ಬೆಂಗಳೂರಿನಲ್ಲಿ ಸಿನಿಮಾ ಕಥೆಯಂತೆ ನಡೆದ ರಿಯಲ್ ಸ್ಟೋರಿ: ಚಾಕು ಹಿಡಿದು ಬೆದರಿಸಲು ಹೋದವ ಕೊಲೆಯಾದ

ಬಾಪೂಜಿ ಲೇಔಟ್​ನ 9ನೇ ಕ್ರಾಸ್​ನಲ್ಲಿ ಕಳ್ಳತನಕ್ಕೆ ಬಂದಿದ್ದಾರೆ ಎಂದು ಆರೋಪಿಸಿ ಇಬ್ಬರು ವ್ಯಕ್ತಿಗಳು ಹಾಗೂ ಮನೆ ಮಾಲೀಕನ ನಡುವೆ ಜಗಳ ನಡೆದಿತ್ತು. ಈ ಜಗಳ ಕೊಲೆಯಲ್ಲಿ ಅಂತ್ಯ ಕಂಡಿದೆ. ಮನೆ ಮಾಲೀಕನೇ ತನ್ನ ಮನೆಗೆ ಕನ್ನ ಹಾಕಲು ಬಂದಿದ್ದ ಖದೀಮನೊಬ್ಬನ ಕೊಲೆ ಮಾಡಿದ್ದಾನೆ. ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

ಬೆಂಗಳೂರಿನಲ್ಲಿ ಸಿನಿಮಾ ಕಥೆಯಂತೆ ನಡೆದ ರಿಯಲ್ ಸ್ಟೋರಿ: ಚಾಕು ಹಿಡಿದು ಬೆದರಿಸಲು ಹೋದವ ಕೊಲೆಯಾದ
ಆರೋಪಿ ರಾಜೇಂದ್ರ ಪ್ರಸಾದ್
Follow us
Jagadisha B
| Updated By: ಆಯೇಷಾ ಬಾನು

Updated on:Oct 05, 2023 | 9:00 AM

ಬೆಂಗಳೂರು, ಅ.05: ಬೆಂಗಳೂರಿನಲ್ಲಿ ಸಿನಿಮಾ ಕಥೆಯಂತೆ ರಿಯಲ್ ಸ್ಟೋರಿಯೊಂದು ನಡೆದಿದೆ. ಚಾಕು ಹಿಡಿದು ಬೆದರಿಸಲು ಹೋದವರಲ್ಲೊಬ್ಬನ ಕೊಲೆ (Murder) ಮಾಡಲಾಗಿದ್ದು ಮತ್ತೊಬ್ಬ ಪರಾರಿಯಾಗಿದ್ದಾನೆ. ಬಾಪೂಜಿ ಲೇಔಟ್​ನ 9ನೇ ಕ್ರಾಸ್​ನಲ್ಲಿ ಕಳ್ಳತನಕ್ಕೆ (Theft) ಬಂದಿದ್ದಾರೆ ಎಂದು ಆರೋಪಿಸಿ ಇಬ್ಬರು ವ್ಯಕ್ತಿಗಳು ಹಾಗೂ ಮನೆ ಮಾಲೀಕನ ನಡುವೆ ಜಗಳ ನಡೆದಿತ್ತು. ಈ ಜಗಳ ಕೊಲೆಯಲ್ಲಿ ಅಂತ್ಯ ಕಂಡಿದೆ. ಮನೆ ಮಾಲೀಕನೇ ತನ್ನ ಮನೆಗೆ ಕನ್ನ ಹಾಕಲು ಬಂದಿದ್ದ ಖದೀಮನೊಬ್ಬನ ಕೊಲೆ ಮಾಡಿದ್ದಾನೆ. ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಖಾದಿರ್ ಅಹಮದ್ (28) ಕೊಲೆಯಾದ ವ್ಯಕ್ತಿ. ರಾಜೇಂದ್ರ ಪ್ರಸಾದ್ ಬಂಧಿತ ಆರೋಪಿ.

ಕೊಲೆಯಾದ ಖಾದಿರ್ ಅಹಮದ್ ತನ್ನ ಗೆಳೆಯನ ಜೊತೆ ನಿರ್ಮಾಣ ಹಂತದ ಕಟ್ಟಡದ ಬಳಿ ಬಂದಿದ್ದ. ಈ ವೇಳೆ ಕಟ್ಟಡದಲ್ಲಿ ಕಳ್ಳತನಕ್ಕೆ ಯತ್ನ ನಡೆದಿದೆ ಎಂದು ಆರೋಪಿಸಿ ಖಾದಿರ್ ಹಾಗೂ ಆತನ ಗೆಳೆಯನ ಮುಂದೆ ಪ್ರತ್ಯಕ್ಷನಾಗಿದ್ದ ಮನೆ ಮಾಲೀಕ ರಾಜೇಂದ್ರ ಪ್ರಸಾದ್ ಜಗಳ ಶುರು ಮಾಡಿದ್ದರು. ಇನ್ನು ಇದೇ ವೇಳೆ ಸ್ಥಳದಲ್ಲಿದ್ದ ಕಟ್ಟಡದ ಕಾರ್ಮಿಕನೋರ್ವ, ಈ ಹಿಂದೆ ಸಹ ಇವರಿಬ್ಬರು ಕಳ್ಳತನ ಎಸಗಿದ್ದಾಗಿ ಹೇಳಿದ್ದ. ಇಷ್ಟೆಲ್ಲಾ ಆದ ಬಳಿಕ ಖಾದಿರ್ ಸ್ನೇಹಿತ ತನ್ನ ಬಳಿ ಇದ್ದ ಚಾಕುವನ್ನು ತೆಗೆದು ಮನೆ ಮಾಲೀಕ ರಾಜೇಂದ್ರ ಪ್ರಸಾದ್ ಮೇಲೆ ಹಲ್ಲೆಗೆ ಯತ್ನಿಸಿದ್ದ. ತಕ್ಷಣ ಎಚ್ಚೆತ್ತ ಪ್ರಸಾದ್, ಹಲ್ಲೆಯಿಂದ ತಪ್ಪಿಸಿಕೊಂಡು ಚಾಕುವನ್ನು ಕಿತ್ತುಕೊಂಡಿದ್ದ.

ಇದನ್ನೂ ಓದಿ: ಹಾಲಶ್ರೀ ಸ್ವಾಮೀಜಿಯ ಮತ್ತೊಂದು ಬಿಜೆಪಿ ಟಿಕೆಟ್‌ ಹಗರಣ ಬಯಲಿಗೆ: ಮಹತ್ವದ ಸಾಕ್ಷ್ಯ ಕಲೆಹಾಕಿದ ಪೊಲೀಸ್ರು

ಇದೇ ವೇಳೆ ಅಲ್ಲೇ ಇದ್ದ ಸನಿಕೆಯನ್ನು ಎತ್ತಿಕೊಂಡು ಖಾದಿರ್ ಕೂಡ ಹಲ್ಲೆಗೆ ಬಂದಿದ್ದ. ಆಗ ಕೈಯಲ್ಲಿದ್ದ ಚಾಕುವಿನಿಂದ ಖಾದಿರ್ ಎದೆಗೆ ಇರಿದ್ದಾರೆ. ಘಟನೆ ನಡೆಯುತ್ತಿದ್ದಂತೆ ಖಾದಿರ್ ಸ್ನೇಹಿತ ಸ್ಥಳದಿಂದ ಪರಾರಿಯಾಗಿದ್ದು, ಮಾಡಿದ ತಪ್ಪಿಕೆ ಕಣ್ಣೀರು ಹಾಕುತ್ತ ರಾಜೇಂದ್ರ ಪ್ರಸಾದ್ ಅವರು ಖಾದಿರ್​ನನ್ನು ಸ್ಥಳೀಯ ಆಸ್ಪತ್ರೆಗೆ ತಾವೇ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸಿದೇ ಆಸ್ಪತ್ರೆಯಲ್ಲಿ ಖಾದಿರ್ ಮೃತಪಟ್ಟಿದ್ದಾನೆ. ಚಂದ್ರಲೇಔಟ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 304 ಅಡಿ ಪ್ರಕರಣ ದಾಖಲಾಗಿದ್ದು ಆರೋಪಿ ರಾಜೇಂದ್ರ ಪ್ರಸಾದ್ ಬಂಧಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕನ್ನಿಗ್ಯಾಂ ರಸ್ತೆಯ ಬಸ್ ನಿಲ್ದಾಣದ ತಂಗುದಾಣ ಎಗರಿಸಿದ ಕಳ್ಳರು

ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯ ಕೊಂಚ ದೂರದಲ್ಲೇ ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದಾರೆ. ಪ್ರಯಾಣಿಕರ ತಂಗುದಾಣವನ್ನೇ ಕಳ್ಳರು ಕದ್ದಿದ್ದಾರೆ. ಕನ್ನಿಗ್ಯಾಂ ರಸ್ತೆಯ ಬಸ್ ನಿಲ್ದಾಣದ ತಂಗುದಾಣ ಕಳ್ಳತನವಾಗಿದೆ. 10 ಲಕ್ಷ ವೆಚ್ಚದಲ್ಲಿ ತಂಗುದಾಣ ನಿರ್ಮಾಣ ಮಾಡಲಾಗಿತ್ತು. ಖಾಸಗಿ ಕಂಪನಿ ಸ್ಟೀಲ್ ಬಳಸಿ ತಂಗುದಾಣ ನಿರ್ಮಾಣ ಮಾಡಿತ್ತು. ಆಗಸ್ಟ್ ನಲ್ಲಿ ಭೇಟಿ ನೀಡಿದ ವೇಳೆ ತಂಗುದಾಣ ನಾಪತ್ತೆಯಾಗಿರುವುದು ಪತ್ತೆಯಾಗಿದೆ. ಈ ಬಗ್ಗೆ ಬಿಬಿಎಂಪಿ ಬಳಿ ಕಂಪನಿ ವಿಚಾರಿಸಿದೆ. ಬಿಬಿಎಂಪಿ ವಿಚಾರಿಸಿದಾಗ ತಂಗುದಾಣ ತೆರುವು ಮಾಡಿಲ್ಲ ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ. ಬಿಬಿಎಂಪಿ ಮಾಹಿತಿ ಹಿನ್ನಲೆ ಕಂಪನಿ ಸೆಪ್ಟೆಂಬರ್ 30ರಂದು ದೂರು ದಾಖಲಿಸಿದೆ. ಘಟನೆ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗೆ ಹೈಗ್ರೌಂಡ್ ಪೊಲೀಸರು ಬಲೆ ಬೀಸಿದ್ದು ಘಟನಾ ಸ್ಥಳದ ಸಿಸಿಟಿವಿ ಆಧರಿಸಿ ಶೋಧ ಆರಂಭವಾಗಿದೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:53 am, Thu, 5 October 23

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ