ಬೆಳಗಿನ ದಿನಪತ್ರಿಕೆ, ಹಾಲಿನ ಪ್ಯಾಕೆಟ್(Milk Packet) ಗಳಂತೆ ತಾಜಾ ಹೂವುಗಳನ್ನು ಮನೆಗೆ ತಲುಪಿಸುವ ವ್ಯವಸ್ಥೆ ಇದ್ದರೆ ಎಷ್ಟು ಅನುಕೂಲವಲ್ಲವೇ? ಇಂತಹ ಆಲೋಚನೆಯ ಮೂಲಕ ಪ್ರಾರಂಭವಾಗಿ ಈಗ ಸಾಂಪ್ರದಾಯಿಕ(Traditional) ಹೂವಿನ ಮಾರುಕಟ್ಟೆಗೆ ಆಧುನಿಕ ತಿರುವು ಕೊಟ್ಟಿದ್ದಾರೆ ಸಹೋದರಿಯರಾದ ಯೆಶೋದಾ ಮತ್ತು ರಿಯಾ ಕರುತುರಿ. 10 ಲಕ್ಷ ರೂಪಾಯಿಗಳ ಆರಂಭಿಕ ಹೂಡಿಕೆಯೊಂದಿಗೆ ಆನ್ಲೈನ್ ಹೂವಿನ ಮಾರಾಟ ಪ್ರಾರಂಭವಾಗಿ , ಈಗ ವಾರ್ಷಿಕವಾಗಿ 8 ಕೋಟಿ ರೂಪಾಯಿಗಳ ವಹಿವಾಟು ನಡೆಸುತ್ತಿದ್ದಾರೆ ಈ ಸಹೋದರಿಯರು.
ಬೆಂಗಳೂರು ಮೂಲದ ಸಹೋದರಿಯರಿಬ್ಬರು ದೈನಂದಿನ ಪೂಜೆಯ ಹೂವುಗಳಿಗಾಗಿ ಹೂವು ಫ್ರೆಶ್ ಎಂಬ ಯೋಜನೆಯನ್ನು ಕಾರ್ಯಗತಗೊಳಿಸಿದರು. 2019 ರಲ್ಲಿ, ಅವರು ಪ್ರಾರಂಭಿಸಿದ್ದು,ತಾಜಾ ಹೂವುಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಯನ್ನು ಪರಿಚಯಿಸಿದರು. ಇದೀಗಾ ಸಾಕಷ್ಟು ಲಾಭಗಳೊಂದಿಗೆ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
ನೀವು ಸಾಮಾನ್ಯವಾಗಿ ದಿನ ಪತ್ರಿಕೆಗಳಿಗೆ ಚಂದಾದಾರಗಾಗುವುದನ್ನು ನೋಡಿರಬಹುದು. ಅದೇ ಈ ರೀತಿ ಹೂವಿನ ವ್ಯಾವಹಾರದಲ್ಲೂ ದೈನಂದಿನ ಪೂಜೆಯ ಹೂವುಗಳಿಗಾಗಿ ಚಂದಾದಾರರಾಗಿವುದರ ಮೂಲಕ ಹೊಸ ಹೊಸ ಐಡಿಯಾಗಳನ್ನು ಇವರು ಪರಿಚಯಿಸಿದರು. ಬೆಂಗಳೂರು ಮೂಲದ ಫ್ಲೋರಲ್ ಸ್ಟಾರ್ಟಪ್, ಏಂಜೆಲ್ ಹೂಡಿಕೆದಾರರಿಂದ 10 ಲಕ್ಷ ರೂಪಾಯಿಗಳ ಆರಂಭಿಕ ಹೂಡಿಕೆಯೊಂದಿಗೆ ಪ್ರಾರಂಭವಾಗಿ ಈಗ ವಾರ್ಷಿಕವಾಗಿ 8 ಕೋಟಿ ರೂಪಾಯಿಗಳ ವಹಿವಾಟು ನಡೆಸುತ್ತಿದ್ದಾರೆ.
ಈ ಹೂವಿನ ವ್ಯಾಪಾರ ಇವರಿಗೆನೂ ಹೊಸದಲ್ಲ. ಅವರ ತಂದೆ ರಾಮ್ ಕರುತುರಿ ಕೀನ್ಯಾ, ಇಥಿಯೋಪಿಯಾ ಮತ್ತು ಭಾರತದಲ್ಲಿ ಗುಲಾಬಿ ತೋಟಗಳನ್ನು ಹೊಂದಿದ್ದಾರೆ. ಅವರ ಕೀನ್ಯಾದ ಫಾರ್ಮ್ 90 ರ ದಶಕದಲ್ಲಿ ವಿಶ್ವದ ಅತಿದೊಡ್ಡ ಗುಲಾಬಿ ಫಾರ್ಮ್ ಎಂದು ಗುರುತಿಸಲ್ಪಟ್ಟಿತು. ಆದ್ದರಿಂದ, ಸಹೋದರಿಯರಿಗೆ ಹೂವಿನ ಉದ್ಯಮವು ವರ್ಷಗಳಲ್ಲಿ ಉತ್ತಮವಾಗಿ ಅಭಿವೃದ್ದಿ ಹೊಂದುತ್ತಾ ಹೋಯಿತು.
ಇದನ್ನೂ ಓದಿ: ಆರೋಗ್ಯಕರ ಬೀಟ್ರೂಟ್ ಇಡ್ಲಿ ತಯಾರಿಸಿ ಸವಿಯಿರಿ
ಹೂವುಗಳು ಪ್ರತಿ ದಿನ ಬಳಕೆಯಲ್ಲಿರುತ್ತದೆ . ದೇವರ ಪೂಜೆಗೆ ಮಾತ್ರವಲ್ಲದೆ ಕೂದಲಿಗೆ ಮುಡಿದುಕೊಳ್ಳುವುದು, ವಾಹನಗಳ ಅಲಂಕಾರಕ್ಕಾಗಿ, ಅಂಗಡಿಗಳು ಮತ್ತು ಕಚೇರಿಗಳಲ್ಲಿ ನೇತುಹಾಕಲು ಇಷ್ಟಪಡುತ್ತಾರೆ ಎಂದು ಸೇಂಟ್ ಲೂಯಿಸ್‌ನ ವಾಷಿಂಗ್ಟನ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವೀಧರರಾಗಿರುವ ಯೆಶೋದಾ ಹೇಳುತ್ತಾರೆ. ಸಾಕಷ್ಟು ಫ್ಲವರ್ ಸ್ಟಾಲ್ಗಳು ಸಂಘಟಿತವಾಗಿದ್ದರೂ ಮತ್ತು ಪ್ರವರ್ಧಮಾನಕ್ಕೆ ಬಂದಿದ್ದರೂ, ಸಾಂಪ್ರದಾಯಿಕ ಪೂಜೆ ಹೂವಿನ ಮಾರುಕಟ್ಟೆಯು ಅದರ ಬೆಳವಣಿಗೆಯಲ್ಲಿ ತುಂಬಾ ಹಿಂದುಳಿದಿದೆ. ಸುಗ್ಗಿಯ ನಂತರ ಹೂವುಗಳನ್ನು ಹಲವಾರು ಹಂತದ ನಿರ್ವಹಣೆಯ ಮೂಲಕ ಪೂರೈಸಲಾಗುತ್ತದೆ ಮತ್ತು ಅವರು ಗ್ರಾಹಕರನ್ನು ತಲುಪುವ ಹೊತ್ತಿಗೆ ಅವು ತಮ್ಮ ತಾಜಾತನವನ್ನು ಕಳೆದುಕೊಳ್ಳುತ್ತವೆ ಎಂದು ಯಶೋದಾ ಹೇಳುತ್ತಾರೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 10:47 am, Fri, 30 December 22