Gold Rate Today: ಇಳಿಕೆಯ ಹಾದಿ ಹಿಡಿದ ಚಿನ್ನದ ದರ; ಆಭರಣ ಪ್ರಿಯರಿಗೆ ಸಂತಸ

| Updated By: Digi Tech Desk

Updated on: Jun 17, 2021 | 9:25 AM

Gold Silver Price Today: ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 45,340 ರೂಪಾಯಿಗೆ ಇಳಿಕೆಯಾಗಿದೆ. 100 ಗ್ರಾಂ ಚಿನ್ನದ ದರ 4,53,400 ರೂಪಾಯಿಗೆ ಇಳಿಕೆ ಆಗಿದೆ.

Gold Rate Today: ಇಳಿಕೆಯ ಹಾದಿ ಹಿಡಿದ ಚಿನ್ನದ ದರ; ಆಭರಣ ಪ್ರಿಯರಿಗೆ ಸಂತಸ
ಸಾಂದರ್ಭಿಕ ಚಿತ್ರ
Follow us on

Gold Silver Rate Today | ಬೆಂಗಳೂರು: ಕಳೆದ ಮೂರು ದಿನಗಳಿಂದ (Gold Rate) ಚಿನ್ನದ ದರ ಇಳಿಕೆಯತ್ತ ಸಾಗುತ್ತಿದೆ. ಇದನ್ನು ಗಮನಿಸಿದ ಗ್ರಾಹಕರು ಕೊಂಚ ಸಂತೋಷದಲ್ಲಿದ್ದಾರೆ. ತಿಂಗಳ ಪ್ರಾರಂಭದಲ್ಲಿ ಆಭರಣಗಳ ಬೆಲೆ ಏರುತ್ತಲೇ ಇದ್ದುದನ್ನು ಕಂಡು ಬೇಸರ ಹೊರಹಾಕಿದ್ದರು. ಆದರೆ ಇಂದು (ಗುರುವಾರ, ಜೂನ್​ 17) ಚಿನ್ನದ ದರ (Gold Price) ಇಳಿಕೆ ಆಗಿದೆ. ಆದರೆ ಬೆಳ್ಳಿ ದರದಲ್ಲಿ (Silver Price) ಕೊಂಚ ಏರಿಕೆ ಕಂಡು ಬಂದಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ (Gold Price) 45,340 ರೂಪಾಯಿಗೆ ಇಳಿಕೆಯಾಗಿದೆ. 100 ಗ್ರಾಂ ಚಿನ್ನದ ದರ 4,53,400 ರೂಪಾಯಿಗೆ ಇಳಿಕೆ ಆಗಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 49,460 ರೂಪಾಯಿಗೆ ಇಳಿದಿದೆ. 100 ಗ್ರಾಂ ಚಿನ್ನದ ದರ 4,94,600 ರೂಪಾಯಿಗೆ ಇಳಿಕೆ ಆಗಿದೆ. ಇನ್ನು, ಕೆಜಿ ಬೆಳ್ಳಿ ಬೆಲೆಯಲ್ಲಿ ಕೊಂಚ ಏರಿಕೆ ಕಂಡು ಬಂದಿದ್ದು, 71,500 ರೂಪಾಯಿ ನಿಗದಿ ಮಾಡಲಾಗಿದೆ.

ಚಿನ್ನ ಖರೀದಿಸಬೇಕೆಂಬ ಆಸೆಯಿಂದ ಹಣವನ್ನು ಸಮಗ್ರಹಿಸಿ ಜೋಪಾನ ಮಾಡಿಟ್ಟಿರುತ್ತೇವೆ. ಹೆಣ್ಣು ಮಕ್ಕಳಂತೂ ತಾವು ದುಡಿದ ಹಣದ ಅರ್ಧದಷ್ಟು ಚಿನ್ನಕ್ಕಾಗಿಯೇ ಇಡುತ್ತಾರೆ. ಮದುವೆ-ಸಮಾರಂಭಗಳಿಗೆ ಆಭರಣ ತೊಟ್ಟು ಮೆರುಗು ಹೆಚ್ಚಿಸಿಕೊಳ್ಳುವುದರ ಜತೆಗೆ ಮಗಳು ತಾನು ಹುಟ್ಟಿದ ಮನೆಯಿಂದ ಗಂಡನ ಮನೆ ಸೇರುವಾಗ ಚಿನ್ನವನ್ನು ಕೊಟ್ಟು ಕಳುಹಿಸಬೇಕು ಎಂಬ ಸಂಪ್ರದಾಯ ಕೆಲವೆಡೆ ಇದೆ. ಹಾಗಾಗಿಯೇ ಮದುಮಗಳಿಗೆ ತವರು ಮನೆಕಡೆಯಿಂದ ಚಿನ್ನವನ್ನು ಉಡುಗೊರೆಯಾಗಿ ನೀಡುತ್ತಾರೆ.

ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 45,750 ರೂಪಾಯಿಗೆ ಇಳಿಕೆ ಆಗಿದೆ. 100 ಗ್ರಾಂ ಚಿನ್ನದ ದರ 4,57,400 ರೂಪಾಯಿಗೆ ಇಳಿಕೆ ಆಗಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 49,890 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,98,900 ರೂಪಾಯಿ ನಿಗದಿ ಮಾಡಲಾಗಿದೆ. ಕೆಜಿ ಬೆಳ್ಳಿ ಬೆಲೆ ಕೊಂಚ ಏರಿಕೆ ಕಂಡು ಬಂದಿದ್ದು 76,400 ರೂಪಾಯಿಗೆ ಏರಿಕೆಯಾಗಿದೆ.

ದೆಹಲಿಯಲ್ಲಿ 22 ಕ್ಯಾರೆಟ್​ ಚಿನ್ನದ ದರ 47,490 ರೂಪಾಯಿಗೆ ಕುಸಿತ ಕಂಡಿದೆ. 100 ಗ್ರಾಂ ಚಿನ್ನದ ದರ 4,74,900 ರೂಪಾಯಿಗೆ ಇಳಿಕೆ ಆಗಿದೆ. ಅದೇ ರೀತಿ 24 ಕ್ಯಅರೆಟ್ 10 ಗ್ರಾಂ ಚಿನ್ನದ ದರ 51,590 ರೂಪಾಯಿಗೆ ಇಳಿಕೆ ಆಗಿದೆ. 100 ಗ್ರಾಂ ಚಿನ್ನಕ್ಕೆ 5,15,900 ರೂಪಾಯಿ ನಿಗದಿ ಮಾಡಲಾಗಿದೆ. ಬೆಳ್ಳಿ ದರದಲ್ಲಿ ಕೊಂಚ ಏರಿಕೆ ಕಂಡು ಬಂದಿದ್ದು ಕೆಜಿ ಬೆಳ್ಳಿ 200 ರೂಪಾಯಿ ಏರಿಕೆ ಬಳಿಕ 71,500 ರೂಪಾಯಿ ನಿಗದಿಯಾಗಿದೆ.

ವಾಣಿಜ್ಯ ನಗರಿ ಮುಂಬೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 47,400 ರೂಪಾಯಿ, 100 ಗ್ರಾಂ ಚಿನ್ನಕ್ಕೆ 4,74,000 ರೂಪಾಯಿ ನಿಗದಿಯಾಗಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 48,400 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,84,00 ರೂಪಾಯಿ ನಿಗದಿ ಮಾಡಲಾಗಿದೆ. ಬೆಳ್ಳಿ ದರ 200 ರೂಪಾಯಿ ಏರಿಕೆ ಕಂಡಿದೆ. ಆ ಮೂಲಕ ಕೆಜಿ ಬೆಳ್ಳಿಗೆ 71,500 ರೂಪಾಯಿ ನಿಗದಿಯಾಗಿದೆ.

ಇದನ್ನೂ ಓದಿ:

Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಸ್ಥಿರ, ಇನ್ನು ಕೆಲವೆಡೆ ಏರಿಳಿತ; ಆಭರಣದ ಬೆಲೆ ವಿವರ ಪರಿಶೀಲಿಸಿ

Gold Rate Today: ಗ್ರಾಹಕರಿಗೆ ಖುಷಿಯೋ ಖುಷಿ; ಸತತ ಮೂರು ದಿನಗಳಿಂದ ಚಿನ್ನದ ದರ ಇಳಿಕೆ!

 

(Gold price decreased today on 2021 June 17 and silver price check gold rate in Bangalore Delhi Mumbai and your city)

Published On - 9:08 am, Thu, 17 June 21