AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Safest Places in Bangalore: ಬೆಂಗಳೂರು ಸಿಟಿಯಲ್ಲಿ ನೀವು ಒಂಟಿಯಾಗಿ ವಾಸಿಸುತ್ತಿದ್ದೀರಾ? ಈ ಸ್ಥಳಗಳು ಸುರಕ್ಷಿತ

ಸಾಕಷ್ಟು ಕನಸುಗಳನ್ನು ಹೊತ್ತು ಬೆಂಗಳೂರಿಗೆ ಬಂದಿದ್ದೀರಾ? ಕೆಲಸವೇನೋ ಸಿಕ್ತು, ಆದರೆ ಒಬ್ಬಂಟಿಯಾಗಿ ನಾನಿಲ್ಲಿ ವಾಸಿಸುವುದು ಎಷ್ಟು ಸುರಕ್ಷಿತ ಎಂಬ ಚಿಂತೆ ನಿಮ್ಮಲ್ಲಿದೆಯೇ?

TV9 Web
| Updated By: Digi Tech Desk|

Updated on:Dec 30, 2022 | 1:21 PM

Share
ಸಾಕಷ್ಟು ಕನಸುಗಳನ್ನು ಹೊತ್ತು ಬೆಂಗಳೂರಿಗೆ ಬಂದಿದ್ದೀರಾ? ಕೆಲಸವೇನೋ ಸಿಕ್ತು, ಆದರೆ ಒಬ್ಬಂಟಿಯಾಗಿ ನಾನಿಲ್ಲಿ ವಾಸಿಸುವುದು ಎಷ್ಟು ಸುರಕ್ಷಿತ ಎಂಬ ಚಿಂತೆ ನಿಮ್ಮಲ್ಲಿದೆಯೇ? ಹಾಗಿದ್ದರೆ ಈ ಸ್ಟೋರಿ ಓದಿ.

1 / 8
ಕೋರಮಂಗಲ ನೀವು ಬೆಂಗಳೂರಿನಲ್ಲಿ ಒಂಟಿಯಾಗಿ ವಾಸಿಸಲು ಬಯಸಿದರೆ ಸುರಕ್ಷಿತ ಸ್ಥಳಗಳಲ್ಲಿ ಒಂದಾಗಿದೆ. ಜೊತೆಗೆ ಕೈಗೆಟುಕುವ ದರದಲ್ಲಿ ಪಿಜಿ ರೂಮ್​ಗಳು ಕೂಡ ಲಭ್ಯವಿದೆ. ಇಲ್ಲಿ ಶಾಪಿಂಗ್ ಮಾಲ್‌ಗಳು, ಮಲ್ಟಿಪ್ಲೆಕ್ಸ್‌ಗಳು, ರೆಸ್ಟೋರೆಂಟ್‌ಗಳು, ಕೆಫೆಗಳನ್ನು ಕೂಡ ಕಾಣಬಹುದು.

2 / 8
ಎಲೆಕ್ಟ್ರಾನಿಕ್ ಸಿಟಿ: ಹೆಸರೇ ಸೂಚಿಸುವಂತೆ, ಎಲೆಕ್ಟ್ರಾನಿಕ್ ಸಿಟಿಯು 800 ಎಕರೆಗಳಷ್ಟು ವಿಸ್ತಾರವಾಗಿರುವ ಭಾರತದ ಅತಿದೊಡ್ಡ ಎಲೆಕ್ಟ್ರಾನಿಕ್ ಕೈಗಾರಿಕಾ ಉದ್ಯಾನವನಗಳ ಕೇಂದ್ರವಾಗಿದೆ. ಈ ಪ್ರದೇಶವು ಬೆಂಗಳೂರಿನ ಮುಖ್ಯ ನಗರದಿಂದ ಸ್ವಲ್ಪ ದೂರದಲ್ಲಿದ್ದರೂ ಕೂಡ ಇಲ್ಲಿನ ನಿವಾಸಿಗಳಿಗೆ ಬೆಂಗಳೂರಿನಲ್ಲಿ ವಾಸಿಸಲು ಸುರಕ್ಷಿತ ಸ್ಥಳಗಳಲ್ಲಿ ಒಂದಾಗಿದೆ.

3 / 8
ಸರ್ಜಾಪುರ: ವೇಗವಾಗಿ ಅಭಿವೃದ್ಧಿಗೊಂಡ ಬೆಂಗಳೂರಿನ ಪ್ರಮುಖ ಸಿಟಿಗಳಲ್ಲಿ ಸರ್ಜಾಪುರವು ಒಂದಾಗಿದೆ. ಈ ಪ್ರದೇಶವು ವೈಟ್‌ಫೀಲ್ಡ್, ಔಟರ್ ರಿಂಗ್ ರೋಡ್, ಎಲೆಕ್ಟ್ರಾನಿಕ್ ಸಿಟಿ, ಮಾರತಹಳ್ಳಿ, ಕೋರಮಂಗಲ, ಮತ್ತು ಹೆಚ್ಚಿನವುಗಳಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಇಲ್ಲಿ  ಅನೇಕ ಐಟಿ ಉದ್ಯೋಗಿಗಳು ಈ ಪ್ರದೇಶದಲ್ಲಿ ಮತ್ತು ಸುತ್ತಮುತ್ತ ನೆಲೆಸಿದ್ದಾರೆ. ಅಲ್ಲದೆ, ಸುರ್ಜಾಪುರಿ ಬೆಂಗಳೂರಿನಲ್ಲಿ ವಾಸಿಸಲು ಸುರಕ್ಷಿತ ಸ್ಥಳಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.

4 / 8
ವೈಟ್‌ಫೀಲ್ಡ್ ಬೆಂಗಳೂರಿನ ಉಳಿದ ಭಾಗಗಳಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಇದು ವೈಜಾಗ್ ಮತ್ತು ಹೈದರಾಬಾದ್ ಸಂಪರ್ಕಿಸುವ ಪ್ರಮುಖ ಹೆದ್ದಾರಿಗಳ ನಡುವಿನ ಪ್ರಮುಖ ಪ್ರದೇಶವಾಗಿದೆ. ಇಲ್ಲಿ ಅನೇಕ ಐಟಿ ಕಂಪನಿಗಳು ಮತ್ತು ಐಟಿ ಪಾರ್ಕ್‌ಗಳನ್ನು ಕಾಣಬಹುದು. ಬೆಂಗಳೂರಿನಲ್ಲಿ ವಾಸಿಸಲು ಸುರಕ್ಷಿತ ಹಾಗೂ ಇಲ್ಲಿನ ಪಿಜಿಗಳು ಸ್ವಲ್ಪ ದುಬಾರಿಯೂ ಹೌದು.

5 / 8
ಎಚ್​ ಎಸ್​ ಆರ್​ ಲೇಔಟ್ ಅಥವಾ ಹೊಸೂರು ಸರ್ಜಾಪುರ ರಸ್ತೆ ಲೇಔಟ್ ಆಗ್ನೇಯ ಬೆಂಗಳೂರಿನಲ್ಲಿರುವ ಜನಪ್ರಿಯ ಉಪನಗರವಾಗಿದೆ. ಇದು ಸುರಕ್ಷಿತ ಸ್ಧಳವಂತೂ ಹೌದು, ಆದರೆ ಆಷ್ಟೇ ದುಬಾರಿಯೂ ಆಗಿದೆ. 1985 ರಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಅಭಿವೃದ್ಧಿಪಡಿಸಲಾಗಿದೆ. ಇದು ಅನೇಕ ಐಟಿ ಪಾರ್ಕ್‌ಗಳು ಮತ್ತು ಕಾರ್ಪೊರೇಟ್ ಕಚೇರಿಗಳ ಬಳಿ ಇದೆ. ಇಲ್ಲಿ ವಾಸಿಸುವುದು ಉತ್ತಮವಾಗಿದೆ ಏಕೆಂದರೆ ಈ ಸ್ಥಳವು ಹಲವಾರು ಶಾಪಿಂಗ್ ಮಾಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಅನೇಕ ಸ್ಟಾರ್ಟ್‌ಅಪ್‌ಗಳು ಮತ್ತು  ಕಾರ್ಪೊರೇಟ್ ಕಚೇರಿಗಳನ್ನು ಹೊಂದಿದೆ.

6 / 8
ಬೆಳ್ಳಂದೂರು: ಆಗ್ನೇಯ ಬೆಂಗಳೂರಿನ ಒಂದು ಉಪನಗರ, ಅದು ಉತ್ತರಕ್ಕೆ ಬೆಳ್ಳಂದೂರು ಕೆರೆ, ದಕ್ಷಿಣಕ್ಕೆ ಸರ್ಜಾಪುರ ರಸ್ತೆ, ಪಶ್ಚಿಮಕ್ಕೆ ಎಚ್‌ಎಸ್‌ಆರ್ ಲೇಔಟ್ ಮತ್ತು ಪೂರ್ವಕ್ಕೆ ದೇವರಬಿಸನಹಳ್ಳಿಯಿಂದ ಸುತ್ತುವರಿದಿದೆ. ಕೆಲವು ವರ್ಷಗಳ ಹಿಂದೆ, ಬೆಳ್ಳಂದೂರು 2000 ರ ಆರಂಭದವರೆಗೂ ಐಟಿ ಮೂಲಸೌಕರ್ಯ ನಿಧಾನವಾಗಿ ಅಭಿವೃದ್ಧಿಗೊಳ್ಳುವವರೆಗೂ ಹೆಚ್ಚು ಕಡಿಮೆ ಬಂಜರು ಭೂಮಿಯಾಗಿತ್ತು. ಬೃಹತ್ ಟೆಕ್ ಪಾರ್ಕ್‌ಗಳು ಮತ್ತು ಬೆಳೆಯುತ್ತಿರುವ ಮೂಲಸೌಕರ್ಯಗಳಿಂದ ಬೆಂಗಳೂರಿನಲ್ಲಿ ವಾಸಿಸಲು ಸುರಕ್ಷಿತ ಸ್ಥಳಗಳಲ್ಲಿ ಒಂದಾಗಿದೆ.

7 / 8
ಇಂದಿರಾನಗರ: ಮಾಲ್‌ಗಳು, ಪಬ್‌ಗಳು ಮತ್ತು ರೆಸ್ಟೋರೆಂಟ್‌ಗಳ ವಾತಾವರಣದಲ್ಲಿ ವಾಸಿಸಲು ಇಷ್ಟಪಡುವ ಜನರಿಗೆ ಇಂದಿರಾನಗರವನ್ನು ಸ್ವರ್ಗವೆಂದು ಪರಿಗಣಿಸಲಾಗಿದೆ. ಆದರೆ ಕಡಿಮೆ ಖರ್ಚಿನಲ್ಲಿ ಇಲ್ಲಿ ವಾಸಿಸಲು ಸಾಧ್ಯವಿಲ್ಲ. ವಾರಾಂತ್ಯದಲ್ಲಿ ಸಹ ರಾತ್ರಿಯಿಡೀ ಝೇಂಕರಿಸುವ ಪ್ರದೇಶವಾಗಿರುವುದರಿಂದ ಬೆಂಗಳೂರಿನಲ್ಲಿ ವಾಸಿಸಲು ಸುರಕ್ಷಿತ ಸ್ಥಳಗಳಲ್ಲಿ ಒಂದಾಗಿದೆ.

8 / 8

Published On - 1:21 pm, Fri, 30 December 22