ಹೆಡ್ ಕಾನ್ಸ್​ಟೇಬಲ್ ಆತ್ಮಹತ್ಯೆ; ಕಣ್ಣುಗಳನ್ನು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಟ್ರಾಫಿಕ್ ಪೊಲೀಸ್

|

Updated on: Jun 15, 2023 | 12:50 PM

ಅನಾರೋಗ್ಯ ಕಾರಣದಿಂದ ಮನನೊಂದು ಅಶೋಕನಗರ ಸಂಚಾರಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್​ಟೇಬಲ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕುಮಾರ್ ಆತ್ಮಹತ್ಯೆ ಮಾಡಿಕೊಂಡ ರ್ದುದೈವಿ.

ಹೆಡ್ ಕಾನ್ಸ್​ಟೇಬಲ್ ಆತ್ಮಹತ್ಯೆ; ಕಣ್ಣುಗಳನ್ನು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಟ್ರಾಫಿಕ್ ಪೊಲೀಸ್
ಆತ್ಮಹತ್ಯೆ ಮಾಡಿಕೊಂಡ ಪೊಲೀಸ್​
Follow us on

ಬೆಂಗಳೂರು: ಅನಾರೋಗ್ಯ ಕಾರಣದಿಂದ ಮನನೊಂದು ಅಶೋಕನಗರ ಸಂಚಾರಿ ಪೊಲೀಸ್(Traffic Police) ಠಾಣೆಯ ಹೆಡ್ ಕಾನ್ಸ್​ಟೇಬಲ್ ಆತ್ಮಹತ್ಯೆ(Suicide) ಮಾಡಿಕೊಂಡಿರುವ ಘಟನೆ ನಡೆದಿದೆ. ಕುಮಾರ್ ಆತ್ಮಹತ್ಯೆ ಮಾಡಿಕೊಂಡ ರ್ದುದೈವಿ. ಮಹಾಮಾರಿ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಹೆಡ್ ಕಾನ್ಸ್ ಟೇಬಲ್ ಕುಮಾರ್. ನನ್ನಿಂದ ಮಗಳಿಗೂ ಕಾಯಿಲೆ ಹರಡಿದೆ ಎಂಬ ಕಾರಣಕ್ಕೆ ಕುಮಾರ್ ಮನನೊಂದಿದ್ದರು. ಈ ಹಿನ್ನಲೆ ಡೈರಿ ಸರ್ಕಲ್ ಬಳಿಯಲ್ಲಿರುವ ತಾನು ವಾಸವಾಗಿದ್ದ ಪೊಲೀಸ್ ಕ್ವಾಟರ್ಸ್​ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕೆಲವು ವರ್ಷಗಳಿಂದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಹೆಡ್ ಕಾನ್ಸ್​ಟೇಬಲ್ ಕುಮಾರ್

ಹೌದು ಹೆಡ್ ಕಾನ್ಸ್​ಟೇಬಲ್ ಕುಮಾರ್ ಕೆಲವು ವರ್ಷಗಳಿಂದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದರು. ಈ ನಡುವೆ ಮಗಳಲ್ಲಿಯೂ ಕ್ಯಾನ್ಸರ್ ರೋಗ ಲಕ್ಷಣಗಳು ಪತ್ತೆಯಾಗಿತ್ತು. ಇದರಿಂದ ತೀವ್ರ ಕಂಗಲಾಗಿದ್ದ ಕುಮಾರ್​, ತಾನು ಚಿಕಿತ್ಸೆ ಪಡೆಯುವ ಜೊತೆಯಲ್ಲಿ ಮಗಳಿಗೂ ಸಹ ಟ್ರೀಟ್ಮೆಂಟ್ ಕೊಡಿಸಿದ್ದರು. ಇನ್ನು ಇತ್ತೀಚೆಗೆ ಮಗಳು ಚೇತರಿಸಿಕೊಳ್ಳುತ್ತಿದರು.. ಆದರೂ, ಸಹ ನನ್ನಿಂದಲೇ ಮಗಳಿಗೆ ಕ್ಯಾನ್ಸರ್ ಬಂದಿದೆ ಎಂದು ಮನನೊಂದು ನಿನ್ನೆ (ಜೂ.14) ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:Mysore News: ಹೊಟ್ಟೆನೋವು ತಾಳಲಾರದೆ ಕೆರೆಗೆ ಹಾರಿ ಬಾಲಕಿ ಆತ್ಮಹತ್ಯೆ

ಸಾವಿನಲ್ಲಿಯು ಸಹ ಸಾರ್ಥಕತೆ ಮೆರೆದಿರುವ ಕುಮಾರ್

ಇನ್ನು ಸಾವಿನಲ್ಲಿಯೂ ಸಹ ಹೆಡ್ ಕಾನ್ಸ್​ಟೇಬಲ್ ಕುಮಾರ್ ಸಾರ್ಥಕತೆ ಮೆರೆದಿದ್ದಾರೆ. ಹೌದು ತನ್ನ ಕಣ್ಣುಗಳನ್ನು ದಾನ ಮಾಡುವ ಮೂಲಕ ಮಾದರಿಯಾಗಿದ್ದಾರೆ. ಸದ್ಯ ಮೃತದೇಹವನ್ನು ಹುಟ್ಟೂರಾದ ಚನ್ನಗಿರಿಗೆ ತೆಗೆದುಕೊಂಡು ಹೋಗಲು ಸಿದ್ಧತೆ ನಡೆಸಲಾಗುತ್ತಿದೆ. ಎಲ್ಲರೊಂದಿಗೆ ಬೆರೆತು ಚೆನ್ನಾಗಿದ್ದ ಕುಮಾರ್​ ಇಂತಹ ನಿರ್ಧಾರ ತೆಗೆದುಕೊಂಡಿದ್ದು ಶೋಚನಿಯ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ