ಹಾಲಶ್ರೀ ಸ್ವಾಮೀಜಿಯ ಮತ್ತೊಂದು ಬಿಜೆಪಿ ಟಿಕೆಟ್‌ ಹಗರಣ ಬಯಲಿಗೆ: ಮಹತ್ವದ ಸಾಕ್ಷ್ಯ ಕಲೆಹಾಕಿದ ಪೊಲೀಸ್ರು

ಚೈತ್ರಾ ಹಾಗೂ ಹಾಲಶ್ರೀ ಪ್ರಕರಣ ಇಡೀ ರಾಜ್ಯದಲ್ಲಿ ಸಾಕಷ್ಟು ಸಂಚಲನ ಮೂಡಿಸಿದೆ‌. ಈ ಇನ್ನೊಂದು ಪ್ರಕರಣದಲ್ಲಿ ಹಾಲಶ್ರೀ ಸ್ವಾಮೀಜಿಗೆ ಉರುಳು ಗಟ್ಟಿಯಾಗುವ ಲಕ್ಷಣಗಳಿವೆ. ಟಿಕೆಟ್‌ಗಾಗಿ ಹಣ ಒಂದು ಕೋಟಿ ಹಣ ಪಡೆದಿರುವ ಆರೋಪದಲ್ಲಿ ಹಾಲಶ್ರೀ ಸ್ವಾಮೀಜಿ ಮುಂಡರಗಿ ಫುಲ್ ಗ್ರೀಲ್ ಮಾಡಿದ್ದಾರೆ. ನಿನ್ನೆ ಸ್ಥಳ ಮಹಜರು ನಡೆಸಿ ಸಾಕ್ಷ್ಯ ಕಲೆಹಾಕಿದ್ದಾರೆ.

ಹಾಲಶ್ರೀ ಸ್ವಾಮೀಜಿಯ ಮತ್ತೊಂದು ಬಿಜೆಪಿ ಟಿಕೆಟ್‌ ಹಗರಣ ಬಯಲಿಗೆ: ಮಹತ್ವದ ಸಾಕ್ಷ್ಯ ಕಲೆಹಾಕಿದ ಪೊಲೀಸ್ರು
ಅಭಿನವ ಹಾಲಶ್ರೀ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Oct 05, 2023 | 8:23 AM

ಗದಗ, (ಅಕ್ಟೋಬರ್ 05): ವಿಧಾನಸಭೆ ಚುನಾವಣೆಯಲ್ಲಿ (Karnataka Assembly Elections 2023) ಟಿಕೆಟ್ ಕೊಡಿಸುವುದಾಗಿ ಕೋಟಿ ಕೋಟಿ ರೂ. ವಂಚನೆ ಮಾಡಿದ ಪ್ರಕರಣ ರಾಜ್ಯದಲ್ಲಿ ಭಾರಿ ಸುದ್ದಿ ಮಾಡಿದೆ. ಮಂಗಳೂರು ಮೂಲದ ಉದ್ಯಮಿಗೆ ವಂಚನೆ ಬೆನ್ನಲ್ಲೇ ಗದಗ ಜಿಲ್ಲೆಯಲ್ಲೂ ಅಭಿನವ ಹಾಲಶ್ರೀ(Abhinava Halashri) ವಿರುದ್ಧ ವಂಚನೆ ಕೇಸ್ ದಾಖಲಾಗಿತ್ತು. ಈಗ ಬೆಂಗಳೂರಿನ ಜೈಲಿನಲ್ಲಿದ್ದ ಹಾಲಶ್ರೀ ಸ್ವಾಮೀಯನ್ನು ಮುಂಡರಗಿ ಪೊಲೀಸ್ರು ಬಾಡಿ ವಾರಂಟ್ ಮೇಲೆ ಆಚೆ ಕರೆದುಕೊಂಡು ಬಂದು ಎಲ್ಲೆಡೆ ಸ್ಥಳ ಮಹಜರು ಮಾಡಿದ್ದಾರೆ.

ಗದಗ ಜಿಲ್ಲೆಯ ಶಿರಹಟ್ಟಿ ಮತಕ್ಷೇತ್ರ ಶಾಸಕ ಆಗಬೇಕು ಎಂದು ಟಿಕೆಟ್‌ಗಾಗಿ ಪೈಪೊಟಿ ನಡೆಸುತ್ತಿದ್ದ ಸಂಜಯ್ ಚವಡಾಳಗೆ ಹಾಲಶ್ರೀ ಸ್ವಾಮೀ ಟಿಕೆಟ್ ಕೊಡಿಸೋದಾಗಿ ಒಂದು ಕೋಟಿ ರೂ. ಪಡೆದಿದ್ದರಂತೆ. ಹೀಗಾಗಿ ಸಂಜಯ್ ಚವಡಾಳ ಸೆಪ್ಟೆಂಬರ್ 25ರಂದು ಮುಂಡರಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ರು.. ಆ ಪ್ರಕರಣ ಸಂಬಂಧ ಹಾಲಶ್ರೀ ಸ್ವಾಮೀಜಿಯ ವಿಚಾರಣೆ ಮಾಡಲಾಗ್ತಿದೆ. ನಿನ್ನೆ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿಯ ಹಾಲಶ್ರೀ ಮಠಕ್ಕೆ ಕರೆದುಕೊಂಡು ಹೋಗಿ ಮಹಜರು ಮಾಡಲಾಗಿದೆ. ಮುಂಡರಗಿ ಪಟ್ಟಣದ ಹಣಕಾಸಿನ ವ್ಯವಹಾರ ನಡೆದ ವಿವಿಧ ಸ್ಥಳಗಳಲ್ಲೂ ಸ್ಥಳ ಮಹಜರು ಮಾಡಲಾಗಿದೆ.

ಇದನ್ನೂ ಓದಿ: ಗ್ರಾ. ಪಂ PDO ಗೆ ಶಾಸಕನಾಗುವ ಲಾಲಸೆ! ಶಿರಹಟ್ಟಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಒಂದು ಕೋಟಿ ರೂ ವಂಚಿಸಿದ ಅಭಿನವ ಸ್ವಾಮೀಜಿ? ಗದಗ SP ಹೇಳಿದ್ದೇನು

ಮುಂಡರಗಿ ಪಟ್ಟಣದ ಕೊಪ್ಪಳ ರಸ್ತೆಯಲ್ಲಿ ದೂರುದಾರ ಪಿಡಿಓ ಸಂಜಯ್ ಚವಡಾಳ ಮನೆಗೆ ಹಾಲಶ್ರೀ ಸ್ವಾಮೀಜಿಯನ್ನು ಕರೆದುಕೊಂಡು ಮುಂಡರಗಿ ಪೊಲೀಸರು ಹೋಗಿದ್ರು. ಆದ್ರೆ, ದೂರುದಾರ ಸಂಜಯ್ ಚವಡಾಳ ಮನೆಯಲ್ಲಿ ಇಲ್ಲದ ಕಾರಣ ಪೊಲೀಸ್ರು ಸ್ಥಳ ಮಹಜರು ಮಾಡದೇ ವಾಪಸ್ಸಾಗಿದ್ದಾರೆ. ಪಿಡಿಓ ಸಂಜಯ ಅವರು, ಮೊದಲ ಹಂತದಲ್ಲಿ, 10 ಲಕ್ಷ ರೂ, ಎರಡನೆಯ ಹಂತದಲ್ಲಿ 40 ಲಕ್ಷ ರೂ, ಮೂರನೇಯ ಹಂತದಲ್ಲಿ 50 ಲಕ್ಷ ರೂಪಾಯಿ ಹಣವನ್ನು ನೀಡಿದ್ದಾರಂತೆ.‌ ಹೀಗಾಗಿ ಆ ನಿಟ್ಟಿನಲ್ಲಿ ಸ್ಥಳ ಮಹಜರು ಮಾಡಿ ಇದೀಗ ಬೆಂಗಳೂರು ಸೆಂಟ್ರಲ್ ಜೈಲಿಗೆ ಶಿಫ್ಟ್ ಮಾಡಲಾಗಿದೆ.

ಹಾಲಶ್ರೀ ಬೆಂಗಳೂರು ಜೈಲಿಗೆ ಶಿಫ್ಟ್..

ಸ್ಥಳ ಮಹಜರು ಹಾಗೂ ವಿಚಾರಣೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅಭಿನವ ಹಾಲಶ್ರೀ ಸ್ವಾಮೀಜಿಯನ್ನು ಗದಗ ಜಿಲ್ಲೆಯ‌ ಮುಂಡರಗಿ ಪೊಲೀಸರು ವಾಪಸ್ ಬೆಂಗಳೂರು ಕೇಂದ್ರ ಕಾರಗೃಹಕ್ಕೆ ಶಿಫ್ಟ್ ಮಾಡಿದ್ದಾರೆ. ಅಕ್ಟೊಬರ್ 3 ಮತ್ತು 4 ಎರಡು‌ ದಿನ ತೀವ್ರ ವಿಚಾರಣೆ ಮಾಡಿದ‌ ಪೊಲೀಸರು, ನಿನ್ನೆ (ಅಕ್ಟೋಬರ್ 04) ರಾತ್ರಿಯೇ ಬೆಂಗಳೂರ ಜೈಲಿಗೆ ಬಿಟ್ಟುಬಂದಿದ್ದಾರೆ.

ಹಾಲಶ್ರೀ ಹಣ ಪಡೆದಿರುವ ಸಾಕ್ಷ್ಯಗಳು ಸಾಬೀತಾಗಿವೆ ಎನ್ನಲಾಗಿದ್ದು, ಸಂಪೂರ್ಣ ತನಿಖೆಯಿಂದ ಸತ್ಯ ಹೊರಗಡೆ ಬರಬೇಕಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:20 am, Thu, 5 October 23

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ