ಬೆಂಗಳೂರು, ಜು.11: ಮಹಿಳೆಗೆ ಅತ್ಯಾಚಾರ ಎಸಗುವುದಾಗಿ ಬೆದರಿಕೆ ಒಡ್ಡಿದ ಆರೋಪದ ಹಿನ್ನಲೆ ಆರ್ಟಿಐ (RTI) ಕಾರ್ಯಕರ್ತ ಶ್ರೀನಿವಾಸ್ ಎಂಬಾತನನ್ನು ಬೆಂಗಳೂರಿನ ಕಾಡುಗೋಡಿ ಪೊಲೀಸರು(Kadugodi Police Station)
ಬಂಧಿಸಿದ್ದಾರೆ. ಸ್ನೇಹಿತನ ಜೊತೆಗೂಡಿ ಪರಿಚಯವಿದ್ದ ಮಹಿಳೆಯ ಖಾಸಗಿ ಫೋಟೋ ಇಟ್ಟುಕೊಂಡು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಶ್ರೀನಿವಾಸ್ ಬೆದರಿಕೆ ಹಾಕಿದ್ದನಂತೆ. ಈ ಕುರಿತು ಸಂತ್ರಸ್ಥ ಮಹಿಳೆ ಕಾಡುಗೋಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಜುಲೈ 01 ರಂದು ಕಾಡುಗೋಡಿ ಮೆಟ್ರೋ ಸ್ಟೇಷನ್ ಬಳಿ ಶ್ರೀನಿವಾಸ್ ಬೆದರಿಕೆ ಹಾಕಿದ್ದ. ಈ ಬಗ್ಗೆ ಕಾಡುಗೋಡಿ ಪೊಲೀಸ್ ಠಾಣೆಗೆ ಮಹಿಳೆ ನೀಡಿದ ದೂರಿನ ಮೇರೆಗೆ ಇಂದು(ಗುರುವಾರ) ಶ್ರೀನಿವಾಸ್ನನ್ನು ಬಂಧಿಸಲಾಗಿದೆ. ಈ ಹಿಂದೆ ಇತ ಕೆಆರ್ಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ. ಇದೀಗ ಆತನ ಮೇಲೆ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಡ್ರಾಪ್ ಕೇಳಿದ ಬಾಲಕಿ ಮೇಲೆ ಅತ್ಯಾಚಾರ: ತಮ್ಮೊಂದಿಗೆ ಬಂದಿದ್ದ ಯುವಕರಿಂದಲೇ ಕೃತ್ಯ
ಮೈಸೂರು: ಮಹಿಳೆ ಮೇಲೆ ಅಸಭ್ಯವಾಗಿ ವರ್ತಿಸಿದ ಆರೋಪದ ಹಿನ್ನಲೆ ವೈದ್ಯರ ವಿರುದ್ದ ಬೈಲಕುಪ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದವ ಘಟನೆ ನಡೆದಿದೆ. ಆರೋಗ್ಯ ಪರೀಕ್ಷೆಗೆ ಎಂದು ಬೈಲಕುಪ್ಪೆಯಲ್ಲಿರುವ ಸಿ ಎಸ್ ರೆಡ್ಡಿ ಕ್ಲಿನಿಕ್ಗೆ ಮಹಿಳೆ ತೆರಳಿದಾಗ, ವೈದ್ಯಾಧಿಕಾರಿ ಚಂದ್ರಸೇನ್ ರೆಡ್ಡಿ ಅಸಭ್ಯವಾಗಿ ವರ್ತಿಸಿದ ಆರೋಪದ ಹಿನ್ನಲೆ ದೂರು ದಾಖಲಾಗಿದೆ. ಕೂಡಲೇ ಪೊಲೀಸರು ಆರೋಪಿ ವೈದ್ಯನನ್ನು ವಶಕ್ಕೆ ಪಡೆದು, ಆತನ ಕ್ಲಿನಿಕ್ನ್ನು ಬಂದ್ ಮಾಡಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ