Viral Video: ಕುಸಿದು ಬಿದ್ದ ನಾಯಿಗೆ ಮರುಜೀವ ತುಂಬಿದ ಆಪತ್ಭಾಂದವ, ವಿಡಿಯೋ ನೋಡಿ
ರಸ್ತೆಯ ಮೇಲೆ ಕುಸಿದು ಬಿದ್ದು ನಿರ್ಜೀವವಾದಂತೆ ಇದ್ದ ನಾಯಿಗೆ ತುರ್ತು ಜೀವ ಉಳಿಸುವ ವಿಧಾನ ಸಿಪಿಆರ್ ಮೂಲಕ ಮರುಜೀವ ನೀಡಿದ ವ್ಯಕ್ತಿಯ ವಿಡಿಯೋ ವೈರಲ್ ಆಗುತ್ತಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮನುಷ್ಯರಂತೆ ಬುದ್ಧಿವಂತಿಕೆಯನ್ನು ಹೊಂದಿರದ ಪ್ರಾಣಿಗಳಿಗೆ ದಯೆ ತೋರುವುದು ಮಹಾನ್ ಕಾರ್ಯವೇ ಸರಿ. ಅಂತಹ ದಯೆಯ ವಿಡಿಯೋವೊಂದು ವೈರಲ್ ಆಗುತ್ತಿದೆ. ನಾಯಿಯೊಂದು ಕುಸಿದುಬಿದ್ದಾಗ ಆಪದ್ಬಾಂದವನಾಗಿ ಬಂದ ವ್ಯಕ್ತಿಯೊಬ್ಬರು ನಾಯಿಗೆ ಮರುಜೀವ ತುಂಬಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ವೈರಲ್ ವಿಡಿಯೋ (Viral Video)ದಲ್ಲಿ ಇರುವಂತೆ, ನಾಯಿ (Dog)ಯೊಂದು ರಸ್ತೆಯ ಮೇಲೆ ಕುಸಿದು ಬಿದ್ದು ನಿರ್ಜೀವವಾದಂತೆ ಇರುತ್ತದೆ. ಕೂಡಲೇ ಸ್ಥಳಕ್ಕೆ ಬಂದ ವ್ಯಕ್ತಿಯೊಬ್ಬರು ನಾಯಿಗೆ ತುರ್ತು ಸಿಪಿಆರ್ (ಕಾರ್ಡಿಯೋಪಲ್ಮನರಿ ರೆಸಸಿಟೇಶನ್) ನೀಡಿ ಜೀವ ತುಂಬಿದ್ದಾರೆ. ಅದರಂತೆ ನಿರ್ಜೀವವಾಗಿ ಬಿದ್ದಿದ್ದ ನಾಯಿ ಎದ್ದು ಓಡಾಡಲು ಪ್ರಾರಂಭಿಸಿದೆ.
ಇದನ್ನೂ ಓದಿ: Trending: ತಂದೆಯ ಹಾಡಿಗೆ ಇ ಐ ಇ ಐ ಓ… ಎಂದ ಮುದ್ದಾದ ಮಗು, ವಿಡಿಯೋ ವೈರಲ್
ಹೃದಯ ಮುಟ್ಟುವ ಈ ವಿಡಿಯೋವನ್ನು ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ವೀಕ್ಷಿಸಿ:
Sometimes Miracles are Just Good People with Kind Hearts.❤️ pic.twitter.com/iIncjYBQIi
— Awanish Sharan (@AwanishSharan) June 3, 2022
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮನಸೋತಿದ್ದು, ನಾಯಿಯನ್ನು ರಕ್ಷಿಸಿದ ವ್ಯಕ್ತಿಗೆ ಧನ್ಯವಾದ ಅರ್ಪಿಸಿದ್ದಾರೆ. “CPR ಅತ್ಯಗತ್ಯ ಜೀವ ಉಳಿಸುವ ಕ್ರಮವಾಗಿದೆ, ನಮ್ಮಲ್ಲಿ ಪ್ರತಿಯೊಬ್ಬರೂ ಅದರಲ್ಲಿ ಪರಿಣತರಾಗಿರಬೇಕು ಮತ್ತು ಪ್ರಾಣಿಗಳು ಕೂಡ ಈ ವಿಷಯದಲ್ಲಿ ನಮ್ಮ ದಯೆಗೆ ಅರ್ಹವಾಗಿವೆ” ಎಂದು ಓರ್ವ ಬಳಕೆದಾರ ಅಭಿಪ್ರಾಯ ಹಂಚಿಕೊಂಡಿದ್ದಾನೆ. ಇನ್ನೊಬ್ಬರು, “ಯಾರ ಹೃದಯವು ಇತರರಿಗಾಗಿ ನೆಲೆಸುತ್ತದೆಯೋ ಅವರು ಧನ್ಯರು” ಎಂದು ಹೇಳಿದ್ದಾರೆ. “ಮಾನವೀಯತೆಯ ಮೇಲಿನ ನಂಬಿಕೆಯನ್ನು ಪುನಃಸ್ಥಾಪಿಸಲಾಗಿದೆ” ಎಂದು ಮತ್ತೊಬ್ಬರು ಹೇಳಿಕೊಂಡಿದ್ದಾರೆ.
Miracles'll happens only when you trust on yourself before God.
— Shubham Srivastava (@Srishubham20) June 3, 2022
ಇದನ್ನೂ ಓದಿ: R Madhavan Birthday: ಮಾಧವನ್ ಜನ್ಮದಿನ; ಬಹುಭಾಷಾ ನಟನ ಈ 5 ಅತ್ಯುತ್ತಮ ಸಿನಿಮಾಗಳನ್ನು ಮಿಸ್ ಮಾಡಲೇಬೇಡಿ
Respect++ for this man ??❤?
— Jayesh suthar (@Jayeshs101010) June 3, 2022
ಸಿಪಿಆರ್ ತುರ್ತು ಜೀವ ಉಳಿಸುವ ವಿಧಾನವಾಗಿದ್ದು, ಹೃದಯ ಬಡಿತ ನಿಂತಾಗ ಆ ವ್ಯಕ್ತಿಯ ಅಥವಾ ಪ್ರಾಣಿಯ ಹೃದಯದ ಭಾಗವನ್ನು ಒತ್ತಬೇಕು, ಆ ಮೂಲಕ ಹೃದಯ್ಕಕೆ ಒತ್ತಡ ಹಾಕಬೇಕು. ಈ ವಿಧಾನವನ್ನು ಭಾರತದ ಎಲ್ಲಾ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಕಲಿಸಬೇಕು ಎಂದು ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರು ಮನವಿ ಮಾಡಿದ್ದಾರೆ.
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:25 pm, Fri, 3 June 22