ಬೆಂಗಳೂರಿನಲ್ಲಿ ರಾತ್ರಿ ಅಬ್ಬರಿಸಿ ಬೊಬ್ಬಿರಿದ ಮಳೆ; ಬಿಟ್ಟೂ ಬಿಡದೆ ಕಾಡುತ್ತಿರೋ ವರುಣ, ಜನ ಹೈರಾಣ

ಬೆಂಗಳೂರಿನಲ್ಲಿ ರಾತ್ರಿ ಅಬ್ಬರಿಸಿ ಬೊಬ್ಬಿರಿದ ಮಳೆ; ಬಿಟ್ಟೂ ಬಿಡದೆ ಕಾಡುತ್ತಿರೋ ವರುಣ, ಜನ ಹೈರಾಣ

TV9 Web
| Updated By: ಆಯೇಷಾ ಬಾನು

Updated on:Nov 22, 2021 | 9:56 AM

ಮಳೆ ನಿಂತರು ಜನರ ಕಣ್ಣೀರು ಮಾತ್ರ ನಿಂತಿಲ್ಲ. ನಿನ್ನೆ ಸುರಿದ ಮಳೆಗೆ ಬೆಂಗಳೂರಿನಲ್ಲಿ ಭಾರಿ ಅವಾಂತರ ಎದುರಾಗಿದೆ. ಅಲ್ಲಾಳಸಂದ್ರ ಕೆರೆ ನೀರು ನುಗ್ಗಿ ಯಲಹಂಕ ಭಾಗದ ಕೆಲ ಪ್ರದೇಶ ಜಲಾವೃತಗೊಂಡಿದೆ. ಮನೆಗಳಿಗೆ ನೀರು ನುಗ್ಗಿ ಮನೆಯಲ್ಲಿದ್ದ ಅಕ್ಕಿ, ಬೇಳೆ, ಈರುಳ್ಳಿ, ಸಕ್ಕರೆ ಉಪ್ಪು ದಿನ ಬಳಕೆಯ ಎಲ್ಲಾ ವಸ್ತುಗಳು ನೀರುಪಾಲಾಗಿದೆ.

ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ಭಾರಿ ಮಳೆ ಅವಾಂತರ. ಮನೆ, ಅಂಗಡಿಗಳಿಗೆ ನುಗ್ಗಿರುವ ಅಪಾರ ಪ್ರಮಾಣದ ನೀರು. ವೆಂಕಟಸ್ವಾಮಪ್ಪ ಲೇಔಟ್‌ನ ಮನೆಗಳಿಗೆ ನುಗ್ಗಿರುವ ನೀರು. ರಾತ್ರಿ ಇಡೀ ನಿದ್ದೆಗೆಟ್ಟು ನೀರು ಹೊರಹಾಕಿದ ಕುಟುಂಬಸ್ಥರು. ಮನೆಯ ಸಂಪ್‌ಗಳಿಗೆ ಚರಂಡಿ ನೀರು ನುಗ್ಗಿದ ಹಿನ್ನೆಲೆ. ಕುಡಿಯುವುದಕ್ಕೂ ನೀರು ಇಲ್ಲದೆ ಜನರ ತೀವ್ರ ಪರದಾಟ. ಜನಪ್ರತಿನಿಧಿಗಳು, ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ.

ಮಳೆ ನಿಂತರು ಜನರ ಕಣ್ಣೀರು ಮಾತ್ರ ನಿಂತಿಲ್ಲ. ನಿನ್ನೆ ಸುರಿದ ಮಳೆಗೆ ಬೆಂಗಳೂರಿನಲ್ಲಿ ಭಾರಿ ಅವಾಂತರ ಎದುರಾಗಿದೆ. ಅಲ್ಲಾಳಸಂದ್ರ ಕೆರೆ ನೀರು ನುಗ್ಗಿ ಯಲಹಂಕ ಭಾಗದ ಕೆಲ ಪ್ರದೇಶ ಜಲಾವೃತಗೊಂಡಿದೆ. ಮನೆಗಳಿಗೆ ನೀರು ನುಗ್ಗಿ ಮನೆಯಲ್ಲಿದ್ದ ಅಕ್ಕಿ, ಬೇಳೆ, ಈರುಳ್ಳಿ, ಸಕ್ಕರೆ ಉಪ್ಪು ದಿನ ಬಳಕೆಯ ಎಲ್ಲಾ ವಸ್ತುಗಳು ನೀರುಪಾಲಾಗಿದೆ. ರಾತ್ರಿ ಇಡೀ ನಡುರೋಡಲ್ಲಿ ನಿವಾಸಿಗಳು ರಾತ್ರಿ ಕಳೆದಿದ್ದಾರೆ. ರಸ್ತೆ ಸಂಪೂರ್ಣ ನದಿಯಂತಾಗಿದೆ.

Published on: Nov 22, 2021 09:17 AM