ಗುಡ್​ ನ್ಯೂಸ್​: ಜುಲೈ ವೇಳೆಗೆ ಹಳದಿ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭ

|

Updated on: Apr 07, 2023 | 7:33 AM

ಇದೇ ವರ್ಷ ಜುಲೈ ವೇಳೆಗೆ ಬೆಂಗಳೂರಿನ ನಮ್ಮ ಮೆಟ್ರೋದ ಹಳದಿ ಮಾರ್ಗವನ್ನು ಸಾರ್ವಜನಿಕ ಬಳಕೆಗಾಗಿ ತೆರೆಯುವ ಸಾಧ್ಯತೆಯಿದೆ. ಇದು ಬೊಮ್ಮಸಂದ್ರದಿಂದ ಸೆಂಟ್ರಲ್​ ಸಿಲ್ಕ್​ ಬೋರ್ಡ್​ನ್ನು ಸಂಪರ್ಕಿಸುತ್ತದೆ.

ಗುಡ್​ ನ್ಯೂಸ್​: ಜುಲೈ ವೇಳೆಗೆ ಹಳದಿ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ, ಬೆಂಗಳೂರು ನಗರವು ಈ ವರ್ಷದ ಜುಲೈ ವೇಳೆಗೆ ಮತ್ತೊಂದು ಮೆಟ್ರೋ(Metro) ಮಾರ್ಗವನ್ನ ತೆರೆಯುವ ಸಾಧ್ಯತೆಯಿದೆ. ಇದರಿಂದ ನಗರದ ಹಲವಾರು ಪ್ರಮುಖ ಪ್ರದೇಶಗಳಲ್ಲಿನ ವಾಹನ ದಟ್ಟಣೆ ಮತ್ತಷ್ಟು ಕಡಿಮೆ ಆಗಲಿದೆ. ಹೌದು ಬೊಮ್ಮಸಂದ್ರದಿಂದ ಹೆಚ್ಚು ದಟ್ಟಣೆಯಿರುವ ಸೆಂಟ್ರಲ್ ಸಿಲ್ಕ್ ಬೋರ್ಡ್‌ಗೆ ಸಂಪರ್ಕಿಸುವ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್‌ನ (BMRCL) ನಮ್ಮ ಮೆಟ್ರೋದ ‘ಹಳದಿ ಮಾರ್ಗ’( Yellow Line) ಇನ್ನು ಮೂರು ತಿಂಗಳಲ್ಲಿ ಸಾರ್ವಜನಿಕ ಬಳಕೆಗೆ ತೆರೆಯುವ ನಿರೀಕ್ಷೆಯಿದೆ ಎಂದು ಟೈಮ್ಸ್ ನೌ ವರದಿ ಮಾಡಿದೆ.

ನಿಲುಗಡೆ ಸ್ಥಳಗಳು ಇಂತಿವೆ

ಆರ್ ವಿ ರಸ್ತೆ, ರಾಗಿಗುಡ್ಡ, ಜಯದೇವ ಆಸ್ಪತ್ರೆ, ಬಿಟಿಎಂ ಲೇಔಟ್, ಸೆಂಟ್ರಲ್ ಸಿಲ್ಕ್ ಬೋರ್ಡ್, ಬೊಮ್ಮನಹಳ್ಳಿ, ಸಿಂಗಸಂದ್ರ, ಎಲೆಕ್ಟ್ರಾನಿಕ್ ಸಿಟಿ, ಬೊಮ್ಮಸಂದ್ರ, ಹೊಂಗಸಂದ್ರ, ಕೂಡ್ಲು ಗೇಟ್, ಹೊಸ ರಸ್ತೆ, ಬೆರಟೆನ ಅಗ್ರಹಾರ, ಕೋನಪ್ಪನ ಅಗ್ರಹಾರ, ಹುಸ್ಕೂರು ರಸ್ತೆ, ಹೆಬ್ಬಗೋಡಿ, ಹೆಬ್ಬಗೋಡಿ ರಸ್ತೆಯಲ್ಲಿ ನಿಲುಗಡೆಯಾಗಲಿದೆ. ಈಗಾಗಲೇ ಹಳಿಗಳು ಮತ್ತು ನಿಲ್ದಾಣಗಳು ಸೇರಿದಂತೆ ಬಹುತೇಕ ನಿರ್ಮಾಣ ಕಾರ್ಯಗಳು ಪೂರ್ಣಗೊಂಡಿದ್ದು, ಇನ್ನು ಕೆಲವು ಸಣ್ಣಪುಟ್ಟ ಕೆಲಸಗಳು ಉಳಿದಿವೆ ಎಂದು ಬಿಎಂಆರ್‌ಸಿಎಲ್ ಮೂಲಗಳು ಪ್ರಕಟಣೆಯಲ್ಲಿ ತಿಳಿಸಿವೆ.

ಇದನ್ನೂ ಓದಿ:Viral Video: ಮೆಟ್ರೋ ಸ್ಟೇಷನ್​​​ನಲ್ಲಿ ಭೋಜ್‌ಪುರಿ ಹಾಡಿಗೆ ಸಕ್ಕತ್ತ್​​ ಸ್ಟೆಪ್​​ ಹಾಕಿದ ಮಹಿಳೆ

ಎಲೆಕ್ಟ್ರಾನಿಕ್ಸ್ ಸಿಟಿ ಭಾಗದಲ್ಲಿರುವ ಮಾರ್ಗವನ್ನು ಮೂಲತಃ ಜೂನ್‌ಗೆ ಪೂರ್ಣಗೊಳಿಸಲು ಯೋಜಿಸಲಾಗಿತ್ತು. ಆದರೆ ಈಗ ಎಲ್ಲವೂ ವೇಳಾಪಟ್ಟಿಯ ಪ್ರಕಾರ ನಡೆದರೆ ಜುಲೈ ಅಂತ್ಯ ಅಥವಾ ಆಗಸ್ಟ್ ಆರಂಭದಲ್ಲಿ ತೆರೆಯಲಾಗುವುದು ಎಂದು ಅಂದಾಜಿಸಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಬೆಂಗಳೂರಿನಲ್ಲಿ ಬಹು ನಿರೀಕ್ಷಿತ ವೈಟ್‌ಫೀಲ್ಡ್‌ನಿಂದ ಕೆಆರ್ ಪುರಂ ಮೆಟ್ರೋ ಮಾರ್ಗವನ್ನು ಉದ್ಘಾಟಿಸಿದರು. ಇದು ಬೆಂಗಳೂರು ಮೆಟ್ರೋದ 2 ಹಂತದ ಯೋಜನೆಯ 13.71 ಕಿಲೋಮೀಟರ್ ವಿಸ್ತರಣೆಯಾಗಿದ್ದು, ಸುಮಾರು ₹4,250 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. BMRCL 2025 ರ ಜೂನ್ ವೇಳೆಗೆ 175-ಕಿಲೋಮೀಟರ್ ಮೆಟ್ರೋ ಜಾಲವನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ ಎಂದು BMRCL ನ ವ್ಯವಸ್ಥಾಪಕ ನಿರ್ದೇಶಕರಾದ ಅಂಜುಮ್ ಪರ್ವೇಜ್ ಅವರು ಹೇಳಿದರು.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:33 am, Fri, 7 April 23