ಉತ್ತರ ಪ್ರದೇಶ: ಮಲಮಗನನ್ನು ಕೊಂದು ಒಳಚರಂಡಿಗೆ ಎಸೆದಿದ್ದ ಮಹಿಳೆಯ ಬಂಧನ

ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಮಲಮಗನನ್ನು ಕೊಂದು ಶವವನ್ನು ಒಳಚರಂಡಿ ತೊಟ್ಟಿಯಲ್ಲಿ ಬಚ್ಚಿಟ್ಟ ಆರೋಪದ ಮೇಲೆ ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸೋಮವಾರ, 11 ವರ್ಷದ ಶಾದಾಬ್ ಅಕ್ಟೋಬರ್ 15 ರಂದು ನಾಪತ್ತೆಯಾಗಿದ್ದ ಎಂದು ಪೊಲೀಸರು ದೂರು ಸ್ವೀಕರಿಸಿದ್ದರು.

ಉತ್ತರ ಪ್ರದೇಶ: ಮಲಮಗನನ್ನು ಕೊಂದು ಒಳಚರಂಡಿಗೆ ಎಸೆದಿದ್ದ ಮಹಿಳೆಯ ಬಂಧನ
ಅಪರಾಧ
Follow us
ನಯನಾ ರಾಜೀವ್
|

Updated on: Oct 18, 2023 | 8:40 AM

ಉತ್ತರ ಪ್ರದೇಶ(Uttar Pradesh)ದ ಗಾಜಿಯಾಬಾದ್‌ನಲ್ಲಿ ಮಲಮಗನನ್ನು ಕೊಂದು ಶವವನ್ನು ಒಳಚರಂಡಿ ತೊಟ್ಟಿಯಲ್ಲಿ ಬಚ್ಚಿಟ್ಟ ಆರೋಪದ ಮೇಲೆ ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸೋಮವಾರ, 11 ವರ್ಷದ ಶಾದಾಬ್ ಅಕ್ಟೋಬರ್ 15 ರಂದು ನಾಪತ್ತೆಯಾಗಿದ್ದ ಎಂದು ಪೊಲೀಸರು ದೂರು ಸ್ವೀಕರಿಸಿದ್ದರು.

ಪೊಲೀಸರು ಸಮೀಪದ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಭಾನುವಾರ ಸಂಜೆ ಬಾಲಕ ಗೋವಿಂದ್ ಪುರಿ ಪ್ರದೇಶದಲ್ಲಿರುವ ತನ್ನ ಮನೆಯಿಂದ ಹೊರಬರಲಿಲ್ಲ ಎನ್ನುವುದು ತಿಳಿದುಬಂದಿತ್ತು.

ಇದು ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು, ಪೊಲೀಸರು ಮನೆಯನ್ನು ಕೂಲಂಕುಷವಾಗಿ ಪರಿಶೀಲಿಸಿದಾಗ ಒಳಚರಂಡಿ ತೊಟ್ಟಿಯಲ್ಲಿ ಅಪ್ರಾಪ್ತರ ಶವ ಪತ್ತೆಯಾಗಿದೆ ಎಂದು ಹೆಚ್ಚುವರಿ ಆಯುಕ್ತ ಜ್ಞಾನ್ ಪ್ರಕಾಶ್ ರೈ ತಿಳಿಸಿದ್ದಾರೆ.

ಪೊಲೀಸರು ಸಂತ್ರಸ್ತೆಯ ಕುಟುಂಬ ಸದಸ್ಯರನ್ನು ವಿಚಾರಣೆಗೊಳಪಡಿಸಿದಾಗ, ಆತನ ಮಲತಾಯಿ ರೇಖಾ ತನ್ನ ಸ್ನೇಹಿತೆ ಪೂನಂ ಸಹಾಯದಿಂದ ಶಾಬಾದ್‌ನನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾಳೆ ಎಂದು ಅವರು ಹೇಳಿದರು.

ಮತ್ತಷ್ಟು ಓದಿ: ಕಾರವಾರ: ಕತ್ತು ಸೀಳಿ ಪತ್ನಿಯನ್ನೇ ಭೀಕರವಾಗಿ ಹತ್ಯೆಗೈದ ಪತಿ, ಎರಡು ಮಕ್ಕಳು ಅನಾಥ

ಇದೊಂದು ಪೂರ್ವಯೋಜಿತ ಕೊಲೆ ಎಂದು ರೇಖಾ ಪೊಲೀಸರಿಗೆ ತಿಳಿಸಿದ್ದು, ಶಾಬಾದ್ ಹೊರಗೆ ಆಟವಾಡಿಕೊಂಡು ಮನೆಗೆ ಹಿಂದಿರುಗಿದಾಗ ಈ ಕೃತ್ಯ ಎಸಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ರಾಹುಲ್ ಸೇನ್ ಅವರ ಎರಡನೇ ಪತ್ನಿಯಾಗಿರುವ ರೇಖಾ ಅವರು ತಮ್ಮ ಮಲಮಗನನ್ನು ಇಷ್ಟಪಡುತ್ತಿರಲಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾರೆ.

ಅವರು ಸಲೂನ್ ನಡೆಸುತ್ತಿದ್ದಾರೆ ಮತ್ತು ಮೂರು ವರ್ಷಗಳ ಹಿಂದೆ ತನ್ನ ಮೊದಲ ಹೆಂಡತಿಗೆ ವಿಚ್ಛೇದನ ನೀಡಿದ್ದರು ಎಂದು ಅವರು ಹೇಳಿದರು. ರೇಖಾ ತನ್ನ ಪತಿ ಮತ್ತು ಅತ್ತೆಯ ಮುಂದೆ ತನ್ನ ಮಲಮಗನ ಅಪಹರಣದ ಕತೆಯನ್ನು ಹೆಣೆದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಶಾಬಾದ್‌ನನ್ನು ಕೊಲ್ಲಲು ಸಹಾಯ ಮಾಡಿದ ರೇಖಾ ಮತ್ತು ಆಕೆಯ ಸ್ನೇಹಿತೆ ಪೂನಂ ಅವರನ್ನು ಇಂದು ಸಂಜೆ ಜೈಲಿಗೆ ಕಳುಹಿಸಲಾಗಿದೆ ಎಂದು ಎಸಿಪಿ ರೈ ತಿಳಿಸಿದ್ದಾರೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ