AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಧ್ಯಪ್ರದೇಶ: ಮಗು ಅಳ್ತಿದೆ ನಿದ್ದೆ ಬರುತ್ತಿಲ್ಲ ಎಂದು ಅಣ್ಣನ ಮಗಳನ್ನೇ ಕತ್ತು ಹಿಸುಕಿ ಕೊಲೆ ಮಾಡಿದ ಮಹಿಳೆ

ಮಗು ಅಳುತ್ತಿದೆ ನಿದ್ದೆ ಬರುತ್ತಿಲ್ಲ ಎಂದು ಅಣ್ಣನ ಮಗಳನ್ನೇ ಮಗಳನ್ನೇ ಮಹಿಳೆಯೊಬ್ಬಳು ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದ ಜಬಲ್​ಪುರದಲ್ಲಿ ನಡೆದಿದೆ. ಮಗು ಮಲಗಲು ಬಿಡುತ್ತಿಲ್ಲ ಎಂಬ ಕಾರಣಕ್ಕೆ ಮಗುವಿಗೆ ಹೊಡೆದು ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮಧ್ಯಪ್ರದೇಶ: ಮಗು ಅಳ್ತಿದೆ ನಿದ್ದೆ ಬರುತ್ತಿಲ್ಲ ಎಂದು ಅಣ್ಣನ ಮಗಳನ್ನೇ ಕತ್ತು ಹಿಸುಕಿ ಕೊಲೆ ಮಾಡಿದ ಮಹಿಳೆ
ಮಗು
Follow us
ನಯನಾ ರಾಜೀವ್
|

Updated on: Oct 18, 2023 | 9:19 AM

ಮಗು ಅಳುತ್ತಿದೆ ನಿದ್ದೆ ಬರುತ್ತಿಲ್ಲ ಎಂದು ಅಣ್ಣನ ಮಗಳನ್ನೇ ಮಗಳನ್ನೇ ಮಹಿಳೆಯೊಬ್ಬಳು ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದ ಜಬಲ್​ಪುರದಲ್ಲಿ ನಡೆದಿದೆ. ಮಗು ಮಲಗಲು ಬಿಡುತ್ತಿಲ್ಲ ಎಂಬ ಕಾರಣಕ್ಕೆ ಮಗುವಿಗೆ ಹೊಡೆದು ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಹನುಮಂತಲ್ ಪೊಲೀಸ್ ಠಾಣಾ ವ್ಯಾಪ್ತಿಯ ರಾಜೀವ್ ನಗರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹನುಮಂತಲ್ ಪೊಲೀಸ್ ಠಾಣೆ ಪ್ರಭಾರಿ ಎಂ ದ್ವಿವೇದಿ ಮಾತನಾಡಿ, ಮೊಹಮ್ಮದ್ ಶಕೀಲ್ ಎಂಬುವರ ಮಗಳು ಮಧ್ಯಾಹ್ನ ನಾಪತ್ತೆಯಾಗಿದ್ದಳು. ಕುಟುಂಬಸ್ಥರು ಬಾಲಕಿಗಾಗಿ ಹುಡುಕಾಟ ನಡೆಸಿದ್ದು, ಆಕೆ ಪತ್ತೆಯಾಗದ ಹಿನ್ನೆಲೆಯಲ್ಲಿ ಪೊಲೀಸರನ್ನು ಸಂಪರ್ಕಿಸಿದ್ದಾರೆ ಎಂದು ಅವರು ಹೇಳಿದರು. ಪ್ರದೇಶದ ಸಿಸಿಟಿವಿ ಕ್ಯಾಮೆರಾಗಳನ್ನು ಸ್ಕ್ಯಾನ್ ಮಾಡಿದ ನಂತರ ಕಾಣೆಯಾದ ಮಗುವಿನ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ದ್ವಿವೇದಿ ಹೇಳಿದರು.

ಮತ್ತಷ್ಟು ಓದಿ: ಉತ್ತರ ಪ್ರದೇಶ: ಮಲಮಗನನ್ನು ಕೊಂದು ಒಳಚರಂಡಿಗೆ ಎಸೆದಿದ್ದ ಮಹಿಳೆಯ ಬಂಧನ

ನಂತರ, ಪೊಲೀಸರು ಮನೆಯಲ್ಲಿಯೇ ಹುಡುಕಾಟ ನಡೆಸಿದ್ದಾರೆ. ಸೋಫಾದ ಕೆಳಗೆ ಶವ ಕಂಡುಬಂದಿದೆ. ಶಕೀಲ್ ತನ್ನ ಸಹೋದರರೊಂದಿಗೆ ಅದೇ ಮನೆಯಲ್ಲಿ ವಾಸಿಸುತ್ತಿದ್ದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಮಗು ತನ್ನ ಅತ್ತೆಯ ಕೋಣೆಗೆ ಹೋಗಿದ್ದಳು, ಅಲ್ಲೇ ಮಲಗುವುದಾಗಿ ಅಳಲು ಆರಂಭಿಸಿದ್ದಳು. ಆದರೆ ಬೇಡ ನಿನ್ನ ಅಮ್ಮನ ಜೊತೆ ಹೋಗು ಎಂದು ಹೇಳಿದ್ದಳು, ಆದರೂ ಮಗು ಅಳು ನಿಲ್ಲಿಸಿರಲಿಲ್ಲ ಹಾಗಾಗಿ ಕೋಪಗೊಂಡ ಮಹಿಳೆ ಮಗುವಿಗೆ ಹೊಡೆದು ಬಳಿಕ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ.

ಬಳಿಕ ಸೋಫಾ ಅಡಿ ಶವವನ್ನು ಬಚ್ಚಿಟ್ಟಿದ್ದಳು. ಆರೋಪಿ ಮಹಿಳೆಯನ್ನು ಬಂಧಿಸಿ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ