
ಬೆಂಗಳೂರು, ಅಕ್ಟೋಬರ್ 07: ರಾಜ್ಯದ ಜನತೆಗೆ ಒಂದಾದ ಮೇಲೊಂದು ಬೆಲೆ ಏರಿಕೆಯ ಬರೆ ಬೀಳುತ್ತಿದ್ದು, ಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಿನ್ನೆ (ಅ.6) ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ಹಾಲಿದರ 8 ರೂ. ಹೆಚ್ಚಳದ ಜೊತೆಗೆ ಸರ್ಕಾರಿ ಬಸ್ಗಳ ಟಿಕೆಟ್ ದರ ಪರಿಷ್ಕರಣೆ ಬಗ್ಗೆಯೂ ನಿರ್ಧರಿಸಿರೋದಾಗಿ ವರದಿಯಾಗಿತ್ತು. ಈ ನಡುವೆಯೇ ಜನಸಾಮಾನ್ಯರಿಗೆ ಮತ್ತೆ ಅಕ್ಕಿ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಸತತ ನಾಲ್ಕು ತಿಂಗಳಲ್ಲಿ 4ನೇ ಬಾರಿಗೆ ದರ ಹೆಚ್ಚಳವಾಗಿರುವ ಕಾರಣ ಜನರ ಜೇಬಿಗೆ ಇನ್ನಷ್ಟು ಕತ್ತರಿ ಬೀಳಲಿದೆ.
| ಅಕ್ಕಿಯ ವಿಧ | ಹಿಂದಿನ ದರ (ಕೆಜಿಗೆ) | ಹೊಸ ದರ (ಕೆಜಿಗೆ) |
| ಕೋಲಂ ಅಕ್ಕಿ | 75 | 110 |
| ಬಾಸುಮತಿ | 105 | 120 |
| ಜೀರಾ ರೈಸ್ | 115 | 125 |
| ರಾಜಮುಡಿ | 125 | 150 |
| ಸ್ಟೀಮ್ ಅಕ್ಕಿ | 60 | 88 |
ಸೋನಾ ಮಸೂರಿ ಅಕ್ಕಿಯ ದರ ಕೆ.ಜಿ.ಗೆ 100ರ ಗಡಿ ತಲುಪಿದ್ದು, ಚೀಲಕ್ಕೆ 400 ರೂ. ಹೆಚ್ಚಳವಾಗಿದೆ. ಯಶವಂತಪುರ ಸಗಟು ಮಾರುಕಟ್ಟೆಯಲ್ಲಿ 25 ಕೆ.ಜಿ. ಚೀಲದ ದರ 1,430ರಿಂದ 1,820ಕ್ಕೆ ಏರಿಕೆಯಾಗಿದೆ. ಕಳೆದ ಎರಡು ತಿಂಗಳಲ್ಲಿ ಸೋನಾ ಮಸೂರಿ ಅಕ್ಕಿ ದರ 390–400 ರೂಪಾಯಿಗಳಷ್ಟು ಹೆಚ್ಚಳ ಕಂಡಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಸೋನಾ ಮಸೂರಿ ಅಕ್ಕಿ ಕೆ.ಜಿ.ಗೆ 90 ರೂ. ತಲುಪಿದೆ. ಸತತ ದರ ಏರಿಕೆಯ ಪರಿಣಾಮ ಅಕ್ಕಿ ಕೊಳ್ಳಲು ಬರುವ ಗ್ರಾಹಕರು ದರ ಕೇಳಿಯೇ ಹಿದಿರುಗುತ್ತಿದ್ದಾರೆ. ಹೀಗಿದ್ದರೂ ಮುಂಬರುವ ದಿನಗಳಲ್ಲಿ ಅಕ್ಕಿ ಬೆಲೆ ಮತ್ತಷ್ಟು ಏರಿಕೆ ಆಗಬಹುದು ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ದಸರಾ, ದೀಪಾವಳಿ ಹೊತ್ತಲ್ಲೇ ಜನರಿಗೆ ಬೆಲೆ ಏರಿಕೆ ಶಾಕ್: ಪ್ರತಿ ಲೀ ಹಾಲಿನ ದರ 8 ರೂ. ಹೆಚ್ಚಳ
ಬೇಡಿಕೆಗೆ ಅನುಗುಣವಾಗಿ ಅಕ್ಕಿ ಪೂರೈಕೆ ಆಗದಿರುವುದೇ ಸತತವಾಗಿ ಬೆಲೆ ಏರಿಕೆಗೆ ಕಾರಣ ಎನ್ನಲಾಗಿದೆ. ಮುಂಗಾರು ಕೈಕೊಟ್ಟಿರುವ ಕಾರಣ ರಾಯಚೂರು, ಸಿಂಧನೂರು, ಸಿರಗುಪ್ಪ , ಭದ್ರಾವತಿಭಾಗಗಳಲ್ಲಿ ಭತ್ತದ ಉತ್ಪಾದನೆಗೆ ಸರಿಯಾಗಿ ಆಗಿಲ್ಲ. ಜೊತೆಗೆ ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲೂ 50 ಪರ್ಸೆಂಟ್ ಮಾತ್ರ ಅಕ್ಕಿ ಇಳುವರಿ ಬಂದಿರುವ ಪರಿಣಾಮ ಡಿಮ್ಯಾಂಡ್ ಹೆಚ್ಚಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:00 pm, Wed, 7 October 26