ಬೆಂಗಳೂರು: ಪೊಲೀಸರು ಅಂದ್ರೆ ಸಮಾಜದಲ್ಲಾಗುವ ಅನ್ಯಾಯದ ವಿರುದ್ಧ ಹೋರಾಡುವ ಸಿಪಾಯಿಗಳು. ತಪ್ಪು ನಡೆಯುವುದನ್ನು ತಡೆದು ಶಿಕ್ಷೆ ಕೊಡುವವರು. ಜನರನ್ನ ಕಾಯೋ ರಕ್ಷಕ ಅಂತಾ ಜನ ಪೊಲೀಸರಿಗೆ ಸೆಲ್ಯೂಟ್ ಹೊಡೀತಾರೆ. ಆದ್ರೆ, ಇಲ್ಲಿ ಸಿಎಂ ಬೊಮ್ಮಾಯಿ ನಿವಾಸದ ಬಳಿಯೇ ಬಂದೋ ಬಸ್ತ್ಗೆ ನಿಯೋಜನೆಗೊಂಡಿದ್ದ ಇಬ್ಬರು ಪೊಲೀಸರು ಗಾಂಜಾ ಡೀಲಿಂಗ್ ಕೇಸ್ನಲ್ಲಿ ಸಿಕ್ಕಿಬಿದ್ದು ಪೊಲೀಸ್ ಇಲಾಖೆಯ ಮಾನ ಕಳೆದಿದ್ದಾರೆ. ಸದ್ಯ ಈ ಬಗ್ಗೆ ಮಾತನಾಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ಆ ಇಬ್ಬರು ಪೊಲೀಸರನ್ನು ಅಮಾನತು ಮಾಡಿದರೆ ಸಾಲದು. ಅವರಿಬ್ಬರನ್ನೂ ಕೆಲಸದಿಂದಲೇ ವಜಾ ಮಾಡಲು ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಈ ಘಟನೆ ಸಂಬಂಧ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಅವರಿಬ್ಬರನ್ನೂ ಕೇವಲ ಅಮಾನತು ಮಾಡಿದರೆ ಸಾಲದು. ಇಬ್ಬರನ್ನೂ ಕೆಲಸದಿಂದ ವಜಾ ಮಾಡಲು ಸೂಚಿಸಿದ್ದೇನೆ. ಇನ್ನು ಅರೆಸ್ಟ್ ಆದ ಇನ್ಸ್ಪೆಕ್ಟರ್ ಅಮಾನತಿನ ಬಗ್ಗೆ ವರದಿ ತರಿಸಿಕೊಳ್ಳಲಾಗುತ್ತೆ. ಹೆಣ್ಣೂರು ಇನ್ಸ್ಪೆಕ್ಟರ್ ಮೇಲೆ ಕೂಡ ಆರೋಪ ಕೇಳಿ ಬಂದಿದೆ. ಅವರ ಬಗ್ಗೆಯೂ ವರದಿ ತರಿಸಿಕೊಂಡು ಕ್ರಮ ಕೈಗೊಳ್ಳುತ್ತೇವೆ ಎಂದರು.
ಪೊಲೀಸರಲ್ಲಿ ಕರ್ತವ್ಯಲೋಪ, ಕಂಡು ಬಂದ್ರೆ ಸಂಸ್ಪೆಂಡ್ ಅಷ್ಟೇ ಅಲ್ಲ ಡಿಸ್ಮಿಸ್ ಮಾಡಲು ಸೂಚಿಸ್ತೇನೆ. ಅಪರಾಧ ಕೃತ್ಯ ತಡೆಯಬೇಕಾದ ಪೊಲೀಸರಿಂದಲೇ ಅಪರಾಧ ಸಲ್ಲದು. ಒಂದೇ ತಿಂಗಳಲ್ಲಿ ನಾಲ್ಕು ಪ್ರತ್ಯೇಕ ಪ್ರಕರಣಗಳಲ್ಲಿ ಪೊಲೀಸರು ಭಾಗಿಯಾದ ಬಗ್ಗೆ ತಿಳಿದು ಬಂದಿದೆ. ಕಳೆದ ಒಂದು ತಿಂಗಳಲ್ಲಿ ನಾಲ್ಕು ಕೇಸ್ ಗಳಲ್ಲಿ ಪೊಲೀಸರಿಂದ ಕರ್ತವ್ಯ ಲೋಪದ ಗಂಭೀರ ಆರೋಪ ಕೇಳಿ ಬಂದಿತ್ತು. ಭ್ರಷ್ಟಾಚಾರ, ಕಳವು, ಡ್ರಗ್ಸ್ ಡೀಲ್, ರೆಡ್ ಸ್ಮಗ್ಲಿಂಗ್ ಕೇಸಲ್ಲಿ ಐವರು ಸಿಬ್ಬಂದಿ ಭಾಗಿಯಾಗಿದ್ರು. ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಎಚ್ಚರಿಕೆ ಕೊಟ್ಟಿದ್ದಾರೆ.
ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್ ಸಸ್ಪೆಂಡ್
ಶಿವಕುಮಾರ್ ಹಾಗೂ ಸಂತೋಷ್ ಎಂಬ ಇಬ್ಬರು ಪೇದೆಗಳು ಸಿಎಂ ಬೊಮ್ಮಾಯಿ ನಿವಾಸದ ಬಳಿಯೇ ಬಂದೋ ಬಸ್ತ್ಗೆ ನಿಯೋಜನೆಗೊಂಡಿದ್ರು. ಆದ್ರೆ, ಈ ಪೇದೆಗಳು ಸಿಎಂ ಮನೆ ಸಮೀಪವೇ ಗಾಂಜಾ ಡೀಲಿಂಗ್ ಶುರು ಮಾಡಿದ್ರು. ಮಾಲ್ ಸಮೇತ ಆರ್ಟಿನಗರ ಪೊಲೀಸರಿಗೆ ಸಿಕ್ಕಿ ಬಿದಿದ್ರು. ಆದ್ರೆ ವಿರ್ಯಾಸ ಅಂದ್ರೆ, ಹೀಗೆ ಮಾಲ್ ಸಮೇತ ಲಾಕ್ ಆಗಿ ಜೈಲು ಸೇರಿದ್ದ ಇವರು ಕೇವಲ ನಾಲ್ಕೇ ನಾಲ್ಕು ದಿನಕ್ಕೆ ಬೇಲ್ ಮೇಲೆ ರಿಲೀಸ್ ಆಗಿದ್ದಾರೆ. ಈ ವಿಷ್ಯ ತಿಳಿದ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ತನಿಖೆಯ ಒಟ್ಟಾರೆ ಮಾಹಿತಿ ಪಡೆದಿದ್ದಾರೆ. ಆದ್ರೆ ಈ ವೇಳೆ ಪ್ರಕರಣದ ತನಿಖೆಯಲ್ಲಿ ಕಂಡು ಬಂದ ಲೋಪದಿಂದಲೇ ಆರೋಪಿಗಳಿಗೆ ಜಾಮೀನು ಸಿಕ್ಕಿರೋದು ಗೊತ್ತಾಗಿದೆ. ಹೀಗಾಗಿ ಆರ್ಟಿ ನಗರ ಇನ್ಸ್ ಪೆಕ್ಟರ್ ಅಶ್ವತ್ ಗೌಡ ಹಾಗೂ ಸಬ್ಇನ್ಸ್ ಪೆಕ್ಟರ್ ವೀರಭದ್ರ ಇಬ್ಬರನ್ನು ಅಮಾನತ್ತು ಮಾಡಿ ಆದೇಶಿಸಿದ್ದಾರೆ.
ಇಂತಹ ಸಿಬ್ಬಂದಿಯ ಪೂರ್ವಪರ ಪರಿಶೀಲನೆ ನಡೆಸದೆ, ಸಿಎಂ ನಿವಾಸಕ್ಕೆ ಕಾವಲು ಇರಿಸಿದ್ದಕ್ಕೆ ಇಬ್ಬರು ಡಿಸಿಪಿಗಳಗೆ ಕಮಿಷನರ್ ಮೊಮೋ ನೀಡಿದ್ದಾರೆ. ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಜೋಶಿ ಹಾಗೂ ಡಿಸಿಪಿ ಮಂಜುನಾಥ್ ಬಾಬುಗೆ ಮೆಮೋ ನೀಡಿ ಉತ್ತರ ಕೇಳಿದ್ದಾರೆ.
ಇನ್ಸ್ಪೆಕ್ಟರ್ ವಿರುದ್ಧ ಮಹಿಳೆ ಜೊತೆ ಅಸಭ್ಯ ವರ್ತನೆ ಆರೋಪ
ಹೆಣ್ಣೂರು ಪೊಲೀಸ್ ಠಾಣಾ ಇನ್ಸ್ಪೆಕ್ಟರ್ ವಸಂತ್ ಕುಮಾರ್ ವಿರುದ್ಧ ಗೃಹಿಣಿಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ನ್ಯಾಯ ಕೇಳೋಕೆ ಹೋದ್ರೆ ನನ್ನ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದಾರೆ. ಠಾಣೆಯಲ್ಲೇ ನನ್ನ ಮೈ ಕೈ ಮುಟ್ಟಿದ್ದಾರೆ. ಸಾಲದಕ್ಕೆ 5 ಲಕ್ಷ ಲಂಚ ಕೊಡುವಂತೆ ಕೇಳಿದ್ದಾರೆ ಅಂತಾ ಸಂತ್ರಸ್ತೆ ಮಹಿಳೆ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೇ ಭೋಗ್ಯಕ್ಕೆ ಪಡೆದವರಿದ್ಲೇ ಸುಳ್ಳು ಅಟ್ರಾಸಿಟಿ ಕೇಸ್ ದಾಖಲಿಸಲು ಕುಮ್ಮಕ್ಕು ನೀಡಿದ್ದಾರೆಂದು ಆರೋಪಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್‌ಪಂತ್ ಕಚೇರಿಗೆ ದೂರು ನೀಡಿದ್ದಾರೆ.
ಈ ಗಂಭೀರ ಆರೋಪ ಪ್ರಕರಣ ಬೆಂಗಳೂರು ಪೊಲೀಸ್ ಕಮಿಷನರ್ ಅಂಗಳ ತಲುಪಿದೆ. ಹೆಣ್ಣೂರು ಇನ್ಸ್ಪೆಕ್ಟರ್ ವಸಂತ್ ಕುಮಾರ್ ಮೇಲಿನ ಆರೋಪದ ಸತ್ಯಾಸತ್ಯತೆ ಏನು ಅಂತಾ ತನಿಖೆಯಿಂದ ಗೊತ್ತಾಗ್ಬೇಕಿದೆ. ಪೂರ್ವ ವಿಭಾಗದ ಡಿಸಿಪಿ ನೇತೃತ್ವದಲ್ಲಿ ವಿಚಾರಣೆಗೆ ಆದೇಶ ಹೊರಡಿಸಲಾಗಿದೆ. ಡಿಸಿಪಿ ಡಾ.ಎಸ್.ಡಿ.ಶರಣಪ್ಪಗೆ ಪ್ರಕರಣದ ತನಿಖೆಯ ಹೊಣೆ ನೀಡಲಾಗಿದೆ.
ಇದನ್ನೂ ಓದಿ: ಒಂದು ನಿಮಿಷದಲ್ಲಿ 37 ಟಂಡೆಮ್ ಪುಶ್ ಅಪ್ಸ್ಗಳನ್ನು ಮಾಡುವ ಮೂಲಕ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಪಟ್ಟಿ ಸೇರಿದ ಯುವಕರು
Published On - 12:35 pm, Thu, 20 January 22