Gold Rate Today: ಬೆಂಗಳೂರು ಸೇರಿ ವಿವಿಧ ನಗರಗಳಲ್ಲಿ ಚಿನ್ನದ ದರ ಇಳಿಕೆ, ಹೈದರಾಬಾದ್​ನಲ್ಲಿ ಏರಿದ ಚಿನ್ನದ ಬೆಲೆ; ಸಂಪೂರ್ಣ ವಿವರ ಇಲ್ಲಿದೆ

Gold Price Today: ಸಿಲಿಕಾನ್​ ಸಿಟಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ ಇಂದು 44,450 ರೂಪಾಯಿ ಆಗಿದೆ. ದೈನಂದಿನ ದರ ವ್ಯತ್ಯಾಸದಲ್ಲಿ 140 ರೂಪಾಯಿ ಇಳಿಕೆ ಕಂಡಿದೆ.

Gold Rate Today: ಬೆಂಗಳೂರು ಸೇರಿ ವಿವಿಧ ನಗರಗಳಲ್ಲಿ ಚಿನ್ನದ ದರ ಇಳಿಕೆ, ಹೈದರಾಬಾದ್​ನಲ್ಲಿ ಏರಿದ ಚಿನ್ನದ ಬೆಲೆ; ಸಂಪೂರ್ಣ ವಿವರ ಇಲ್ಲಿದೆ
ಸಾಂದರ್ಭಿಕ ಚಿತ್ರ

Updated on: Apr 28, 2021 | 8:29 AM

ಬೆಂಗಳೂರು: ಏಪ್ರಿಲ್​ ತಿಂಗಳಿನಲ್ಲಿ ಚಿನ್ನದ ದರ ಏರಿಳಿತ ಕಾಣುತ್ತಿತ್ತು. ತಿಂಗಳ ಪ್ರಾರಂಭದ ಮೊದಲ ವಾರದಲ್ಲಿ ಚಿನ್ನದ ದರ ದಿನೇ ದಿನೇ ಏರುತ್ತಲೇ ಇತ್ತು. ಇಂದು ನಗದರಲ್ಲಿ ಇಂದು ಚಿನ್ನದ ದರದಲ್ಲಿ ಕೊಂಚ ಇಳಿಕೆ ಕಂಡಿರುವುದು ಗ್ರಾಹಕರಿಗೆ ಕೊಂಚ ಸಂತೋಷವನ್ನುಂಟು ಮಾಡಿದೆ. ಆದರೆ ಕೊರೊನಾ ಹಾವಳಿಯಿಂದಾಗಿ 14 ದಿನಗಳ ಕಾಲ ಲಾಕ್​ಡೌನ್​ ಜಾರಿಗೊಳಿಸಲಾಗಿದ್ದು, ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಅಂಗಡಿಗಳನ್ನು ತೆರೆಯದಂತೆ ಸರ್ಕಾರ ಸೂಚನೆ ನೀಡಿದೆ. ಈ ನಿಟ್ಟಿನಲ್ಲಿ ತಮಗೆ ಬೇಕಾದ  ಚಿನ್ನ ಖರೀದಿ ಮಾಡಲು ಆಗುತ್ತಿಲ್ಲ ಎಂಬುದು ಗ್ರಾಹಕರಿಗೆ ಬೇಸರದ ವಿಚಾರ.

ಬೆಂಗಳೂರು ನಗರ ಸೇರಿ ವಿವಿಧ ನಗರಗಳಲ್ಲಿ ಚಿನ್ನದ ದರ ಎಷ್ಟಿದೆ ಎಂಬುದನ್ನು ನೋಡೋಣ. ಸಿಲಿಕಾನ್​ ಸಿಟಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ ಇಂದು 44,450 ರೂಪಾಯಿ ಆಗಿದೆ. ದೈನಂದಿನ ದರ ವ್ಯತ್ಯಾಸದಲ್ಲಿ 140 ರೂಪಾಯಿ ಇಳಿಕೆ ಕಂಡಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 48,460 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 190 ರೂ. ಇಳಿಕೆ ಕಂಡಿದೆ.

ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ ನಿನ್ನೆ 44,700 ರೂಪಾಯಿಗೆ ಮಾರಾಟವಾಗಿದೆ. ಇಂದು ಕೊಂಚ ದರ ಇಳಿಕೆಯ ನಂತರ 44,650 ರೂಪಾಯಿ ಆಗಿದೆ. ಹಾಗೆಯೇ 24 ಕ್ಯಾರೆಟ್ ಚಿನ್ನದ ದರ ನಿನ್ನೆ 48,770 ರೂಪಾಯಿಗೆ ಮಾರಾಟವಾಗಿದ್ದು, ಇಂದು ದರ 48,710 ರೂಪಾಯಿಗೆ ಇಳಿಕೆಯಾಗಿದೆ. ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ ಇಂದು 45,990 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 50,170 ರೂಪಾಯಿ ಇದೆ.

ಹೈದರಾಬಾದ್​ನಲ್ಲಿ ಇಂದು ಚಿನ್ನದ ದರ ಕೊಂಚ ಏರಿಕೆಯಾಗಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ ನಿನ್ನೆ 44,450 ರೂಪಾಯಿಗೆ ಮಾರಾಟವಾಗಿತ್ತು. ಇಂದು 190 ರೂಪಾಯಿ ಏರಿಕೆಯ ನಂತರದಲ್ಲಿ 44,640 ರೂಪಾಯಿಗೆ ಏರಿಕೆಯಾಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ ನಿನ್ನೆ 48,460 ರೂಪಾಯಿಗೆ ಮಾರಾಟವಾಗಿತ್ತು. ಇಂದು 240 ರೂಪಾಯಿ ಏರಿಕೆಯ ನಂತರ 48,700 ರೂಪಾಯಿ ಆಗಿದೆ.

22 ಕ್ಯಾರೆಟ್ ಚಿನ್ನದ ದರ ಮಾಹಿತಿ
1 ಗ್ರಾಂ ಚಿನ್ನದ ದರ ನಿನ್ನೆ 4,459 ರೂಪಾಯಿಗೆ ಮಾರಾಟವಾಗಿದೆ. ಇಂದು ದರ ಕೊಂಚ ಇಳಿಕೆ ಕಂಡ ನಂತರದಲ್ಲಿ 4,445 ರೂಪಾಯಿಗೆ ಇಳಿಕೆಯಾಗಿದೆ. 8 ಗ್ರಾಂ ಚಿನ್ನದ ದರ ನಿನ್ನೆ 35,672 ರೂಪಾಯಿಗೆ ಮಾರಾಟವಾಗಿದ್ದು, ಇಂದು ದರ 35,560 ರೂಪಾಯಿ ಆಗಿದೆ. 10 ಗ್ರಾಂ ಚಿನ್ನದ ದರ ನಿನ್ನೆ 44,590 ರೂಪಾಯಿಗೆ ಮಾರಾಟವಾಗಿದೆ. 140 ರೂಪಾಯಿ ಇಳಿಕೆಯ ನಂತರದಲ್ಲಿ 44,450 ರೂಪಾಯಿಗೆ ಇಳಿದಿದೆ. 100 ಗ್ರಾಂ ಚಿನ್ನದ ದರ ನಿನ್ನೆ 4,45,900 ರೂಪಾಯಿಗೆ ಮಾರಾಟವಾಗಿದೆ. ಇಂದು 1,400 ರೂಪಾಯಿ ಇಳಿಕೆಯ ನಂತರದಲ್ಲಿ 4,44,500 ರೂಪಾಯಿಗೆ ಇಳಿಕೆಯಾಗಿದೆ.

ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ದರ ಮಾಹಿತಿ
1 ಗ್ರಾಂ ಚಿನ್ನದ ನಿನ್ನೆ 4,865 ರೂಪಾಯಿಗೆ ಮಾರಾಟವಾಗಿದ್ದು, ಇಂದು ದರ 4,846 ರೂಪಾಯಿ ಆಗಿದೆ. 8 ಗ್ರಾಂ ಚಿನ್ನದ ದರ ನಿನ್ನೆ 38,920 ರೂಪಾಯಿಗೆ ಮಾರಾಟವಾಗಿದ್ದು, ಇಂದು ದರ 38,768 ರೂಪಾಯಿಗೆ ಇಳಿದಿದೆ. 10 ಗ್ರಾಂ ಚಿನ್ನದ ದರ ನಿನ್ನೆ 48,650 ರೂಪಾಯಿಗೆ ಮಾರಾಟವಾಗಿದೆ. ಇಂದು 190 ರೂಪಾಯಿ ಇಳಿಕೆಯ ನಂತರ 48,460 ರೂಪಾಯಿ ಆಗಿದೆ. 100 ಗ್ರಾಂ ಚಿನ್ನದ ದರ ನಿನ್ನೆ 4,86,500 ರೂಪಾಯಿಗೆ ಮಾರಾಟವಾಗಿದ್ದು, 1,900 ರೂಪಾಯಿ ಇಳಿಕೆಯ ನಂತರ 4,84,600 ರೂಪಾಯಿ ಆಗಿದೆ.

ಬೆಳ್ಳಿ ದರ ಮಾಹಿತಿ
ದೈನಂದಿನ ದರ ಪರಿಶೀಲನೆಯಲ್ಲಿ ಇಂದು ಬೆಳ್ಳಿ ದರ ಕೊಂಚ ಏರಿಕೆಯಾಗಿದೆ. 1 ಗ್ರಾಂ ಬೆಳ್ಳಿ ನಿನ್ನೆ 68.70 ರೂಪಾಯಿ ಇದ್ದು, ಇಂದು ದರ ಏರಿಕೆಯ ನಂತರದಲ್ಲಿ 68.80 ರೂಪಾಯಿ ಆಗಿದೆ. 8 ಗ್ರಾಂ ಚಿನ್ನದ ದರ ನಿನ್ನೆ 549.60 ರೂಪಾಯಿಗೆ ಮಾರಾಟವಾಗಿದ್ದು ಇಂದು ದರ 550.40 ರೂಪಾಯಿ ಆಗಿದೆ.10 ಗ್ರಾಂ ಬೆಳ್ಳಿ ದರ ನಿನ್ನೆ 867 ರೂಪಾಯಿಗೆ ಮಾರಾಟವಾಗಿದ್ದು ಇಂದು ದರ 688 ರೂಪಾಯಿಗೆ ಏರಿಕೆಯಾಗಿದೆ. 100 ಗ್ರಾಂ ಬೆಳ್ಳಿ ದರ ನಿನ್ನೆ 6,870 ರೂಪಾಯಿಗೆ ಮಾರಾಟವಾಗಿದೆ. ಇಂದು 6,880 ರೂಪಾಯಿಗೆ ಏರಿಕೆಯಾಗಿದೆ. 1ಕೆಜಿ ಬೆಳ್ಳಿ ದರ ನಿನ್ನೆ 68,700 ರೂಪಾಯಿಗೆ ಮಾರಾಟವಾಗಿದೆ. 100 ರೂಪಾಯಿ ಏರಿಕೆಯ ನಂತರ 68,800 ರೂಪಾಯಿ ಆಗಿದೆ.

ಇದನ್ನೂ ಓದಿ: Gold Rate Today: ಏಪ್ರಿಲ್​ ತಿಂಗಳಿನಲ್ಲಿ ಚಿನ್ನ, ಬೆಳ್ಳಿ ದರ ಏರಿಳಿತ; ಬೆಂಗಳೂರು ಸೇರಿ ವಿವಿಧ ನಗರಗಳ ಚಿನ್ನದ ದರ ಮಾಹಿತಿ ಇಲ್ಲಿದೆ

(Gold and Silver Rate Today on 2021 April 28 Bangalore Hyderabad Chennai Delhi)

Published On - 8:28 am, Wed, 28 April 21

Loading...
Unable to load recommendations.
Follow Us