ಜಿಯೋ ಕೇಬಲ್ ಕಾಮಗಾರಿ ವೇಳೆ ಗ್ಯಾಸ್ ಪೈಪ್ ಸ್ಫೋಟ: ಮಹಿಳೆ ಸೇರಿ ಹಲವರಿಗೆ ಗಾಯ

|

Updated on: Jan 14, 2020 | 7:27 AM

ಬೆಂಗಳೂರು: ನಿನ್ನೆ ಸಂಜೆ 7 ಗಂಟೆ ಸಮಯ. ಬೆಂಗಳೂರಿನ ಹೊಸರೋಡ್ ಬಳಿ ಜಿಯೋ ಕಂಪನಿಯ ಅಂಡರ್​ಗ್ರೌಂಡ್ ಕೇಬಲ್ ಕಾಮಗಾರಿ ನಡೀತಿತ್ತು. ಕಾರ್ಮಿಕರು ಕೆಲಸ ಮಾಡ್ತಿದ್ದಾಗ ಡ್ರಿಲ್ಲಿಂಗ್ ಮಷಿನ್ ಗೇಲ್ ಗ್ಯಾಸ್ ಪೈಪ್​ಗೆ ತಗುಲಿದೆ. ಅಷ್ಟೇ, ಯಾರೂ ಊಹಿಸದ ರೀತಿಯಲ್ಲಿ ನೋಡ ನೋಡ್ತಿದ್ದಂತೆ ಗ್ಯಾಸ್ ಪೈಪ್ ಸ್ಫೋಟಗೊಂಡಿದೆ. ಇದ್ರ ಹೊಡೆತಕ್ಕೆ ಸ್ಥಳದಲ್ಲಿದ್ದ ಕಲ್ಲುಗಳು ಚೂರು ಚೂರಾಗಿವೆ. ವಸ್ತುಗಳು ಹಾಳಾಗಿ ಹೋಗಿವೆ. ಅಂಗಡಿಯಲ್ಲಿದ್ದ ವಸ್ತುಗಳು ದಿಕ್ಕಾಪಾಲಾಗಿ ಬಿದ್ದಿವೆ. ಅಕ್ಕ ಪಕ್ಕದ ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ. ಡ್ರಿಲ್ಲಿಂಗ್ ಮಷಿನ್ ತಗುಲಿ […]

ಜಿಯೋ ಕೇಬಲ್ ಕಾಮಗಾರಿ ವೇಳೆ ಗ್ಯಾಸ್ ಪೈಪ್ ಸ್ಫೋಟ: ಮಹಿಳೆ ಸೇರಿ ಹಲವರಿಗೆ ಗಾಯ
Follow us on

ಬೆಂಗಳೂರು: ನಿನ್ನೆ ಸಂಜೆ 7 ಗಂಟೆ ಸಮಯ. ಬೆಂಗಳೂರಿನ ಹೊಸರೋಡ್ ಬಳಿ ಜಿಯೋ ಕಂಪನಿಯ ಅಂಡರ್​ಗ್ರೌಂಡ್ ಕೇಬಲ್ ಕಾಮಗಾರಿ ನಡೀತಿತ್ತು. ಕಾರ್ಮಿಕರು ಕೆಲಸ ಮಾಡ್ತಿದ್ದಾಗ ಡ್ರಿಲ್ಲಿಂಗ್ ಮಷಿನ್ ಗೇಲ್ ಗ್ಯಾಸ್ ಪೈಪ್​ಗೆ ತಗುಲಿದೆ. ಅಷ್ಟೇ, ಯಾರೂ ಊಹಿಸದ ರೀತಿಯಲ್ಲಿ ನೋಡ ನೋಡ್ತಿದ್ದಂತೆ ಗ್ಯಾಸ್ ಪೈಪ್ ಸ್ಫೋಟಗೊಂಡಿದೆ. ಇದ್ರ ಹೊಡೆತಕ್ಕೆ ಸ್ಥಳದಲ್ಲಿದ್ದ ಕಲ್ಲುಗಳು ಚೂರು ಚೂರಾಗಿವೆ. ವಸ್ತುಗಳು ಹಾಳಾಗಿ ಹೋಗಿವೆ. ಅಂಗಡಿಯಲ್ಲಿದ್ದ ವಸ್ತುಗಳು ದಿಕ್ಕಾಪಾಲಾಗಿ ಬಿದ್ದಿವೆ. ಅಕ್ಕ ಪಕ್ಕದ ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ.

ಡ್ರಿಲ್ಲಿಂಗ್ ಮಷಿನ್ ತಗುಲಿ ಗ್ಯಾಸ್ ಪೈಪ್ ಸ್ಫೋಟ!
ಇನ್ನು, ಚರಂಡಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿತ್ತು. ಹೀಗಾಗಿ, ಯಾವುದೇ ರೀತಿಯ ಅಗ್ನಿ ಅವಘಡ ಸಂಭವಿಸಿಲ್ಲ. ಆದ್ರೆ, ಹೂ ಮಾರುತ್ತಿದ್ದ ಸಂಧ್ಯಾ ರಾಣಿ ಎಂಬಾಕೆಗೆ ಗಂಭೀರವಾಗಿ ಗಾಯಗಳಾಗಿವೆ. ಜತೆಗೆ ಅಕ್ಕ ಪಕ್ಕದ ಕೆಲ‌ವರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನು, ಇದೇ ರೀತಿಯಲ್ಲಿ ಗೇಲ್ ಗ್ಯಾಸ್ ಪ್ರಕರಣಗಳು ಹೆಚ್ಚಾಗ್ತಿವೆ. ನಿನ್ನೆಯೂ ದೊಡ್ಡ ಅನಾಹುತವೊಂದು ತಪ್ಪಿದೆ. ಇಷ್ಟೆಲ್ಲಾ ಆಗ್ತಿದ್ರೂ ಸಂಬಂಧಪಟ್ಟ ಅಧಿಕಾರಿಗಳು ಸೈಲೆಂಟ್ ಆಗಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ.



Published On - 7:26 am, Tue, 14 January 20