆ ಮತ್ತು ಇತರ ಸಪೋರ್ಟ್ ಸಿಸ್ಟಮ್ ನಿಂದ ಅವರನ್ನು ವಂಚಿಸಲಾಗುತ್ತದೆ, ಎಂದು ಕೆಲ್ಲಿ ವಕೀಲರು ತಮ್ಮ ದಾವೆಯಲ್ಲಿ ಹೇಳಿದ್ದಾರೆ.
ಸಿಬಿಎಸ್ ನ್ಯೂಸ್ ಸಂಸ್ಥೆಯು ಮೆಟ್ರೋಪಾಲಿಟನ್ ಡಿಪಾರ್ಟ್ಮೆಂಟ್ ಆಫ್ ಕರೆಕ್ಷನ್ಸ್ ನ ಪ್ರತಿಕ್ರಿಯೆ ಪಡೆಯಲು ತೆರಳಿದಾಗ ಫೆಡರಲ್ ಬ್ಯೂರೋ ಆಫ್ ಪ್ರಿಸನ್ ಗೆ ಹೋಗಲು ಅದಕ್ಕೆ ನಿರ್ದೇಶಿಸಲಾಗಿದೆ. ಬ್ಯೂರೋ ಪ್ರಕರಣದ ಕುರಿತು ಪ್ರತಿಕ್ರಿಯಿಸಲು ಅಥವಾ ಸುರಕ್ಷತೆ ಮತ್ತು ಭದ್ರತಾ ಕಾರಣಗಳನ್ನು ಉಲ್ಲೇಖಿಸಿ ಕೆಲ್ಲಿ ಇರುವ ಸ್ಥಳದ ಬಗ್ಗೆ ಮಾಹಿತಿಯನ್ನು ನೀಡಲು ನಿರಾಕರಿಸಿತು. ಆದರೆ ಕೈದಿಗಳನ್ನು ಸೂಸೈಡ್ ವಾಚ್‌ನಲ್ಲಿ ಇರಿಸುವ ನೀತಿಗೆ ಲಿಂಕ್ ಒದಗಿಸಿತು.
‘ಬ್ಯೂರೋ ಆಫ್ ಪ್ರಿಸನ್ ತನ್ನ ಅಧೀನದಲ್ಲಿರುವ ಎಲ್ಲ ಕೈದಿಗಳ ಸುರಕ್ಷತೆ ಮತ್ತು ಭದ್ರತೆ ನೋಡಿಕೊಳ್ಳಲು ಬದ್ಧವಾಗಿದೆ’ ಅಂತ ಬ್ಯೂರೋ ಸಿಬಿಎಸ್ ನ್ಯೂಸ್ಗೆ ಹೇಳಿದೆ. ‘ನಮ್ಮಲ್ಲಿರುವ ಪ್ರತಿಯೊಬ್ಬ ಪುರುಷ ಮತ್ತು ಮಹಿಳಾ ಕೈದಿಯನ್ನು ಮಾನವೀಯತೆಯಿಂದ ನೋಡಿಕೊಳ್ಳುವುದು ನಮ್ಮ ದ್ಯೇಯವಾಗಿದೆ ಮತ್ತು ಪ್ರಥಮ ಆದ್ಯತೆಯಾಗಿದೆ’ ಎಂದು ಬಿಒಪಿ ಹೇಳಿದೆ.