ಸಿಸಿಟಿವಿಯಲ್ಲಿ ದಾಖಲು: ಮನೆಯಲ್ಲಿ ಲಂಚಕ್ಕೆ ಕೈಯೊಡ್ಡಿದ್ದ ವೇಳೆ ಎಸಿಬಿ ದಾಳಿ, ಆನೇಕಲ್ ಪುರಸಭೆ ಅಧಿಕಾರಿ ಸೇರಿ ಮೂವರ ಸೆರೆ

ಸಿಸಿಟಿವಿಯಲ್ಲಿ ದಾಖಲು: ಮನೆಯಲ್ಲಿ ಲಂಚಕ್ಕೆ ಕೈಯೊಡ್ಡಿದ್ದ ವೇಳೆ ಎಸಿಬಿ ದಾಳಿ, ಆನೇಕಲ್ ಪುರಸಭೆ ಅಧಿಕಾರಿ ಸೇರಿ ಮೂವರ ಸೆರೆ
ಸಿಸಿಟಿವಿಯಲ್ಲಿ ದಾಖಲು: ಮನೆಯಲ್ಲಿ ಲಂಚಕ್ಕೆ ಕೈಯೊಡ್ಡಿದ್ದ ವೇಳೆ ಎಸಿಬಿ ದಾಳಿ, ಆನೇಕಲ್ ಪುರಸಭೆ ಅಧಿಕಾರಿ ಸೇರಿ ಮೂವರ ಸೆರೆ

ಕಂದಾಯ ಸರಿಯಾಗಿ ಕಟ್ಟಿಲ್ಲ. 25 ಲಕ್ಷ ರೂ ಬಾಕಿ ಇದೆ ಎಂದು ಸದರಿ ಪುರಸಭಾ ಸಿಬ್ಬಂದಿ ಹಣಕ್ಕೆ ಡಿಮ್ಯಾಂಡ್ ಇಟ್ಟಿದ್ದರು. 25 ಲಕ್ಷ ರೂಪಾಯಿ ಬದಲು 5 ಲಕ್ಷ ಲಂಚ ಕೊಡುವಂತೆ ಕೈಯೊಡ್ಡಿದ್ದರು. ಆನೇಕಲ್ ಪುರಸಭೆಯ ಆರ್.ಐ. ನಾಗರಾಜ್, ಸಹಾಯಕ ಪ್ಯಾರಜಾನ್ ಸೇರಿದಂತೆ ಒಟ್ಟು ಮೂರು ಮಂದಿ ಬಂಧನವಾಗಿದೆ.

TV9kannada Web Team

| Edited By: sadhu srinath

Jan 20, 2022 | 12:19 PM

ಆನೇಕಲ್: ಮನೆಯೊಂದರಲ್ಲಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಭ್ರಷ್ಟಾಚಾರ ನಿಗ್ರಹ ದಳ ತಂಡ (ಎಸಿಬಿ) ದಾಳಿ ನಡೆಸಿದ್ದು, ಆನೇಕಲ್ ಪುರಸಭೆ ಕಂದಾಯ ನಿರೀಕ್ಷಕ (ಆರ್‌ಐ) ನಾಗರಾಜ್ ಸೇರಿ ಮೂವರನ್ನು ಬೆಂಗಳೂರು ನಗರ ಜಿಲ್ಲೆಯ ಆನೇಕಲ್‌ನ ಬಾರಂದೂರು ರಸ್ತೆಯ ಮನೆಯೊಂದರಲ್ಲಿ ಅರೆಸ್ಟ್ ಮಾಡಲಾಗಿದೆ. ಆರ್‌ಐ ನಾಗರಾಜ್ ಕಂದಾಯ ಸರಿಯಾಗಿ ಕಟ್ಟಿಲ್ಲವೆಂದು ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಖಚಿತ‌ ಮಾಹಿತಿಯ ಮೇರೆಗೆ ನಿನ್ನೆ ಬುಧವಾರ ಸಂಜೆ ಎಸಿಬಿ ಅಧಿಕಾರಿಗಳ ತಂಡ ದಾಳಿ ಮಾಡಿತ್ತು. ಆನೇಕಲ್ ಪುರಸಭೆಯ ಆರ್.ಐ. ನಾಗರಾಜ್, ಸಹಾಯಕ ಪ್ಯಾರಜಾನ್ ಸೇರಿದಂತೆ ಒಟ್ಟು ಮೂರು ಮಂದಿ ಬಂಧನವಾಗಿದೆ.

ಕಂದಾಯ ಸರಿಯಾಗಿ ಕಟ್ಟಿಲ್ಲ. 25 ಲಕ್ಷ ರೂ ಬಾಕಿ ಇದೆ ಎಂದು ಸದರಿ ಪುರಸಭಾ ಸಿಬ್ಬಂದಿ ಹಣಕ್ಕೆ ಡಿಮ್ಯಾಂಡ್ ಇಟ್ಟಿದ್ದರು. 25 ಲಕ್ಷ ರೂಪಾಯಿ ಬದಲು 5 ಲಕ್ಷ ಲಂಚ ಕೊಡುವಂತೆ ಕೈಯೊಡ್ಡಿದ್ದರು. ಅದರಂತೆ ಇಂದು 1.20 ಲಕ್ಷ ರೂ ಲಂಚ ಪಡೆಯುವಾಗ ಎಸಿಬಿ ನೇರ ದಾಳಿ ನಡೆಸಿತ್ತು. ತಿಮ್ಮಣ್ಣನವರ ಹೆಸರಿನಲ್ಲಿದ್ದ ಆಸ್ತಿ ವಿಚಾರ ಇದಾಗಿದೆ. ಕಂದಾಯ ಕಡಿಮೆ ಕಟ್ಟಿದ್ದೀರಿ. 25 ಲಕ್ಷ ರೂಪಾಯಿ ಬ್ಯಾಲೆನ್ಸ್ ಇದೆ ಎಂದು ಅಧಿಕಾರಿಗಳು ಹೇಳಿದ್ದರು. ಇದರಿಂದ ತಿಮ್ಮಣ್ಣ ಅವರ ಮಗ ಗೋಪಿ ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದರು. ದೂರಿನ ಅನ್ವಯ ಲಂಚ ಪಡೆಯುತ್ತಿದ್ದಾಗ ದಾಳಿ ನಡೆದಿದೆ. ಪುರಸಭಾ ಸಿಬ್ಬಂದಿ ಲಂಚ‌‌ ಸ್ವಿಕರಿಸಲು ಮನೆ ಬಳಿ ಬಂದಿದ್ದ‌ ಸಿಸಿಟಿವಿ ದೃಶ್ಯಾವಳಿಯೂ ಲಭ್ಯವಾಗಿದೆ.

Village Accountant ಕೆಲಸ ಕೊಡಿಸುವುದಾಗಿ ನಂಬಿಸಿ ವಂಚನೆ ಬೆಂಗಳೂರು: ಗ್ರಾಮ ಲೆಕ್ಕಿಗ (Village Accountant) ಕೆಲಸ ಕೊಡಿಸುವುದಾಗಿ ನಂಬಿಸಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಈರಣ್ಣನನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ. ಉತ್ತರ ಕರ್ನಾಟಕ ಮೂಲದ ಯುವಕರನ್ನೇ ಟಾರ್ಗೆಟ್ ಮಾಡಿ ಹಣ ಪೀಕುತ್ತಿದ್ದ ವಂಚನ ಅರೆಸ್ಟ್ ಆಗಿದ್ದಾನೆ.

ಆರೋಪಿ ಈರಣ್ಣ ತುಮಕೂರು ಜಿಲ್ಲೆಯ ಕಂಪನಹಳ್ಳಿ ನಿವಾಸಿ. ಕೇವಲ ಉತ್ತರ ಕರ್ನಾಟಕ ಮೂಲದ ಯುವಕರನ್ನೇ ಈರಣ್ಣ ಟಾರ್ಗೆಟ್ ಮಾಡಿ ವಂಚಿಸ್ತಿದ್ದ. ತಾನು ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯಲ್ಲಿ ನೌಕರ ಅಂತ ಪರಿಚಯ ಮಾಡಿಕೊಳ್ತಿದ್ದ ಈರಣ್ಣ ವಿಧಾನಸೌಧದ ಬಳಿಯೇ ಕೂತು ಅಭ್ಯರ್ಥಿಗಳನ್ನ ಖೆಡ್ಡಕ್ಕೆ ಕೆಡವುತ್ತಿದ್ದ. ಗ್ರಾಮಲೆಕ್ಕಿಗನ ಕೆಲಸ ಕೊಡಿಸ್ತೀನಿ, ಅದಕ್ಕಾಗಿ ಪಿಯುಸಿಯಲ್ಲಿ ಅಧಿಕ ಅಂಕ ಗಳಿಸಿರಬೇಕು. ಹೀಗಾಗಿ ನಕಲಿ ಅಂಕಪಟ್ಟಿ ಸಿದ್ಧಪಡಿಸಿಕೊಳ್ಳಿ ಎಂದು ನಂಬಿಸುತ್ತಿದ್ದ. ಆರೋಪಿ ಈರಣ್ಣನ ಮಾತು ಕೇಳಿ ಅನೇಕರು ನಕಲಿ ಅಂಕಪಟ್ಟಿ ತಯಾರಿಸಿದ್ದರು.

Also Read:

Village Accountant ಕೆಲಸ ಕೊಡಿಸುವುದಾಗಿ ನಂಬಿಸಿ ವಂಚನೆ; ವಿಧಾನಸೌಧ ಪೊಲೀಸರಿಂದ ಆರೋಪಿ ಅರೆಸ್ಟ್

ಆಟೋ ಚಾಲಕ-ಬೈಕ್ ಟ್ಯಾಕ್ಸಿ ಪ್ರಯಾಣಿಕನ ಮಧ್ಯೆ ಜಟಾಪಟಿ; ಇಬ್ಬರನ್ನೂ ಕಬ್ಬನ್ ಪಾರ್ಕ್ ಠಾಣೆಗೆ ಕರೆದೊಯ್ದ ಪೊಲೀಸರು

Follow us on

Related Stories

Most Read Stories

Click on your DTH Provider to Add TV9 Kannada