ಬೆಂಗಳೂರು: ಕೊವಿಡ್ (Covid) ನಾಲ್ಕನೇ ಅಲೆಯನ್ನ ತಡೆಯಲು ಜನರು ಕೈ ಜೋಡಿಸಬೇಕಿದ್ದು, ಎಂದಿನಂತೆ ಮಾಸ್ಕ್‌ಗಳನ್ನು ಕಡ್ಡಾಯವಾಗಿ ಹಾಕಿಕೊಳ್ಳಬೇಕು ಎಂದು ಕೊವಿಡ್ ತಾಂತ್ರಿಕ ಸಲಹಾ ಸಮಿತಿ ಜತೆ ಸಭೆ ಬಳಿಕ ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿಕೆ ನೀಡಿದ್ದಾರೆ. ಯಾರಿಂದಲೂ ಉದಾಸೀನ ವರ್ತನೆ ಬೇಡ. ಬೂಸ್ಟರ್ ಡೋಸ್ ಹಾಕಿಸಿಕೊಳ್ಳಲು ನಿರ್ಲಕ್ಷ್ಯಬೇಡ. ಬಾಕಿ ಇರುವವರು 2, 3ನೇ ಡೋಸ್ ಕೂಡಲೇ ಹಾಕಿಸಿಕೊಳ್ಳಿ. ದಕ್ಷಿಣ ಕೊರಿಯಾ, ಹಾಂಕಾಂಗ್, ಬ್ರಿಟನ್, ಜರ್ಮನಿ ಮತ್ತು ಚೀನಾ ಸೇರಿ 8 ದೇಶಗಳಿಂದ ಬರುವವರಿಗೆ ಶೀಘ್ರವೇ ಮಾರ್ಗಸೂಚಿ ಹೊರಡಿಸುತ್ತೇವೆ. ಎಂಟು ದೇಶಗಳಲ್ಲಿ ರೂಪಾಂತರಿ XE ಸೋಂಕು ಹೆಚ್ಚಾಗುತ್ತಿದೆ. ದೇಶದಲ್ಲೂ ರೂಪಾಂತರಿ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಕೊವಿಡ್ ತಾಂತ್ರಿಕ ಸಲಹಾ ಸಮಿತಿ ಜೊತೆ ಸಭೆ ಮಾಡಲಾಯಿತು. ವಿದೇಶದಿಂದ ಬಂದವರಿಗೆ ಟೆಸ್ಟಿಂಗ್ ನಡೆಸಲು ತೀರ್ಮಾನ ಮಾಡಲಾಗಿದೆ. ಮಕ್ಕಳ ಮೇಲೆ ಹೆಚ್ಚು ನಿಗಾ ಇಡುವಂತೆ ತಿಳಿಸಿದ್ದು, 5 ಸಾವಿರ ಮಕ್ಕಳಿಗೆ ಟೆಸ್ಟಿಂಗ್ ಮಾಡಲು ಸಲಹೆ ನೀಡಿದ್ದಾರೆ ಎಂದು ಹೇಳಿದರು.
ಕೊವಿಡ್ ವ್ಯಾಕ್ಸಿನ್ ಬಗ್ಗೆ ಜನರು ನಿರ್ಲಕ್ಷ್ಯ ವಹಿಸಬೇಡಿ. ಪ್ರತಿಯೊಬ್ಬರೂ ಲಸಿಕೆ ಪಡೆಯಿರಿ. 12-14 ವರ್ಷದ ಶೇ.65.6ರಷ್ಟು ಮಕ್ಕಳು ಮೊದಲ ಡೋಸ್ ಪಡೆದಿದ್ದಾರೆ. 15-17 ವರ್ಷದ ಶೇ.79ರಷ್ಟು ಮಕ್ಕಳಿಗೆ ಮೊದಲ ಡೋಸ್ ನೀಡಲಾಗಿದ್ದು, ಸೆಕೆಂಡ್ ಡೋಸ್ ವ್ಯಾಕ್ಸಿನ್ ಶೇ.64.5ರಷ್ಟು ಜನ ಪಡೆದಿದ್ದಾರೆ. 15 ವರ್ಷದವರಿಗೆ ಮೊದಲ ಡೋಸ್ ಶೇ.100.4ರಷ್ಟು ಆಗಿದೆ. 2ನೇ ಡೋಸ್ ಶೇ.95.4ರಷ್ಟು ಜನರು ಪಡೆದುಕೊಂಡಿದ್ದಾರೆ. 18 ವರ್ಷ ಮೇಲ್ಪಟ್ಟ ಶೇ.101.8ರಷ್ಟು ಜನರಿಗೆ ಫಸ್ಟ್ ಡೋಸ್ ನೀಡಲಾಗಿದೆ. ಶೇ.97.4ರಷ್ಟು ಜನರು 2ನೇ ಡೋಸ್ ವ್ಯಾಕ್ಸಿನ್ ಪಡೆದಿದ್ದಾರೆ ಎಂದು ಹೇಳಿದರು.
ಐದು ರಾಜ್ಯಗಳಲ್ಲಿ ಕೊರೋನಾ ಹೆಚ್ಚಳದ ಹಿನ್ನೆಲೆ ಕರ್ನಾಟಕದ ನೆರೆ ರಾಜ್ಯದಲ್ಲಿ ಕೊರೋನಾ ಕೇಸ್ ಹೆಚ್ಚಳವಾಗಿದೆ. ನೆರೆ ರಾಜ್ಯದಲ್ಲಿ ಹೊಸ ತಳಿ XE ಪತ್ತೆ ಬೆನ್ನಲ್ಲೆ ಕರ್ನಾಟಕದಲ್ಲಿಯೂ ಹೈ ಅಲರ್ಟ್. ಜೊತೆಗೆ ನಿನ್ನೆ ಪ್ರಧಾನಿಯಿಂದ ಕೊರೋನಾ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸಂದೇಶ ನೀಡಿದ ಬೆನ್ನಲ್ಲೆ, ಕರ್ನಾಟಕದಲ್ಲಿಯೂ ಕೊರೋನಾ ಸ್ಥಿತಿಗತಿಯ ಬಗ್ಗೆ ತಾಂತ್ರಿಕ ಸಲಹಾ ಸಮಿತಿಯ ಜೊತೆಗೆ ಸಭೆ ಮಾಡಲಾಗಿದೆ. ನಾಲ್ಕನೆ ಅಲೆಯ ಬಗ್ಗೆಯೂ ಮಾಹಿತಿ ಸಚಿವರು ಪಡೆದುಕೊಂಡಿದ್ದಾರೆ. ಕರ್ನಾಟಕದಲ್ಲಿ ಕಳೆದ ಒಂದು ವಾರದಲ್ಲಿ ಕೊರೋನಾ ಕೇಸ್ಗಳ ಸಂಖ್ಯೆ ನಿಧಾನ ಗತಿಯಲ್ಲಿ ಏರಿಕೆಯಾಗಿದೆ. 5 – ಏಪ್ರಿಲ್- 29, 6- ಏಪ್ರಿಲ್- 33, 7- ಏಪ್ರಿಲ್ -63, 8- ಏಪ್ರಿಲ್-_77, 9- ಏಪ್ರಿಲ್ -46, 10- ಏಪ್ರಿಲ್- 56 ಕೇಸ್ಗಳು ಹೆಚ್ಚಾಗಿವೆ.
ಇದನ್ನೂ ಓದಿ:
CSK vs RCB: ಈ ಬಾರಿ ಆರ್ಸಿಬಿಯೇ ಫೆವರೆಟ್! ಚೆನ್ನೈ-ಬೆಂಗಳೂರು ಕದನದಲ್ಲಿ ಯಾವ ತಂಡ ಮೇಲುಗೈ ಸಾಧಿಸಿದೆ?
Shehbaz Sharif: ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಶೆಹಬಾಜ್ ಷರೀಫ್ ಅವಿರೋಧ ಆಯ್ಕೆ