AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಣಪತಿ ಮೆರವಣಿಗೆ ವೇಳೆ ಗಲಾಟೆ: ಈ ಗಣೇಶ ಬಲಿ ಕೇಳುತ್ತಿದೆ ಎಂದು ಓರ್ವನ ಕೊಲೆ

ಈ ಗಣೇಶ ಬಲಿ ಕೇಳುತ್ತಿದೆ ಎಂದು ಜೋರಾಗಿ ಕೂಗಿ, ಲಾಂಗು, ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಆರೋಪಿಗಳು ಕೊಲೆ ಮಾಡಿದ್ದಾರೆ. ಜಗಳ ಬಿಡಿಸಲು ಬಂದಿದ್ದ ಶ್ರೀನಿವಾಸ್ ತಾಯಿಗೆ ಮತ್ತು ರಂಜಿತ್​​ ಎಂಬುವರಿಗೆ ಚಾಕುವಿನಿಂದ ಇರಿದಿರುವ ಘಟನೆ ಬೆಂಗಳೂರಿನ ನಗರದ ಆಡುಗೋಡಿಯ ರಾಮಾಂಜನೇಯ ದೇವಾಲಯ ರಸ್ತೆಯಲ್ಲಿ ತಡರಾತ್ರಿ ನಡೆದಿದೆ.

ಗಣಪತಿ ಮೆರವಣಿಗೆ ವೇಳೆ ಗಲಾಟೆ: ಈ ಗಣೇಶ ಬಲಿ ಕೇಳುತ್ತಿದೆ ಎಂದು ಓರ್ವನ ಕೊಲೆ
ಶ್ರೀನಿವಾಸ್​ (ಎಡಚಿತ್ರ) ಗಣೇಶ (ಬಲಚಿತ್ರ)
Shivaprasad B
| Edited By: |

Updated on:Oct 09, 2023 | 11:25 AM

Share

ಬೆಂಗಳೂರು ಅ.09: ನಗರದ ಆಡುಗೋಡಿಯ ರಾಮಾಂಜನೇಯ ದೇವಾಲಯ ರಸ್ತೆಯಲ್ಲಿ ತಡರಾತ್ರಿ ನಡೆದ ಗಣೇಶ (Ganesha Festival) ವಿಸರ್ಜನೆ ಮೆರವಣೆಗೆ ವೇಳೆ ಗಲಾಟೆ ನಡೆದಿದ್ದು, ಓರ್ವನ ಕೊಲೆಯಾಗಿದೆ. ಶ್ರೀನಿವಾಸ್ ಕೊಲೆಯಾದ ವ್ಯಕ್ತಿ. ದುಷ್ಕೃತ್ಯ ಎಸಗಿ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದು, ಆರೋಪಿಗಳಿಗಾಗಿ ಅಡುಗೋಡಿ ಪೊಲೀಸರು (Police) ಬಲೆಬೀಸಿದ್ದಾರೆ. ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಡ್ಯಾನ್ಸ್​​​ ಮಾಡದಂತೆ ಶ್ರೀನಿವಾಸ್​​ ಅವರಿಗೆ ಆರೋಪಿಗಳು ಮೊದಲೆ ಎಚ್ಚರಿಕೆ ನೀಡಿದ್ದರು.

ಕಳೆದ ತಿಂಗಳು 19ನೇ ತಾರೀಖಿನಂದು ಶ್ರೀನಿವಾಸ್ ತಂಡ ಗಣೇಶ ಕೂರಿಸಿ ಮೆರವಣಿಗೆ ಮಾಡಿತ್ತು. ಅವತ್ತು ಡ್ಯಾನ್ಸ್ ಮಾಡುವ ವಿಚಾರಕ್ಕೆ ವಿನಯ್ ಹಾಗೂ ಶ್ರೀನಿವಾಸ್ ಮಧ್ಯೆ ಗಲಾಟೆ ಆಗಿತ್ತು. ಇದಾದ  ಹಲವು ದಿನಗಳ ನಂತರ ವಿನಯ್ ಮತ್ತು ತಂಡ ಗಣೇಶ ಕೂಡಿಸಿದ್ದರು. ರವಿವಾರ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ಮಾಡಿದ್ದಾರೆ. ರಾತ್ರಿ 9ಗಂಟೆ ಸುಮಾರಿಗೆ ಗಣೇಶ ಮೆರವಣಿಗೆ, ಕೊಲೆಯಾದ ಶ್ರೀನಿವಾಸ್ ಮನೆ ಮುಂದಿನ ರಸ್ತೆಯಲ್ಲಿ ಹೋಗುತ್ತಿತ್ತು. ಈ ವೇಳೆ ಶ್ರೀನಿವಾಸ್​ ವಿನಯ್ ಮತ್ತು ಆತನ ತಂಡಕ್ಕೆ ಡ್ಯಾನ್ಸ್ ಮಾಡಬೇಡ ಎಂದಿದ್ದನು. ಈ ವಿಚಾರಕ್ಕೆ ಜಗಳ ಶುರುವಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಸಿನಿಮಾ ಕಥೆಯಂತೆ ನಡೆದ ರಿಯಲ್ ಸ್ಟೋರಿ: ಚಾಕು ಹಿಡಿದು ಬೆದರಿಸಲು ಹೋದವ ಕೊಲೆಯಾದ

ನಮಗೆ ಡ್ಯಾನ್ಸ್ ಮಾಡಬೇಡಿ ಅಂತ ಹೇಳುತ್ತೀಯಾ ಅಂತ, ಈ ಗಣೇಶ ಬಲಿ ಕೇಳುತ್ತಿದೆ ಎಂದು ಜೋರಾಗಿ ಕೂಗಿ ಡ್ರ್ಯಾಗರ್​​ನಿಂದ ವಿನಯ್​​ ಮತ್ತು ಆತನ ತಂಡ ಶ್ರೀನಿವಾಸ್​​ ಮತ್ತು ಅಜಿತ್​​ಗೆ ಇರಿದಿದ್ದಾರೆ.  ಈ ವೇಳೆ ಜಗಳ ಬಿಡಿಸಲು ಬಂದಿದ್ದ ಶ್ರೀನಿವಾಸ್ ತಾಯಿ ಇಂದಿರಾ ಅವರಿಗೂ ಇರಿದಿದ್ದಾರೆ. ಘಟನೆಯಲ್ಲಿ ತೀರ್ವ ರಕ್ತಸ್ರಾವದಿಂದ ಶ್ರೀನಿವಾಸ್ ಮೃತಪಟ್ಟಿದ್ದಾನೆ. ಸೇಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನು ಗಲಾಟೆ ಸಂದರ್ಭದಲ್ಲಿ ಓರ್ವ ರೌಡಿಶೀಟರ್​ ಇದ್ದ ಬಗ್ಗೆ ಮಾಹಿತಿ ದೊರೆತಿದೆ. ಆಡುಗೋಡಿ ಪೊಲೀಸ್​​ ಠಾಣೆಯಲ್ಲಿ ವಿನಯ್  ಅಲಿಯಾಸ್​​ ಪಟ್ರು, ಅಲೆಕ್ಸ್, ರಂಜಿತ್ ಅಲಿಯಾಸ್​​​ ಕುಟ್ಟಿ, ಪ್ರಶಾಂತ್ ಅಲಿಯಾಸ್​​ ಕುಳ್ಳ ವಿರುದ್ದ ಎಫ್ಐಆರ್ ದಾಖಲಾಗಿದೆ.

ಕೊಲೆ ಮಾಡಬೇಂತ ಪಲ್ಲಕ್ಕಿ, ಮೆರವಣಿಗೆ ತೆಗೆದುಕೊಂಡು ಬಂದರು ಸಾರ್

ನನ್ನ ಕಣ್ಮುಂದೆನೇ ಮಗನನ್ನ ಕೊಲೆ ಮಾಡಿದರು. ಕೊಲೆ ಮಾಡಬೇಂತ ಪಲ್ಲಕ್ಕಿ, ಮೆರವಣಿಗೆ ತೆಗೆದುಕೊಂಡು ಬಂದರು ಸಾರ್.  ಮೆರವಣಿಗೆ ವೇಳೆ ಬಂದು ನನ್ನ ಮಗನನ್ನು ಕೊಲೆ ಮಾಡಿದರು. ಬಾ ಇಲ್ಲಿ ಏನ್​ ಮಾಡುತ್ತೀಯಾ ಅಂತಾ ಅವಾಜ್ ಹಾಕಿ ಕರೆದರು. ನಂತರ ನಾನು ನನ್ನ ಮಗನ್ನ ಬೇರೆ ದಾರಿಯಿಂದ ಮನೆಗೆ ಕಳುಹಿಸಿದೆ. ಆಮೆಲೆ ಆಕಡೆಯಿಂದ ಮನೆ ಹತ್ರ ಬಂದು ಚುಚ್ಚಿ ಸಾಯಿಸಿದರು. ಕಣ್ಮುಂದೆನೆ ಚುಚ್ಚಿದರು, ಮಗನ ಕರಳು ಹೊರಗ್ ಬಂತು. ನಾನು ಬಿಡಿಸೋಕೆ ಹೋದೆ, ನಂಗೂ ಚಾಕು ಇಂದ ಚುಚ್ಚಿದರು ಅಂತ ಮೃತ ಶ್ರೀನಿವಾಸ್​ ತಾಯಿ ಇಂದಿರಾ ಕಣ್ಣೀರು ಹಾಕಿದ್ದಾರೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:07 am, Mon, 9 October 23

ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ನ್ಯೂಇಯರ್ ಸೆಲೆಬ್ರೇಷನ್​​​ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!​
ನ್ಯೂಇಯರ್ ಸೆಲೆಬ್ರೇಷನ್​​​ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!​
ಅಭಿಮಾನಿಗಳ ಜೊತೆ ಸಿನಿಮಾ ನೋಡುತ್ತಿರುವ ಉದ್ದೇಶ ಏನು? ಸುದೀಪ್ ಉತ್ತರ
ಅಭಿಮಾನಿಗಳ ಜೊತೆ ಸಿನಿಮಾ ನೋಡುತ್ತಿರುವ ಉದ್ದೇಶ ಏನು? ಸುದೀಪ್ ಉತ್ತರ
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ: ಸುದೀಪ್
ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ: ಸುದೀಪ್
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ
ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ
ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ
ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ
ಪುರಿ ಜಗನ್ನಾಥ ದೇವಸ್ಥಾನದಲ್ಲಿ ಈ ವರ್ಷದ ಕೊನೆಯ ಸೂರ್ಯಾಸ್ತ ಕಂಡಿದ್ದು ಹೀಗೆ
ಪುರಿ ಜಗನ್ನಾಥ ದೇವಸ್ಥಾನದಲ್ಲಿ ಈ ವರ್ಷದ ಕೊನೆಯ ಸೂರ್ಯಾಸ್ತ ಕಂಡಿದ್ದು ಹೀಗೆ
ಬೆಂಗಳೂರಲ್ಲಿ ಪಬ್​​ಗಳತ್ತ ಮುಖ ಮಾಡಿದ ಜನ: ಸಿಲಿಕಾನ್​​ ಸಿಟಿ ಫುಲ್​​ ಝಗಮಗ
ಬೆಂಗಳೂರಲ್ಲಿ ಪಬ್​​ಗಳತ್ತ ಮುಖ ಮಾಡಿದ ಜನ: ಸಿಲಿಕಾನ್​​ ಸಿಟಿ ಫುಲ್​​ ಝಗಮಗ