Bitcoin Case: ಬಿಟ್ ಕಾಯಿನ್ ಹಗರಣದ ತನಿಖೆ ವೇಳೆ ಸಿಕ್ಕಿಬಿದ್ದ ನಟೋರಿಯಸ್ ಹ್ಯಾಕರ್
bitcoin Case: ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡಿದ್ದ ಬಿಟ್ ಕಾಯಿನ್ ಹಗರಣದ ತನಿಖೆ ವೇಳೆ ನಟೋರಿಯಸ್ ಹ್ಯಾಕರ್ ಸಿಕ್ಕಿಬಿದ್ದಿದ್ದಾನೆ. ಶ್ರೀಕಿಗೂ ಮುನ್ನವೇ ಹ್ಯಾಕಿಂಗ್ ನಲ್ಲಿ ಕೈಚಳಕ ತೋರಿ ಭೂಗತವಾಗಿದ್ದ ಪಂಜಾಬ್ ಮೂಲದ ನಟೋರಿಯಸ್ ಹ್ಯಾಕರ್ ರಾಜೇಂದ್ರಸಿಂಗ್ ನನ್ನು ಎಸ್ಐಟಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಬೆಂಗಳೂರು, (ಅಕ್ಟೋಬರ್ 05): ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡಿದ್ದ ಬಿಟ್ ಕಾಯಿನ್ ಹಗರಣದ(bitcoin Case) ತನಿಖೆ ವೇಳೆ ನಟೋರಿಯಸ್ ಹ್ಯಾಕರ್ (hacker) ಸಿಕ್ಕಿಬಿದ್ದಿದ್ದಾನೆ. ಕಳೆದ ನಾಲ್ಕು ವರ್ಷಗಳಿಂದ ಭೂಗತವಾಗಿದ್ದ ಇಂಟರ್ ನ್ಯಾಷನಲ್ ಹ್ಯಾಕರ್ನನ್ನು ಎಸ್ ಐಟಿ ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶ್ರೀಕಿಗೂ ಮುನ್ನವೇ ಹ್ಯಾಕಿಂಗ್ ನಲ್ಲಿ ಕೈಚಳಕ ತೋರಿ ಭೂಗತವಾಗಿದ್ದ ಪಂಜಾಬ್ ಮೂಲದ ನಟೋರಿಯಸ್ ಹ್ಯಾಕರ್ ರಾಜೇಂದ್ರಸಿಂಗ್ ನನ್ನು ಎಸ್ಐಟಿ ಬಂಧಿಸಿದ್ದು, ಈ ಪ್ರಕರಣದಲ್ಲಿ ಮತ್ತಷ್ಟು ಸತ್ಯ ಹೊರಬರುವ ಸಾಧ್ಯತೆಗಳಿವೆ.
ಈ ಹ್ಯಾಕರ್ ರಾಜೇಂದ್ರಸಿಂಗ್ ಸರ್ಕಾರಿ ಹಾಗೂ ಖಾಸಗಿ ವೆಬ್ ಸೈಟ್ ಗಳನ್ನು ಹ್ಯಾಕ್ ಮಾಡುತ್ತಿದ್ದ. ಕಳೆದ ನಾಲ್ಕು ವರ್ಷಗಳಿಂದ ಕೇಂದ್ರ ತನಿಖಾ ಸಂಸ್ಥೆಗಳು ಈ ಹ್ಯಾಕರ್ಗಾಗಿ ಹುಡುಕಾಟ ಮಾಡುತ್ತಿದ್ದವು. ಇದೀಗ ಸಿಐಡಿ ಎಡಿಜಿಪಿ ಮನೀಶ್ ಖರ್ಬೀಕರ್ ನೇತೃತ್ವದ ತಂಡ ಬಂಧಿಸಿದ್ದು, ಸದ್ಯ ಮುಂದಿನ ತನಿಖಾ ದೃಷ್ಟಿಯಿಂದ ಎಸ್ಐಟಿ, ಕೇಂದ್ರ ತನಿಖಾ ಸಂಸ್ಥೆಗಳ ನೆರವು ಕೇಳಿದೆ.
ಸಿಸಿಬಿ ಈಗಾಗಲೇ ಶ್ರೀಕಿಯಿಂದ ಸುಮಾರು 9 ಕೋಟಿ ರೂಪಾಯಿ ಮೌಲ್ಯದ 31 ಬಿಟ್ ಕಾಯಿನ್ ವಶಕ್ಕೆ ಪಡೆದಿದೆ. ತನಿಖೆ ವೇಳೆಯಲ್ಲಿ ಪಂಜಾಬ್ನ ರಾಜೇಂದ್ರ ಸಿಂಗ್ ಹೆಸರು ಕೇಳಿಬಂದಿತ್ತು. ಹೀಗಾಗಿ ಎಸ್ ಐಟಿ ತಂಡ ಹ್ಯಾಕರ್ ರಾಜೇಂದ್ರಸಿಂಗ್ ಎಂಬಾತನ ಪತ್ತೆಗೆ ಬಲೆ ಬೀಸಿತ್ತು. ಸದ್ಯ ರಾಜೇಂದ್ರ ಸಿಂಗ್ನನ್ನು ಪಂಜಾಬ್ನಲ್ಲಿ ಬಂಧಿಸಿ ವಿಚಾರಣೆ ಮಾಡುತ್ತಿದೆ. ರಾಜೇಂದ್ರ ಸಿಂಗ್ ವಿಚಾರಣೆ ಬಳಿಕ ಮತ್ತಷ್ಟು ಸತ್ಯ ಹೊರಬರುವ ಸಾಧ್ಯತೆಗಳಿವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:55 am, Thu, 5 October 23