AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಹೆಸರಲ್ಲಿ ಕೋಟಿ ಕೋಟಿ ರೂ. ಅಕ್ರಮ ಆಸ್ತಿ ಪತ್ತೆ!

ತನಿಖೆ ವೇಳೆ ಶಾಸಕ ಕೋಟಿ ಕೋಟಿ ರೂ ಮೌಲ್ಯದ ಅಕ್ರಮ ಆಸ್ತಿ ಹೊಂದಿರುವುದು ಪತ್ತೆಯಾಗಿದೆ. ಈ ಹಿಂದೆ ದಾಳಿ ನಡೆಸಿದ್ದ ಇಡಿ ಆಸ್ತಿ ಕುರಿತು ವರದಿ ನೀಡಿತ್ತು.

ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಹೆಸರಲ್ಲಿ ಕೋಟಿ ಕೋಟಿ ರೂ. ಅಕ್ರಮ ಆಸ್ತಿ ಪತ್ತೆ!
ಜಮೀರ್ ಅಹ್ಮದ್ ನಿವಾಸ, ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು
Follow us
TV9 Web
| Updated By: sandhya thejappa

Updated on:Jul 07, 2022 | 9:52 AM

ಬೆಂಗಳೂರು: ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ (Zameer Ahmed Khan) ಅವರು ಅಕ್ರಮ (Illegal) ಆಸ್ತಿ ಹೊಂದಿರುವುದು ಪತ್ತೆಯಾಗಿದೆ. ಜುಲೈ 5ರಂದು ಜಮೀರ್ ಮನೆ, ಕಚೇರಿ ಸೇರಿ ಒಟ್ಟು ಐದು ಕಡೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ದಾಳಿ ವೇಳೆ ಅಗತ್ಯ ದಾಖಲೆಗಳನ್ನ ಕೊಂಡೊಯ್ದಿದ್ದರು. ತನಿಖೆ ವೇಳೆ ಶಾಸಕ ಕೋಟಿ ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಹೊಂದಿರುವುದು ಪತ್ತೆಯಾಗಿದೆ. ಈ ಹಿಂದೆ ದಾಳಿ ನಡೆಸಿದ್ದ ಇಡಿ ಆಸ್ತಿ ಕುರಿತು ವರದಿ ನೀಡಿತ್ತು. ಇಡಿ ಶಿಫಾರಸಿನಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು.

ಬರೋಬ್ಬರಿ 87,44,05,057 ರೂಪಾಯಿ (87 ಕೋಟಿ) ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ. ಈಗಾಗಲೇ ಎಸಿಬಿ ಅಕ್ರಮ ಆಸ್ತಿ ಗಳಿಕೆ ಪ್ರಕರಣ ದಾಖಲಿಸಿಕೊಂಡಿದೆ. ಜೊತೆಗೆ ಅಧಿಕಾರಿಗಳು ಕೆಲ ದಾಖಲೆಗಳನ್ನ ವಶಕ್ಕೆ ಪಡೆದಿದ್ದಾರೆ. ಪ್ರಕರಣ ಸಂಬಂಧ ತನಿಖೆ ಮುಂದುವರೆದಿದೆ.

ಅಸಮತೋಲನ ಆಸ್ತಿ ಗಳಿಕೆ ಆರೋಪದಡಿ 85 ಎಸಿಬಿ ಅಧಿಕಾರಿಗಳು 5 ತಂಡಗಳಿಂದ ದಾಳಿ ನಡೆಸಿದ್ದರು. 8 ಗಂಟೆ ಕಾಲ ಸುದೀರ್ಘ ಶೋಧಕಾರ್ಯ ನಡೆಸಿ ಹಲವು ದಾಖಲೆಗಳನ್ನು ವಶಕ್ಕೆ ಪಡೆದಿದ್ದರು.

ಇದನ್ನೂ ಓದಿ
Image
ಮಂಡ್ಯ: ಪತಿಯನ್ನ ಕೊಂದು ಪೊಲೀಸರಿಗೆ ದೂರು ಕೊಟ್ಟ ಹಂತಕಿ ಪತ್ನಿ ಅಂದರ್
Image
ಸಿಂಗಪೂರ್: ಗೆಳೆಯನ ಗರ್ಲ್​ಫ್ರೆಂಡನ್ನು ರೇಪ್ ಮಾಡಿದ್ದ ಭಾರತೀಯ ಮೂಲದ ವ್ಯಕ್ತಿಯ ಶಿಕ್ಷೆಯನ್ನು ಅಲ್ಲಿನ ಟಾಪ್ ಕೋರ್ಟ್ ತಗ್ಗಿಸಿದೆ
Image
Rashmika Mandanna: ಕೇಳಿಬರ್ತಿದೆ ರಶ್ಮಿಕಾ-ವಿಜಯ್​ ದೇವರಕೊಂಡ ಫ್ಯಾನ್ಸ್​ ಖುಷಿಪಡುವ ಸುದ್ದಿ; ಅಧಿಕೃತ ಆಗೋದಷ್ಟೇ ಬಾಕಿ
Image
ಬಾಗಲಕೋಟೆ: ಕೆರೂರಿನಲ್ಲಿ ಹಿಂದೂ-ಮುಸ್ಲಿಂ ಯುವಕರ ಘರ್ಷಣೆ, ಉದ್ವಿಗ್ನ ವಾತಾವರಣ, ಶಾಲೆಗಳಿಗೆ ರಜೆ

ಇದನ್ನೂ ಓದಿ: ತಂದೆ ‘ಟೈಗರ್​’ ಪ್ರಭಾಕರ್​ ಹೆಸರಿನಲ್ಲಿ ನಿರ್ಮಾಣ ಸಂಸ್ಥೆ ಆರಂಭಿಸಿದ ವಿನೋದ್​ ಪ್ರಭಾಕರ್​ಗೆ ರವಿಚಂದ್ರನ್​ ವಿಶ್​

ಎಲ್ಲೆಲ್ಲೆ ಎಸಿಬಿ ರೇಡ್‌: ಕಂಟೋನ್ಮೆಂಟ್ ರೈಲ್ವೆ ಸ್ಟೇಷನ್ ಬಳಿಯ ನಿವಾಸ, ಸಿಲ್ವರ್ ಓಕ್‌ ಅಪಾರ್ಟ್‌ಮೆಂಟ್‌ ಫ್ಲ್ಯಾಟ್, ಸದಾಶಿವನಗರದ ಗೆಸ್ಟ್‌ಹೌಸ್, ಬನಶಂಕರಿಯ ಜಿ.ಕೆ.ಅಸೋಸಿಯೇಟ್ಸ್ ಕಚೇರಿ,  ಕಲಾಸಿಪಾಳ್ಯದ ಟ್ರಾವೆಲ್ಸ್ ಕಚೇರಿ ಸೇರಿ ಒಟ್ಟು 5 ಕಡೆ ಎಸಿಬಿ ದಾಳಿ ನಡೆದಿತ್ತು.

25 ಬುಲೆಟ್‌ಗಳು ಪತ್ತೆ: ಇನ್ನು ದಾಳಿ ವೇಳೆ ಬೆಂಗಳೂರಿನ ವಿಠ್ಠಲ್ ಮಲ್ಯ ರಸ್ತೆಯಲ್ಲಿರುವ ಸಿಲ್ವರ್ ಓಕ್ ಅಪಾರ್ಟ್​ಮೆಂಟ್​ನಲ್ಲಿ 24 ಜೀವಂತ ಗುಂಡುಗಳು ಪತ್ತೆಯಾಗಿದ್ದವು. ಹಾಗೂ 1 ಖಾಲಿ ಬುಲೆಟ್ ಪತ್ತೆಯಾಗಿತ್ತು.

ಇದನ್ನೂ ಓದಿ: Rain Updates: ಭಾರೀ ಮಳೆಯಿಂದ ಮಹಾರಾಷ್ಟ್ರ, ಗೋವಾದ ಜಿಲ್ಲೆಗಳಿಗೆ ರೆಡ್ ಅಲರ್ಟ್​ ಘೋಷಣೆ

Published On - 8:52 am, Thu, 7 July 22