ಸಿಂಗಾಪುರ ಪ್ರವಾಸ ಮುಗಿಸಿ ಬೆಂಗಳೂರಿಗೆ ವಾಪಸ್ಸಾದ ಹೆಚ್​ಡಿಕೆ; ನಾಳೆ ಹುಬ್ಬಳ್ಳಿ ಪ್ರವಾಸ

| Updated By: ವಿವೇಕ ಬಿರಾದಾರ

Updated on: Jun 03, 2022 | 10:39 PM

ಮಾಜಿ ಮುಖ್ಯಂತ್ರಿ ಹೆಚ್​.ಡಿ. ಕುಮಾರಸ್ವಾಮಿ ಸಿಂಗಾಪುರ ಪ್ರವಾಸ ಮುಗಿಸಿ ಇಂದು (ಜೂ 3) ರಂದು ರಾತ್ರಿ 10ಕ್ಕೆ ಬೆಂಗಳೂರು ಕೆಂಪೆಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ.

ಸಿಂಗಾಪುರ ಪ್ರವಾಸ ಮುಗಿಸಿ ಬೆಂಗಳೂರಿಗೆ ವಾಪಸ್ಸಾದ ಹೆಚ್​ಡಿಕೆ; ನಾಳೆ ಹುಬ್ಬಳ್ಳಿ ಪ್ರವಾಸ
ಜೆಡಿಎಸ್ ನಾಯಕ ಎಚ್​ಡಿ ಕುಮಾರಸ್ವಾಮಿ
Follow us on

ಬೆಂಗಳೂರು: ಮಾಜಿ ಮುಖ್ಯಂತ್ರಿ ಹೆಚ್​.ಡಿ. ಕುಮಾರಸ್ವಾಮಿ (HD Kumarswami) ಸಿಂಗಾಪುರ ಪ್ರವಾಸ ಮುಗಿಸಿ ಇಂದು (ಜೂ 3) ರಂದು ರಾತ್ರಿ 10ಕ್ಕೆ ಬೆಂಗಳೂರು ಕೆಂಪೆಗೌಡ ಅಂತರಾಷ್ಟ್ರೀಯ (Kempe Gowda Intranational Airport)  ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ವೈಯುಕ್ತಿಕ ಕೆಲಸದ ನಿಮಿತ್ತ ಕುಮಾರಸ್ವಾಮಿ ಮೇ 28ರಂದು ಸಿಂಗಾಪುರಕ್ಕೆ (Singapur) ತೆರಳಿದ್ದರು. ಒಂದು ವಾರದ ಬಳಿಕ ಇದೀಗ ಬೆಂಗಳೂರಿಗೆ ವಾಪಸ್ ಆಗಿದ್ದಾರೆ.

ಇದನ್ನು ಓದಿ: ಕುಸಿದು ಬಿದ್ದ ನಾಯಿಗೆ ಮರುಜೀವ ತುಂಬಿದ ಆಪತ್ಭಾಂದವ, ವಿಡಿಯೋ ನೋಡಿ

ಏರ್ಪೋಟ್ ನಿಂದ ದೇವನಹಳ್ಳಿ ಬಳಿಯ ಪ್ರೇಸ್ಟಿಜ್ ಗಾಲ್ಫ್ ಶೈರ್ ರೆಸಾರ್ಟ್ ಗೆ ಕುಮಾರಸ್ವಾಮಿ  ತೆರಳಲಿದ್ದಾರೆ. ರಾತ್ರಿ ಹೋಟೆಲ್​ನಲ್ಲಿ ವಾಸ್ತವ್ಯ ಹೂಡಿ ಬೆಳಗ್ಗೆ ಹುಬ್ಬಳಿಗೆ ತೆರಳಲಿದ್ದಾರೆ. ಹೆಚ್​ಡಿಕೆಗೆ ಸ್ವಾಗತ ಕೋರಲು ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್ ಆಗಮಿಸಿದ್ದರು. ಇಬ್ಬರು ಶಾಸಕರು ಏರ್ಪೋಟ್ ನಿಂದ ಹೆಚ್​ಡಿಕೆ ಜೊತೆ ಹೋಟೆಲ್​​ಗೆ ತೆರಳಿದ್ದಾರೆ.

ಇದನ್ನು ಓದಿ: ಜೆಎನ್​​ಯು ಕ್ಯಾಂಪಸ್​​ನಲ್ಲಿ ನೇಣು ಹಾಕಿದ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ 

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 10:38 pm, Fri, 3 June 22