ಹೆಚ್​ಡಿ ದೇವೇಗೌಡಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದ ಬೆಂಗಳೂರು ವಿವಿ: ದೊಡ್ಡಗೌಡ್ರು ಫುಲ್ ಖುಷ್

| Updated By: ರಮೇಶ್ ಬಿ. ಜವಳಗೇರಾ

Updated on: Oct 17, 2023 | 11:39 AM

ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ ಇನ್ಮುಂದೆ ಡಾ. ಹೆಚ್​ಡಿ ದೇವೇಗೌಡ. ಹೌದು...ಇಂದು ಬೆಂಗಳೂರು ವಿಶ್ವವಿದ್ಯಾಲಯ ದೇವೇಗೌಡ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಇನ್ನು ಡಾಕ್ಟರೇಟ್ ಸ್ವೀಕರಿಸಿದ ದೇವೇಗೌಡ್ರು ಫುಲ್ ಖುಷ್ ಆಗಿದ್ದಾರೆ.

ಹೆಚ್​ಡಿ ದೇವೇಗೌಡಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದ ಬೆಂಗಳೂರು ವಿವಿ: ದೊಡ್ಡಗೌಡ್ರು ಫುಲ್ ಖುಷ್
Follow us on

ಬೆಂಗಳುರು, (ಅಕ್ಟೋಬರ್ 17): ಮಾಜಿ ಪ್ರಧಾನಿ, ಜೆಡಿಎಸ್​ ವರಿಷ್ಠ ಹೆಚ್​ಡಿ ದೇವೇಗೌಡ (HD Devegowda) ಅವರಿಗೆ ಬೆಂಗಳೂರು ವಿಶ್ವವಿದ್ಯಾಲಯ (Bengaluru University) ಗೌರವ ಡಾಕ್ಟರೇಟ್ (doctorate) ಪದವಿ ಪ್ರದಾನ ಮಾಡಿ ಗೌರವಿಸಿದೆ. ಇಂದು(ಅಕ್ಟೋಬರ್ 17) ಸೆಂಟ್ರಲ್ ಕಾಲೇಜು ಆವರಣದ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಬೆಂಗಳೂರು ವಿಶ್ವವಿದ್ಯಾಲಯದ 58ನೇ ವಾರ್ಷಿಕ ಘಟಿಕೋತ್ಸವದಲ್ಲಿ ದೇವೇಗೌಡ ಅವರಿಗೆ ಗೌರವ ಡಾಕ್ಟರೇಟ್ ನೀಡಿಲಾಗಿದೆ. ಇನ್ನು ದೇವೇಗೌಡ ಅವರು ಸಹ ಡಾಕ್ಟರೇಟ್ ಪದವಿ ಪಡೆದುಕೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

ನನಗೆ ಗೌರವ ಡಾಕ್ಟರೇಟ್ ನೀಡಿರುವುದು ಸಂತೋಷವಾಗಿದೆ. ಬೆಂಗಳೂರು ವಿಶ್ವವಿದ್ಯಾಲಯ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಅನ್ನು ತುಂಬಾ ಸಂತೋಷದಿಂದ ಸ್ವೀಕಾರ ಮಾಡಿದ್ದೇನೆ. ಬೆಂಗಳೂರು ವಿವಿ‌ ಲಕ್ಷಾಂತರ ವಿದ್ಯಾರ್ಥಿಗಳ ಜ್ಞಾನ ಭಂಡಾರ. ಉನ್ನತ ಶಿಕ್ಷಣದಲ್ಲಿ ಉತೃಷ್ಕೃತೆಯನ್ನು ಸಾಧಿಸಿದೆ, ಈ ವಿವಿ ಬಗ್ಗೆ ನನಗೆ ಅಪಾರ ಗೌರವ ಇದೆ ಎಂದು ಬೆಂಗಳೂರು ವಿವಿಯನ್ನು ಹಾಡಿಹೊಗಳಿದರು.

ವಿದ್ಯೆ ಕಾಗದದ ಸರ್ಟಿಫಿಕೇಟ್ ಆಗಬಾರದು. ವಿದ್ಯೆ ಸಂಸ್ಕಾರವನ್ನು ಒಳಗೊಂಡಿರಬೇಕು. ಶಿಕ್ಷಣ ಪುಸ್ತಕ ಜ್ಞಾನ, ಅಕ್ಷರ ಜ್ಞಾನ ಮಾತ್ರ ಅಲ್ಲ ವಿದ್ಯೆ ಹೃದಯವಂತಿಕೆ ಬೆಳೆಸಬೇಕು. ಇಸ್ರೋ ಅಧ್ಯಕ್ಷ ಸೋಮನಾಥ್ ಅವರಿಗೆ ವಿಶೇಷ ಅಭಿನಂದನೆ ಸಲ್ಲಿಸುತ್ತೇನೆ. ಸೋಮನಾಥ್ ಅವರಿಗೆ ಗೌರವ ಡಾಕ್ಟರೇಟ್ ಸಂದಿರುವುದು ಸಂತಸ ತಂದಿದೆ. ಇಸ್ರೋದ ಸಂಸ್ಥೆ ಇಂದು ಬಾಹ್ಯಕಾಶ ಕ್ಷೇತ್ರ ಭೂಪಟದಲ್ಲಿ ವಿಶ್ವಕ್ಕೆ ಪರಿಚಯ ಮಾಡಿ ಗೌರವ ತಂದಿದೆ. ವಿದ್ಯಾರ್ಥಿ ಜೀವನ ತಪ್ಪಸ್ಸು ಇದ್ದಂತೆ. ವಿದ್ಯೆ ಒಬ್ಬನ ಜೀವನ ಕಟ್ಟಿಕೊಳ್ಳವುದು ಮಾತ್ರವಲ್ಲ, ದೇಶವನ್ನು ಸಮಾಜವನ್ನು ಕಟ್ಟುತ್ತದೆ. ಪ್ರಸ್ತುತ ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣದ ಅಗತ್ಯ ಹೆಚ್ಚಿದೆ. ತುಂಬಾ ಸಂತೋಷದಿಂದ ನಾನು ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದರು.

ವಿಡಿಯೋ ಸಂದೇಶ ಕಳುಹಿಸಿದ ಇಸ್ರೋ ಅಧ್ಯಕ್ಷ

ಇನ್ನು ವಿವಿ ಇಸ್ರೋ ಅಧ್ಯಕ್ಷ ಸೋಮನಾಥ್ ಅವರಿಗೂ ಡಾಕ್ಟರೇಟ್​ ಪ್ರದಾನ ಮಾಡಲು ತೀರ್ಮಾನಿಸಿತ್ತು. ಆದ್ರೆ, ಅವರು ಪೂರ್ವ ನಿಯೋಜಿತ ಕಾರ್ಯಕ್ರಮದ ಘಟಿಕೋತ್ಸವಕ್ಕೆ ಗೈರಾಗಿದ್ದಾರೆ. ಇನ್ನು ಗೈರಾಗಿರುವುದಕ್ಕೆ ಸೋಮನಾಥ್ ಅವರು ವಿಡಿಯೋ ಸಂದೇಶ ರವಾನಿಸಿದ್ದು, ಗೌರವ ಡಾಕ್ಟರೇಟ್ ಪದವಿಗೆ ನನ್ನನ್ನು ಆಯ್ಕೆ ಮಾಡಿದ್ದಕ್ಕೆ ಧನ್ಯವಾದ. ಇದು ನನಗೆ ಮಾತ್ರವಲ್ಲ, ಇಸ್ರೋಗೆ ಸಂದಿರುವ ಗೌರವ ದೇವೇಗೌಡ ಅವರಿಗೆ ಗೌರವ ಡಾಕ್ಟರೇಟ್ ಪದವಿ‌ ನೀಡಿರುವುದು ಸಂತಸ ತಂದಿದೆ. ಬೆಂಗಳೂರು ವಿವಿ ನೀಡಿರುವ ಗೌರವ ಡಾಕ್ಟರೇಟ್ ಪದವಿಯನ್ನು ನಾನು ಅತ್ಯಂತ ಸಂತೋಷದಿಂದ ಸ್ವೀಕರಿಸುತ್ತೇನೆ. ಇಂದಿನ ಹಲವು ಪ್ರಮುಖ ಕಾರ್ಯಕ್ರಮಗಳ ನಿಮಿತ್ತ ನಾನು ಅಲ್ಲಿಗೆ ಬಂದು ಪದವಿ ಸ್ವೀಕರಿಸಲು ಸಾಧ್ಯವಾಗಿಲ್ಲ. ಸಾಮಾನ್ಯ ಮನುಷ್ಯನಿಗೂ ಬಾಹ್ಯಾಕಾಶ ಕ್ಷೇತ್ರದ ಪ್ರತಿ ಕಾರ್ಯವೂ ಉಪಯೋವಾಗುತ್ತ ಇಸ್ರೋ ಶ್ರಮಿಸಲಿದೆ ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:38 am, Tue, 17 October 23