ಬಿಟ್​ ಕಾಯಿನ್ ಪ್ರಕರಣ: ವಿಚಾರಣೆ ನಡೆಸಿದ್ದ ಪೊಲೀಸ್ ಅಧಿಕಾರಿಗಳಿಗೆ ಧಮ್ಕಿ, ಶ್ರೀಕಿಯ ಸ್ಫೋಟ ಅಂಶ ಬೆಳಕಿಗೆ

ಈ ಹಿಂದೆ ಶ್ರೀಕಿ ವಿಚಾರಣೆ ನಡೆಸಿದ್ದ ಪೊಲೀಸ್ ಅಧಿಕಾರಿಗಳಿಗೆ ಧಮ್ಕಿ ಹಾಕಿದ್ದ. ನಿಮ್ಮನ್ನು ಬಟ್ಟೆ ಬಿಚ್ಚಿಸದೇ ಬಿಡುವುದಿಲ್ಲ. ನಿಮ್ಮನ್ನು ಯಾರನ್ನು ನಾನು ಬಿಡುವುದಿಲ್ಲ. ನಮ್ಮ ಸರ್ಕಾರ ಬಂದಿದೇ ನೋಡ್ತಿರಿ ಏನ್ ಮಾಡ್ತಿವಿ ಎಂದು ಧಮ್ಕಿ ಹಾಕಿದ್ದನಂತೆ. ಈಗಾಗಲೇ ತನಿಖೆಯಲ್ಲಿ ನಡೆಸಿಕೊಳ್ಳುತ್ತಿರುವ ರೀತಿ ಮತ್ತು ಶ್ರೀಕಿ ತನಿಖೆಯಲ್ಲಿ ಭಾಗಿಯಾಗ್ತಿರುವ ಬಗ್ಗೆ ದೂರು ದಾಖಲಾಗಿದೆ. ವಿಚಾರಣೆಗೆ ಒಳಪಡುತ್ತಿರುವ ಪೊಲೀಸ್ ಅಧಿಕಾರಿಗಳು ಡಿಜಿಪಿ (ಸಿಐಡಿ) ರವರಿಗೆ ದೂರು ಸಲ್ಲಿಸಿದ್ದಾರೆ.

ಬಿಟ್​ ಕಾಯಿನ್ ಪ್ರಕರಣ: ವಿಚಾರಣೆ ನಡೆಸಿದ್ದ ಪೊಲೀಸ್ ಅಧಿಕಾರಿಗಳಿಗೆ ಧಮ್ಕಿ, ಶ್ರೀಕಿಯ ಸ್ಫೋಟ ಅಂಶ ಬೆಳಕಿಗೆ
ಹ್ಯಾಕರ್ ಶ್ರೀಕೃಷ್ಣ ಆಲಿಯಾಸ್ ಶ್ರೀಕಿ
Follow us
Prajwal Kumar NY
| Updated By: ಆಯೇಷಾ ಬಾನು

Updated on: Sep 07, 2023 | 3:25 PM

ಬೆಂಗಳೂರು, ಸೆ.07: ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ್ದ ಬಿಟ್ ಕಾಯಿನ್ ಅಕ್ರಮದ ಬಗ್ಗೆ ವಿಶೇಷ ತನಿಖಾ ತಂಡ (ಎಸ್.ಟಿ.ಐ.) ತನಿಖೆ ನಡೆಸುತ್ತಿದೆ. ಆದರೆ ಎಸ್​ಐಟಿ ಅಧಿಕಾರಿಗಳ ವಿರುದ್ಧವೇ ಗಂಭೀರ ಆರೋಪ ಕೇಳಿ ಬಂದಿದೆ. ಆರೋಪಿ ಅಂತರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಆಲಿಯಾಸ್ ಶ್ರೀಕಿ ಹೇಳಿಕೊಟ್ಟಂತೆ ಎಸ್​ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೆ ವಿಚಾರಣೆ ನಡೆಸಿದ್ದ ಪೊಲೀಸ್ ಅಧಿಕಾರಿಗಳಿಗೆ ಶ್ರೀಕಿ ಧಮ್ಕಿ ಹಾಕಿದ್ದನಂತೆ. ಎಸ್​ಐಟಿಯಲ್ಲಿರುವ ಹಿರಿಯ ಅಧಿಕಾರಿಗಳು ತನಿಖೆಯಲ್ಲಿ ಹೆಚ್ಚಾಗಿ ಭಾಗವಹಿಸುತ್ತಿಲ್ಲ. ಕೆಳ ಹಂತದ ಅಧಿಕಾರಿಗಳು ಮಾತ್ರ ಬಿಟ್ ಕಾಯಿನ್ ತನಿಖೆ ಮಾಡ್ತಿದ್ದಾರೆ. ಇದರಿಂದ ಎಸ್​ಐಟಿ ತನಿಖೆಯ ಬಗ್ಗೆ ಅಸಮಾಧಾನವಿದೆ. ಪೊಲೀಸ್ ಅಧಿಕಾರಿಗಳ ವಿಚಾರಣೆಗೆ ಆರೋಪಿಯ ಮುಂದಿಟ್ಟುಕೊಂಡು ಕೆಲಸ ಮಾಡ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಈ ಹಿಂದೆ ತನಿಖೆ ವೇಳೆ, ಕೆಲವು ರಾಜಕಾರಣಿಗಳು ಮತ್ತು ಪೊಲೀಸ್ ಅಧಿಕಾರಿಗಳು ಬಿಟ್ ಕಾಯಿನ್ ಅಕ್ರಮ ವರ್ಗಾವಣೆ ದಂಧೆಯಲ್ಲಿ ಕೈ ಜೋಡಿಸಿರುವ ಬಗ್ಗೆ ಆರೋಪಿ ಶ್ರೀಕಿ ಬಾಯ್ಬಿಟ್ಟಿದ್ದ. ಹೀಗಾಗಿ ಅಧಿಕಾರಿಗಳ ತನಿಖೆ ನಡೆಯುತ್ತಿದ್ದು ತನಿಖೆ ವೇಳೆ ಶ್ರೀಕಿ ಹೇಳಿಕೊಂಡಂತೆ ನಡೆಯುತ್ತಿದೆ ಎನ್ನಲಾಗುತ್ತಿದೆ. ಪೊಲೀಸ್ ಇಲಾಖೆಯಲ್ಲಿ ಸುಮಾರು ಇಪತ್ತು ವರ್ಷಗಳ ಕಾಲ ಕೆಲಸ ಮಾಡಿರುವ ಅಧಿಕಾರಿಗಳಿದ್ದಾರೆ. ಈ ಅಧಿಕಾರಿಗಳ ವಿಚಾರಣೆ ನಡೆಸುವಾಗ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಹೇಳಿದಂತೆ ತನಿಖೆ ನಡೆಸುತ್ತಿದ್ದಾರೆ ಎಂಬ ಬಗ್ಗೆ ಅರೋಪ ಕೇಳಿ ಬಂದಿದೆ. ಶ್ರೀಕಿ ಎಸ್​ಐಟಿ ಅಧಿಕಾರಿಗಳಿಗೆ ಏನು ಮಾಡಬೇಕು ಎಂದು ಹೇಳಿ ಕೊಡ್ತಿದ್ದಾನೆ. ಪೊಲೀಸ್ ಅಧಿಕಾರಿಗಳ ವಿಚಾರಣೆ ವೇಳೆ ಸಹ ಶ್ರೀಕಿ ಪ್ರಶ್ನೆ ಮಾಡುವ ಹಂತಕ್ಕೆ ಬಿಟ್ಟುಕೊಂಡಿದ್ದಾರೆ ಎಂಬ ಆರೋಪಗಳು ಹೇಳಿ ಬಂದಿವೆ.

ಇದನ್ನೂ ಓದಿ: ಬೆಂಗಳೂರು: ಬಿಟ್ ಕಾಯಿನ್ ಪ್ರಕರಣ -ಎಸ್ಐಟಿ ಯಿಂದ ತನಿಖೆ ಚುರುಕು

ಎಸ್​ಐಟಿ ತನಿಖಾಧಿಕಾರಿ ಎದುರಲ್ಲೇ ಧಮ್ಕಿ

ಈ ಹಿಂದೆ ಶ್ರೀಕಿ ವಿಚಾರಣೆ ನಡೆಸಿದ್ದ ಪೊಲೀಸ್ ಅಧಿಕಾರಿಗಳಿಗೆ ಧಮ್ಕಿ ಹಾಕಿದ್ದ. ನಿಮ್ಮನ್ನು ಬಟ್ಟೆ ಬಿಚ್ಚಿಸದೇ ಬಿಡುವುದಿಲ್ಲ. ನಿಮ್ಮನ್ನು ಯಾರನ್ನು ನಾನು ಬಿಡುವುದಿಲ್ಲ. ನಮ್ಮ ಸರ್ಕಾರ ಬಂದಿದೇ ನೋಡ್ತಿರಿ ಏನ್ ಮಾಡ್ತಿವಿ ಎಂದು ಧಮ್ಕಿ ಹಾಕಿದ್ದನಂತೆ. ಈಗಾಗಲೇ ತನಿಖೆಯಲ್ಲಿ ನಡೆಸಿಕೊಳ್ಳುತ್ತಿರುವ ರೀತಿ ಮತ್ತು ಶ್ರೀಕಿ ತನಿಖೆಯಲ್ಲಿ ಭಾಗಿಯಾಗ್ತಿರುವ ಬಗ್ಗೆ ದೂರು ದಾಖಲಾಗಿದೆ. ವಿಚಾರಣೆಗೆ ಒಳಪಡುತ್ತಿರುವ ಪೊಲೀಸ್ ಅಧಿಕಾರಿಗಳು ಡಿಜಿಪಿ (ಸಿಐಡಿ) ರವರಿಗೆ ದೂರು ಸಲ್ಲಿಸಿದ್ದಾರೆ.

ಎಸ್​ಐಟಿ ಸ್ಥಾಪನೆ ಉದ್ದೇಶ ತನಿಖೆ ವೇಳೆ ಕಾರ್ಯರೂಪಕ್ಕೆ ಬಂದಿಲ್ಲ?

ಬಿಟ್ ಕಾಯಿನ್​ಗಳನ್ನು ಪೊಲೀಸ್ ಅಧಿಕಾರಿಗಳ ಮೂಲಕ ರಾಜಕಾರಣಿಗಳು ಪಡೆದಿದ್ದಾರೆ ಎಂಬ ಆರೋಪ ಈ ಹಿಂದೆ ಕೇಳಿ ಬಂದಿತ್ತು. ಅದೇ ಕಾರಣಕ್ಕೆ ಎಸ್​ಐಟಿ ಸ್ಥಾಪನೆ ಮಾಡಲಾಗಿತ್ತು. ಆದರೆ ಎಸ್​ಐಟಿ ಯಾವ ತನಿಖೆಯೂ ಸರಿಯಾಗಿ ಮಾಡುತ್ತಿಲ್ಲ. ಏಕೆಂದರೆ ಎಸ್​ಐಟಿ ಇದುವರೆಗೆ ಒಂದೇ ಒಂದು ಬಿಟ್ ಕಾಯಿನ್ ವಶಕ್ಕೆ ಪಡೆದಿಲ್ಲ. ಕೊನೆ ಪಕ್ಷ ಬಿಟ್ ಕಾಯಿನ್ ಯಾರಿಗೆ ತಲುಪಿದೆ ಎಂಬು ಬಗ್ಗೆಯೂ ಮಾಹಿತಿ ಇಲ್ಲ. ಅಸಲಿಗೆ ಬಿಟ್ ಕಾಯಿನ್​ಗಳ ವ್ಯಾಲೇಟ್ ಕೊಟ್ಟು ಇದೇ ಅಕೌಂಟ್ ಎಂದು ಶ್ರೀಕಿ ಈ ಹಿಂದೆ ನಂಬಿಸಿದ್ದ. ಹೀಗಾಗಿ ಒಮ್ಮೆ ಸೀಜ್ ಮಾಡಿದ್ದ ಕಾಯಿನ್​ಗಳನ್ನು ಮತ್ತೆ ವ್ಯಾಲೇಟ್ ನಿಂದ ಕೊಲ್ಕತ್ತದ ರಾಬಿನ್ ಖಂಡೇವಾಲ ಎಂಬ ಆರೋಪಿ ಬೇರೆಡೆಗೆ ವರ್ಗಾವಣೆ ಮಾಡಿದ್ದ. ಡಿಜಿಟಲ್ ಫೂಟ್ ಪ್ರಿಂಟ್ ಸಹ ಮತ್ತೆ ಮಾಡಿಲ್ಲ. ಕೇವಲ ತನಿಖೆ ಮಾಡಿದ್ದ ಅಧಿಕಾರಿಗಳು ಮಾಡಿದ್ದ ಯಡವಟ್ಟುಗಳ ಹುಡುಕುವ ಕೆಲಸ ಮಾಡ್ತಿದೆ ಎಂದು ಎಸ್​ಐಟಿ ವಿರುದ್ಧ ಆರೋಪ ಕೇಳಿ ಬಂದಿದೆ. ಎಫ್​ಐಆರ್ ನಲ್ಲಿ ಹೊಸ ಫೈಲ್ ಕ್ರಿಯೇಟ್ ಆಗಿದೆ ಎಂದು ನಮೂದು ಮಾಡಲಾಗಿತ್ತು. ಆದ್ರೆ ಆ ಫೈಲ್ ಗಳು ಯಾವುವು ಹೊಸದಾಗಿ ಯಾವ ದಾಖಲೆಗಳು ಸೇರಿಸಲಾಗಿದೆ ಎಂಬ ಪ್ರಶ್ನೆಗೆ ಉತ್ತರವೇ ಇಲ್ಲ. ವಶಕ್ಕೆ ಪಡೆದ ಡಿಜಿಟಲ್ ಗ್ಯಾಜೇಟ್ ಗಳನ್ನು ಒಮ್ಮೆ ಆನ್ ಮಾಡಿದ್ರು ಸಹ ಒಂದು ಫೈಲ್ ಕ್ರಿಯೇಟ್ ಆಗಿರತ್ತೆ. ಇಲ್ಲಿ ಸಿಸಿಬಿ ಅಧಿಕಾರಿಗಳು ಮೊಬೈಲ್ ಲ್ಯಾಪ್ ಟಾಪ್ ಕೋರ್ಟ್ ಅನುಮತಿ ಪಡೆಯುವ ಮೊದಲೆ ಆನ್ ಮಾಡಿದ್ರು. ಅದಕ್ಕೆ ಫೈಲ್ ಕ್ರೀಯೇಟ್ ಆಗಿದೆ. ಹೊಸದಾಗಿ ಯಾವ ದಾಖಲೆಗಳು ಡಿಲೀಟ್ ಮತ್ತು ಸೇರ್ಪಡೆ ಮಾಡಿರುವುದಕ್ಕೆ ಸಾಕ್ಷಿ ಇದುವರೆಗೆ ಸಿಕ್ಕಿಲ್ಲ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?