ಬೆಂಗಳೂರು ಡಿ.04: ಮನುಷ್ಯರನ್ನು ಅರ್ಥಮಾಡಿಕೊಂಡು, ಅವರ ಭಾವನೆಗಳ ತಕ್ಕ ಹಾಗೆ ಅವರೊಂದಿಗೆ ಸಂವಹನ ನಡೆಸುವ ರೋಬೋಟಿಕ್ ಮಾದರಿಯನ್ನು (Robotic model) ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಇನ್‌ಫರ್ಮೇಷನ್ ಟೆಕ್ನಾಲಜಿ ಬೆಂಗಳೂರಿನ (IIIT-B) ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ.
ಎಷ್ಟೊಸಾರಿ ಮನುಷ್ಯನಿಗೆ ಮನಷ್ಯನ ಭಾವನೆಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುದಿಲ್ಲ. ಆದರೆ ಈ ರೋಬೊಟ್ ಮಾನವನ ಭಾವನೆಗಳನ್ನು ಅರ್ಥೈಸಿಕೊಂಡು ಸಂವಹನ ನಡೆಸುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. ಸೋಹಂ ಜೋಶಿ, ಅರ್ಪಿತಾ ಮಳವಳ್ಳಿ ಮತ್ತು ಶ್ರೀಶಾ ರಾವ್ ಅವರ ಈ ಸಂಶೋಧನಾ ಪ್ರಬಂಧವು ಪಬ್ಲಿಕ್ ಲೈಬ್ರರಿ ಸೈನ್ಸ್ (PLOS) ನ ಜರ್ನಲ್‌ನಲ್ಲಿ ಪ್ರಕಟವಾಗಿದೆ.
ಕೆಲವೊಂದು ಸಾರಿ ವರ್ತನೆ ತಕ್ಕ ಹಾಗೆ ನಮಗೆ ಪ್ರತಿಕ್ರಿಯೆ ದೊರೆಯುವುದಿಲ್ಲ, ವಿಭಿನ್ನವಾಗಿರುತ್ತದೆ. ಆದರೆ ಈ ರೋಬೋಟ್ ಮಾನವನ ವರ್ತನೆ ಮತ್ತು ಭಾವನೆಯನ್ನು ಅರ್ಥ ಮಾಡಿಕೊಂಡು ನಿಖರವಾಗಿ ಪ್ರತಿಕ್ರಿಯೆ ನೀಡುತ್ತದೆ ಎಂದು ಯೋಜನೆಯ ಅಧ್ಯಾಪಕ, ಮೇಲ್ವಿಚಾರಕ ರಾವ್ ಹೇಳಿದರು.
ಇದನ್ನೂ ಓದಿ: ಒಮಾನ್ ಮೂಲದ ಮಗುವಿಗೆ ರೋಬೋಟ್ ಸಹಾಯದಿಂದ ಕಿಡ್ನಿ ಶಸ್ತ್ರಚಿಕಿತ್ಸೆ ನಡೆಸಿದ ಬೆಂಗಳೂರಿನ ವೈದ್ಯರು
ರೋಬೋಟ್‌ಗಳು/ಮಾಡೆಲ್‌ಗಳು ಮನೋವಿಜ್ಞಾನದ ಬಗ್ಗೆ ಸ್ವಲ್ಪ ತಿಳುವಳಿಕೆಯನ್ನು ಹೊಂದಿರಬೇಕು. ಸಂವಹನ ನಡೆಸುವ ವ್ಯಕ್ತಿಯ ಆಸಕ್ತಿ ಮತ್ತು ವಯಸ್ಸನ್ನು ಪರಿಗಣಿಸಬೇಕು. ಈ ಹೊಸ ತಂತ್ರಜ್ಞಾನವು ಭಾವನೆಗಳು ಮತ್ತು ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ಸಾಧನಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ.
ಓರ್ವ ಉದ್ಯಮಿಯ ಮಾನಸಿಕ ಸ್ಥಿತಿಯನ್ನು ಅರ್ಥಮಾಡಿಕೊಂಡು ಅವರ ಉದ್ಯಮಕ್ಕೂ ಸಹ ಈ ರೋಬೋಟ್ ಸಹಾಯಕವಾಗಬಹುದು. ಅಲ್ಲದೆ, ಅಪಘಾತಗಳನ್ನು ತಡೆಗಟ್ಟಲು ಚಾಲಕನ ನಡವಳಿಕೆಯ ಆಧಾರದ ಮೇಲೆ ಆತನ ನಿದ್ದೆ ಅಥವಾ ಅನಾರೋಗ್ಯವನ್ನು ರೊಬೋಟ್ ಪತ್ತೆ ಮಾಡಿ ಬಳಿಕ ಎಚ್ಚರಿಕೆ ನೀಡುತ್ತದೆ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:06 am, Mon, 4 December 23