Beetroot Idli: ಆರೋಗ್ಯಕರ ಬೀಟ್ರೂಟ್ ಇಡ್ಲಿ ತಯಾರಿಸಿ ಸವಿಯಿರಿ

ಬೀಟ್ರೂಟ್ ಬಳಸಿ ಇಡ್ಲಿ ತಯಾರಿಸಬಹುದು ಎಂದು ನಿಮಗೆ ತಿಳಿದಿದೆಯೇ? ಬೀಟ್ರೂಟ್​ ದೇಹದ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜೊತೆಗೆ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಾಯಕವಾಗಿದೆ.

Beetroot Idli: ಆರೋಗ್ಯಕರ ಬೀಟ್ರೂಟ್ ಇಡ್ಲಿ ತಯಾರಿಸಿ ಸವಿಯಿರಿ
ಬೀಟ್ರೂಟ್ ಇಡ್ಲಿ Image Credit source: Youtube
Follow us
| Updated By: ಅಕ್ಷತಾ ವರ್ಕಾಡಿ

Updated on: Dec 29, 2022 | 5:29 PM

ದಕ್ಷಿಣ ಭಾರತ(South India)ದ ಬೆಳಗಿನ ಉಪಹಾರ(Breakfast)ದಲ್ಲಿ ಇಡ್ಲಿ ಸಾಂಬಾರ್ ಅತ್ಯಂತ ಜನಪ್ರಿಯ. ಸಾಮಾನ್ಯವಾಗಿ ಅಕ್ಕಿ, ಉದ್ದಿನಬೇಳೆ, ರಾಗಿ ಹಿಟ್ಟು ಮುಂತಾದವುಗಳಿಂದ ಮಾಡುವುದು, ಈಗಾಗಲೇ ತಿಳಿದಿರುವ ವಿಷಯ. ಆದರೆ ಬೀಟ್ರೂಟ್ ಬಳಸಿ ಇಡ್ಲಿ ತಯಾರಿಸಬಹುದು ಎಂದು ನಿಮಗೆ ತಿಳಿದಿದೆಯೇ? ಬೀಟ್ರೂಟ್​ ದೇಹದ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜೊತೆಗೆ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಾಯಕವಾಗಿದೆ. ಆದ್ದರಿಂದ ನೀವೂ ಕೂಡ ಒಮ್ಮೆ ಮನೆಯಲ್ಲಿ ಆರೋಗ್ಯಕರವಾದ ಈ ಬೀಟ್ರೂಟ್ ಇಡ್ಲಿ ತಯಾರಿಸಿ.

ಬೀಟ್ರೂಟ್ ಇಡ್ಲಿಗೆ ಬೇಕಾಗುವ ಸಾಮಾಗ್ರಿಗಳು:

1 ಕಪ್ ಹುರಿದ ರವೆ 1 ಕಪ್ ಮೊಸರು ರುಚಿಗೆ ತಕ್ಕಷ್ಟು ಉಪ್ಪು 1/2 ಕಪ್ ಬೀಟ್ರೂಟ್ ಪ್ಯೂರೀ( ಮಾಡುವ ವಿಧಾನ ಕೆಳಗೆ ನೀಡಲಾಗಿದೆ) 1/2 ಇಂಚು ಶುಂಠಿ 3 ಹಸಿರು ಮೆಣಸಿನಕಾಯಿ 1 ಟೀಸ್ಪೂನ್ ಗೋಡಂಬಿ 1 ಟೀಸ್ಪೂನ್ ಉದ್ದಿನ ಬೇಳೆ 5-6 ಕರಿಬೇವಿನ ಎಲೆಗಳು

ಇದನ್ನೂ ಓದಿ: ಚಮಚ ಬಿಡಿ, ಕೈಯಿಂದ ತಿನ್ನಿ ಅದರಿಂದ ಆರೋಗ್ಯಕ್ಕಾಗುವ ಪ್ರಯೋಜನಗಳ ತಿಳಿಯಿರಿ

ಬೀಟ್ರೂಟ್ ಇಡ್ಲಿ ಮಾಡುವ ವಿಧಾನ :

  • ಮೊದಲು ಬೀಟ್ರೂಟ್ ಕತ್ತರಿಸಿ ಮಿಕ್ಸಿ ಜಾರ್‌ಗೆ ತೆಗೆದುಕೊಂಡು ಅದಕ್ಕೆ ಹಸಿಮೆಣಸಿನಕಾಯಿ ಮತ್ತು ಶುಂಠಿ ಸೇರಿಸಿ ಸ್ವಲ್ಪ ನೀರು ಬೆರೆಸಿ ನಯವಾಗಿ ರುಬ್ಬಿ ಕೊಳ್ಳಿ. ಈಗ ಬೀಟ್ರೂಟ್ ಪ್ಯೂರೀ ಸಿದ್ದವಾಗಿದೆ.
  • ನಂತರ ಒಂದು ಬೌಲ್ ತೆಗೆದುಕೊಂಡು ಅದಕ್ಕೆ 1 ಕಪ್ ಹುರಿದ ರವೆ, 1 ಕಪ್ ಮೊಸರು, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಬೀಟ್ರೂಟ್ ಪ್ಯೂರೀ ಸೇರಿಸಿ ಮಿಶ್ರಣ ಮಾಡಿ. ಸ್ವಲ್ಪ ನೀರು ಕೂಡ ಹಾಕಿ. ಈಗ ಹಿಟ್ಟು ತಯಾರಾಗಿದೆ.
  • ನಂತರ ಒಂದು ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಬಿಸಿಯಾಗಲು ಬಿಡಿ. ಬಿಸಿಯಾದ ಮೇಲೆ ಇದಕ್ಕೆ 1 ಟೀಸ್ಪೂನ್ ಉದ್ದಿನ ಬೇಳೆ, 5-6 ಕರಿಬೇವಿನ ಎಲೆಗಳು ಹಾಕಿ ಹುರಿಯಿರಿ. ಈಗ ಇದನ್ನು ಈಗಾಗಲೇ ಮಾಡಿಟ್ಟ ಹಿಟ್ಟಿನೊಂದಿಗೆ ಬೆರೆಸಿ.
  • ನಂತರ ಇದನ್ನು ಇಡ್ಲಿ ಪಾತ್ರೆಗೆ ಹಾಕಿ ಮತ್ತು 10 ನಿಮಿಷಗಳ ಕಾಲ ಸ್ಟೀಮ್​ನಲ್ಲಿ ಬೇಯಿಸಿ.
  • ಈಗ ಆರೋಗ್ಯಕರ ಬೀಟ್ರೂಟ್ ಇಡ್ಲಿ ಸಿದ್ದವಾಗಿದೆ. ಬಿಸಿ ಬಿಸಿಯಾಗಿ ತೆಂಗಿನಕಾಯಿಯ ಚಟ್ನಿಯೊಂದಿಗೆ ಸವಿಯಿರಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: