ಬೆಂಗಳೂರು, ನ.3: ಪತಿ ಸೇರಿದಂತೆ ಮನೆ ಸದಸ್ಯರ ಕಿರುಕುಳಕ್ಕೆ ಬೇಸತ್ತು ಗೃಹಿಣಿ ಐಶ್ವರ್ಯ ಆತ್ಮಹತ್ಯೆ (Suicide) ಮಾಡಿಕೊಂಡ ಪ್ರಕರಣ ಸಂಬಂಧ ಪೊಲೀಸರು ಆರೋಪಿಗಳನ್ನು ಗೋವಾದಲ್ಲಿ ಬಂಧಿಸಿದ್ದಾರೆ. ಐಶ್ವರ್ಯ ಸಾವಿನ ಬಳಿಕ ಗೋವಾದ ಕ್ಯಾಸಿನೋದಲ್ಲಿ ಪಾರ್ಟಿ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿದ್ದೇ ಒಂದು ರೋಚಕ.
ಮೃತೆ ಐಶ್ವರ್ಯಾಳ ಪತಿ ರಾಜೇಶ್, ಮಾವ ಗಿರಿಯಪ್ಪ, ಅತ್ತೆ ಸೀತಾ, ಮೈದುನ ವಿಜಯ್ ಹಾಗೂ ಆತನ ಹೆಂಡತಿ ತಸ್ಮಯ್ ಗೋವಾಗೆ ಹೋಗಿದ್ದರು. ಅಲ್ಲಿ ಕ್ಯಾಸಿನೋದಲ್ಲಿ ಮೋಜು ಮಸ್ತಿ ಮಾಡುತ್ತಿದ್ದರು. ಎಲ್ಲರ ಮೊಬೈಲ್ ಫೋನ್ಗಳನ್ನು ಸ್ವಿಚ್ ಆಪ್ ಮಾಡಿಕೊಂಡು ಎಂಜಾಯ್ ಮಾಡುತ್ತಿದ್ದರು.
ಸುಮಾರು ಮೂರು ದಿನಗಳ ಸಿಡಿಆರ್ ಪರಿಶೀಲನೆ ಬಳಿಕ ಆರೋಪಿಗಳ ಸುಳಿವು ಪೊಲೀಸರಿಗೆ ಲಭ್ಯವಾಗಿದೆ. ಮೂರು ದಿನಗಳ ಕಾಲ ಎಲ್ಲರೂ ಗೋವಾದ ಎರಡು ರೆಸಾರ್ಟ್ನಲ್ಲಿ ನೆಲೆಸಿದ್ದರು. ಕೊನೆಗೆ ಎರಡು ತಂಡಗಳು ಗೋವಾಗೆ ಹೋಗಿದ್ದು ರೆಸಾರ್ಟ್ಗಳ ಪರಿಶೀಲನೆ ನಡೆಸಲಾಗಿದೆ.
ಇದನ್ನೂ ಓದಿ: ಬೆಂಗಳೂರು: ಗೃಹಿಣಿ ಆತ್ಮಹತ್ಯೆ ಕೇಸ್, ವಾರದ ಬಳಿಕ ಹೊರಬಿತ್ತು ಸಾವಿನ ಹಿಂದಿನ ಅಸಲಿ ಕಹಾನಿ
ಈ ವೇಳೆ ಐವರು ಆರೋಪಿಗಳು ವಾಸ್ತವ್ಯ ಇರುವುದು ತಿಳಿದುಬಂದಿದೆ. ನಂತರ ಕ್ಯಾಸಿನೋದಲ್ಲಿ ಮೋಜು ಮಸ್ತಿ ಮಾಡುತ್ತಾ ಇರುವುದು ಗೊತ್ತಾಗಿದೆ. ಐವರು ಗೋವಾದಿಂದ ಮುಂಬೈಗೆ ಶಿಫ್ಟ್ ಆಗುತ್ತಿದ್ದರು. ಈ ಬಗ್ಗೆ ಮಾಹಿತಿ ತಿಳಿದ ಗೋವಿಂದರಾಜ ನಗರ ಠಾಣಾ ಪೊಲೀಸರು, ಮುಂಬೈನಲ್ಲಿ ಮಾರ್ಗ ಮಧ್ಯೆ ಬಂಧಿಸಿದ್ದಾರೆ.
ಪ್ರಕಣರದಲ್ಲಿ ಇನ್ನೂ ಐವರು ಆರೋಪಿಗಳು ಭಾಗಿಯಾಗಿದ್ದು, ತಲೆಮರೆಸಿಕೊಂಡಿದ್ದಾರೆ. ಯುಎಸ್ನಲ್ಲಿ ಇರುವ ಶಾಲಿನಿ ಓಂಪ್ರಕಾಶ್ ಬಂಧನಕ್ಕೂ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ರೆಡ್ ಕಾರ್ನರ್ ನೊಟೀಸ್ ಹೊರಡಿಸಲು ಮುಂದಾಗಿದ್ದಾರೆ. ಡಿಜಿ ಐಜಿಪಿ ಅನುಮತಿ ಪಡೆದು ರೆಡ್ ಕಾರ್ನರ್ ನೋಟೀಸ್ ಹೊರಟಿಸಲು ಸಿದ್ಧತೆ ನಡೆಸಲಾಗುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ