Gold Silver Rate Today: ಚಿನ್ನ, ಬೆಳ್ಳಿ ದರದಲ್ಲಿ ಏರಿಕೆ! ಬೆಂಗಳೂರು ಸೇರಿ ವಿವಿಧ ನಗರಗಳಲ್ಲಿನ ದರ ವಿವರ ಇಲ್ಲಿದೆ

|

Updated on: May 16, 2021 | 9:29 AM

Gold Silver Price in Bangalore: ಇಂದು ಭಾನುವಾರ ಚಿನ್ನ ಹಾಗೂ ಬೆಳ್ಳಿ ದರ ಕೊಂಚ ಏರಿಕೆಯಾಗಿದೆ. ಬೆಂಗಳೂರು ಸೇರಿ ವಿವಿಧ ನಗರಗಳಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಿದೆ? ದರ ಏರಿಕೆಯ ಬಳಿಕ ಚಿನ್ನ ಮತ್ತು ಬೆಳ್ಳಿ ಯಾವ ದರ ಕಾಯ್ದಿರಿಸಿಕೊಂಡಿದೆ? ಎಂಬೆಲ್ಲಾ ವಿವರದ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ.

Gold Silver Rate Today: ಚಿನ್ನ, ಬೆಳ್ಳಿ ದರದಲ್ಲಿ ಏರಿಕೆ! ಬೆಂಗಳೂರು ಸೇರಿ ವಿವಿಧ ನಗರಗಳಲ್ಲಿನ ದರ ವಿವರ ಇಲ್ಲಿದೆ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ದೈನಂದಿನ ದರ ಬದಲಾವಣೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರ ಹಾವು-ಏಣಿ ಆಟವಾಡುತ್ತಿರುವುದು ಸರ್ವೇಸಾಮಾನ್ಯ. ಇಂದು ಭಾನುವಾರ ಚಿನ್ನದ ದರ ಕೊಂಚ ಏರಿಕೆಯಾಗಿದೆ. ಬೆಂಗಳೂರು ಸೇರಿ ವಿವಿಧ ನಗರಗಳಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಿದೆ? ದರ ಏರಿಕೆಯ ಬಳಿಕ ಚಿನ್ನ ಮತ್ತು ಬೆಳ್ಳಿ ಯಾವ ದರ ಕಾಯ್ದಿರಿಸಿಕೊಂಡಿದೆ? ಎಂಬೆಲ್ಲಾ ವಿವರದ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ.

ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 44,900 ರೂಪಾಯಿಗೆ ಏರಿಕೆಯಾಗಿದೆ. ಹಾಗೆಯೇ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 48,980 ರೂಪಾಯಿಗೆ ತಲುಪಿದೆ. ಸುಮಾರು 270 ರೂಪಾಯಿಯಷ್ಟು ಇಂದು ಭಾನುವಾರ ದರ ಏರಿಕೆಯಾಗಿದೆ. ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 45,200 ರೂಪಾಯಿಗೆ ಏರಿದೆ. ಹಾಗೆಯೇ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 49,310ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ ಸುಮಾರು 310 ರೂಪಾಯಿಯಷ್ಟು ಹೆಚ್ಚಳವಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರದಲ್ಲಿ 150 ರೂಪಾಯಿ ಏರಿಕೆಯ ಬಳಿಕ ಇಂದು ದರ 46,200 ರೂಪಾಯಿ ಅಗಿದೆ. ಹಾಗೆಯೇ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರದಲ್ಲಿ 200 ರೂಪಾಯಿ ಏರಿಕೆಯ ಬಳಿಕ ದರ 50,200 ರೂಪಾಯಿಗೆ ಏರಿಕೆಯಾಗಿದೆ. ಹೈದರಾಬಾದ್​ನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 44,900 ರೂಪಾಯಿ ಆಗಿದ್ದು, 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 48,980 ರೂಪಾಯಿ ಆಗಿದೆ.

ಕೇರಳದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 44,900 ರೂಪಾಯಿಗೆ ಏರಿಕೆಯಾಗಿದೆ. ಹಾಗೆಯೇ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 48,980 ರೂಪಾಯಿಗೆ ತಲುಪಿದೆ. ಇನ್ನು, ವಾಣಿಜ್ಯ ನಗರಿ ಮುಂಬೈ ನಗರದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರದಲ್ಲಿ 210 ರೂಪಾಯಿ ಏರಿಕೆಯ ನಂತರ 45,060 ರೂಪಾಯಿ ಆಗಿದೆ. ಹಾಗೆಯೇ 24 ಕ್ಯಾರೆಟ್ 10 ಚಿನ್ನದ ದರ 210 ರೂಪಾಯಿ ಏರಿಕೆಯ ಬಳಿಕ 46,060 ರೂಪಾಯಿಗೆ ಏರಿಕೆಯಾಗಿದೆ.

ವಿವಿಧ ನಗರಗಳಲ್ಲಿ ಬೆಳ್ಳಿ ದರ
ಇಂದು ಭಾನುವಾರ ಬೆಳ್ಳಿ ದರದಲ್ಲಿಯೂ ಏರಿಕೆ ಕಂಡು ಬಂದಿದೆ. ವಾಣಿಜ್ಯ ನಗರಿ ಮುಂಬೈನಲ್ಲಿ 1ಕೆಜಿ ಬೆಳ್ಳಿ 500 ರೂಪಾಯಿ ಏರಿಕೆಯ ಬಳಿಕ 71,000 ರೂಪಾಯಿ ಆಗಿದೆ. ಕೇರಳದಲ್ಲಿಯೂ ಕೂಡಾ 1ಕೆಜಿ ಬೆಳ್ಳಿ ದರದಲ್ಲಿ 500 ರೂಪಾಯಿ ಏರಿಕೆಯ ನಂತರ 71,500 ರೂಪಾಯಿ ಆಗಿದೆ. ಹೈದರಾಬಾದ್​ನಲ್ಲಿ 1ಕೆಜಿ ಬೆಳ್ಳಿ ದರ 700 ರೂಪಾಯಿ ಏರಿಕೆ ಕಂಡಿದೆ. ಈ ಬಳಿಕ ಬೆಲೆ 76,000 ರೂಪಾಯಿ ಆಗಿದೆ.

ಇನ್ನು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 1ಕೆಜಿ ಬೆಳ್ಳಿ ದರದಲ್ಲಿ 500 ರೂಪಾಯಿ ಏರಿಕೆಯ ಬಳಿಕ 71,000 ರೂಪಾಯಿ ಆಗಿದೆ. ಚೆನ್ನೈನಲ್ಲಿ 1ಕೆಜಿ ಬೆಳ್ಳಿ ದರ 700 ರೂಪಅಯಿ ಏರಿಕೆ ಕಂಡು ಬಂದಿದ್ದು, 76,000 ರೂಪಾಯಿಗೆ ದರ ಹೆಚ್ಚಳವಾಗಿದೆ. ಹಾಗೆಯೇ ಬೆಂಗಳೂರು ನಗರದಲ್ಲಿ 1ಕೆಜಿ ಬೆಳ್ಳಿ ದರ 500 ರೂಪಾಯಿ ಏರಿಕೆಯ ಬಳಿಕ 71,000 ರೂಪಾಯಿ ಆಗಿದೆ.

ಇದನ್ನೂ ಓದಿ: Gold Silver Rate Today: ಅಕ್ಷಯ ತೃತೀಯದಂದು ಚಿನ್ನ ಕೊಳ್ಳಿರಿ; ಶುಭ ದಿನದಂದು ಚಿನ್ನ, ಬೆಳ್ಳಿ ದರ ಹೀಗಿದೆ!