ಗೌಪ್ಯತೆ ಕಾಪಾಡದೆ ಹೆಚ್​ಐವಿ ಸೋಂಕಿತ ಎಂದು ಕಿರುಕುಳ: ಬೆಂಗಳೂರಿನ ಕಂಪನಿ ವಿರುದ್ಧ ಎಫ್​ಐಆರ್ ದಾಖಲಿಸಿದ ಉದ್ಯೋಗಿ

ಕಾನೂನು ಪ್ರಕಾರ ಹೆಚ್​ಐವಿ ಸೋಂಕಿತರ ಬಗ್ಗೆ ಗೌಪ್ಯತೆ ಕಾಪಾಡಬೇಕು ಎಂಬುದು ಗಮನಾರ್ಹ. ಗೌಪ್ಯತೆ ಕಾಪಾಡದೆ ಹೆಚ್​ಐವಿ ಸೋಂಕಿತಗೆ ಕಿರುಕುಳ ನೀಡಿದ್ದ ಕಂಪನಿಯ ವಿರುದ್ಧ ಸಂತ್ರಸ್ತ ಉದ್ಯೋಗಿ ಕೋರ್ಟ್​ ಮೊರೆ ಹೋಗಿದ್ದರು. ಮಾನಕ್ಕೆ ಹಾನಿ ಮಾಡಿ ಗೌಪ್ಯತೆ ಕಾಪಾಡದೆ ಹಾಗೂ ಕೆಲಸ ಮಾಡಿಸಿಕೊಂಡು ಸಂಬಳ ಕೊಟ್ಟಿಲ್ಲ ಎಂದು ಕಂಪನಿಯ ವಿರುದ್ಧ ಉದ್ಯೋಗಿ ದೂರು ನೀಡಿದ್ದಾರೆ.

ಗೌಪ್ಯತೆ ಕಾಪಾಡದೆ ಹೆಚ್​ಐವಿ ಸೋಂಕಿತ ಎಂದು ಕಿರುಕುಳ: ಬೆಂಗಳೂರಿನ ಕಂಪನಿ ವಿರುದ್ಧ ಎಫ್​ಐಆರ್ ದಾಖಲಿಸಿದ ಉದ್ಯೋಗಿ
ಹೆಚ್​ಐವಿ ಸೋಂಕಿತ ಎಂದು ಕಿರುಕುಳ: ಬೆಂಗಳೂರಿನ ಕಂಪನಿ ವಿರುದ್ಧ ಎಫ್​ಐಆರ್
Edited By: ಸಾಧು ಶ್ರೀನಾಥ್​

Updated on: Oct 18, 2023 | 10:35 AM

ಬೆಂಗಳೂರು, ಅಕ್ಟೋಬರ್​ 18: ಹೆಚ್​ಐವಿ ಸೋಂಕಿತ ಎಂದು (HIV infected employee) ಬೇಧಭಾವ ತೋರಿ ಕಿರುಕುಳ ನೀಡಲಾಗಿದೆ ಎಂಬ ಆರೋಪದ ಹಿನ್ನೆಲೆ ಬೆಂಗಳೂರಿನ ಖಾಸಗಿ ಕಂಪನಿಯೊಂದರ (private company in Bangalore) ವಿರುದ್ಧ ಎಫ್​ಐಆರ್ ದಾಖಲು (FIR) ಮಾಡಲಾಗಿದೆ. ನ್ಯಾಯಾಲಯದ​ ಪಿಸಿಆರ್​​ ಮೂಲಕ ಮೈಕೋ ಲೇಔಟ್​ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​​ ದಾಖಲು ಮಾಡಿಕೊಳ್ಳಲಾಗಿದೆ.

ಬಾಧಿತ ಉದ್ಯೋಗಿಯನ್ನು ಹೆಚ್​​ಐವಿ ಇದೆ ಎಂದು ಪ್ರತ್ಯೇಕ ಜಾಗದಲ್ಲಿ ಕಂಪನಿ ಕೂರಿಸುತ್ತಿತ್ತಂತೆ. ಜೊತೆಗೆ ವರ್ಕ್​ ಫ್ರಮ್​​ ಹೋಮ್​​ ಮಾಡಲು ಸೂಚಿಸಿತ್ತಂತೆ. ನಂತರ ಹಾಜರಾತಿ ಇಲ್ಲ ಎಂದು ಸಂಬಳ ನೀಡದೆ ಕಿರುಕುಳ ನೀಡಿರುವ ಆರೋಪವೂ ಕೇಳಿಬಂದಿದೆ.

ಇದನ್ನೂ ಓದಿ:  ಮಗು ಅಳ್ತಿದೆ ನಿದ್ದೆ ಬರುತ್ತಿಲ್ಲ ಎಂದು ಅಣ್ಣನ ಮಗಳನ್ನೇ ಕತ್ತು ಹಿಸುಕಿ ಕೊಲೆ ಮಾಡಿದ ಮಹಿಳೆ

ಕಾನೂನು ಪ್ರಕಾರ ಹೆಚ್​ಐವಿ ಸೋಂಕಿತರ ಬಗ್ಗೆ ಗೌಪ್ಯತೆ ಕಾಪಾಡಬೇಕು (confidentiality) ಎಂಬುದು ಗಮನಾರ್ಹ. ಗೌಪ್ಯತೆ ಕಾಪಾಡದೆ ಹೆಚ್​ಐವಿ ಸೋಂಕಿತಗೆ ಕಿರುಕುಳ ನೀಡಿದ್ದ ಕಂಪನಿಯ ವಿರುದ್ಧ ಸಂತ್ರಸ್ತ ಉದ್ಯೋಗಿ ಕೋರ್ಟ್​ ಮೊರೆ ಹೋಗಿದ್ದರು. ಮಾನಕ್ಕೆ ಹಾನಿ ಮಾಡಿ ಗೌಪ್ಯತೆ ಕಾಪಾಡದೆ ಹಾಗೂ ಕೆಲಸ ಮಾಡಿಸಿಕೊಂಡು ಸಂಬಳ ಕೊಟ್ಟಿಲ್ಲ ಎಂದು ಕಂಪನಿಯ ವಿರುದ್ಧ ಉದ್ಯೋಗಿ ದೂರು ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜಗದೀಶ ಬಿ.

ಜಗದೀಶ್​ ಬಸವರಾಜು ಟಿವಿ9 ಕನ್ನಡದ ಜಿಲ್ಲಾ ವರದಿಗಾರರಾಗಿದ್ದಾರೆ. ಪ್ರಸ್ತುತ ಅವರು ತುಮಕುರು ಜಿಲ್ಲಾ ಸುದ್ದಿಗಳ ವರದಿ ಮಾಡುತ್ತಿದ್ದಾರೆ. ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿ. ಪತ್ರಿಕೋದ್ಯಮ ಓದಿದ್ದು, ವೃತ್ತಿ ಬದುಕು ಆರಂಭಿಸಿದ್ದು ಕೂಡಾ ಬೆಂಗಳೂರಿನಲ್ಲಿ. ಟಿವಿ9ನಲ್ಲಿ ಎಂಟು ವರ್ಷ ಸಹಿತ ಹತ್ತು ವರ್ಷದ ಕ್ರೈಂ ವರದಿಗಾರಿಕೆಯ ಅನುಭವದ ಜೊತೆ ಸದ್ಯ ೨೦೨೫ರಿಂದ ತುಮಕೂರು ಜಿಲ್ಲಾವರದಿಗಾರನಾಗಿ ಮಾದ್ಯಮದ ವೃತ್ತಿ ಬದುಕು ಮುಂದುವರೆದಿದೆ.

Read More
Loading...
Unable to load recommendations.
Follow Us