ಡ್ರಾಪ್ ಕೇಳಿದ ಬಾಲಕಿ‌ ಮೇಲೆ ಅತ್ಯಾಚಾರ: ತಮ್ಮೊಂದಿಗೆ ಬಂದಿದ್ದ ಯುವಕರಿಂದಲೇ ಕೃತ್ಯ

ಕೊಡಗಿನಲ್ಲೊಂದು ಅಮಾನವೀಯ ಘಟನೆ ನಡೆದಿದೆ. ಡ್ರಾಪ್ ಕೇಳಿದ ಬಾಲಕಿ‌ ಮೇಲೆ ತಮ್ಮ‌ ಜೊತೆಯಲ್ಲಿ‌ ಬಂದಿದ್ದ ಯುವಕರಿಂದಲೇ ಅತ್ಯಾಚಾರ ಮಾಡಿರುವಂತಹ ಘಟನೆ ಜೂ.9ರಂದು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಬಾಲಕಿಯರ ದೂರಿನನ್ವಯ ಐವರನ್ನು ಕುಟ್ಟ ಪೊಲೀಸ್​ರು ಬಂಧಿಸಿದ್ದಾರೆ.

ಡ್ರಾಪ್ ಕೇಳಿದ ಬಾಲಕಿ‌ ಮೇಲೆ ಅತ್ಯಾಚಾರ: ತಮ್ಮೊಂದಿಗೆ ಬಂದಿದ್ದ ಯುವಕರಿಂದಲೇ ಕೃತ್ಯ
ಡ್ರಾಪ್ ಕೇಳಿದ ಬಾಲಕಿ‌ ಮೇಲೆ ಅತ್ಯಾಚಾರ: ತಮ್ಮೊಂದಿಗೆ ಬಂದಿದ್ದ ಯುವಕರಿಂದಲೇ ಕೃತ್ಯ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on:Jul 10, 2024 | 8:54 PM

ಕೊಡಗು, ಜುಲೈ 10: ಡ್ರಾಪ್ ಕೇಳಿದ ಬಾಲಕಿ‌ ಮೇಲೆ ಯುವಕರಿಂದ ಅತ್ಯಾಚಾರ (sexual assult) ಮಾಡಿರುವಂತಹ ಘಟನೆ ಜಿಲ್ಲೆಯ ಪೊನ್ನಂಪೇಟೆ (Ponnampet) ತಾಲ್ಲೂಕಿನ ಕುಟ್ಟ ಸಮೀಪದ ಕಾಫಿ ತೋಟದಲ್ಲಿ ಜೂನ್ 9 ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮತ್ತೋರ್ವ ಬಾಲಕಿ‌ ಮೇಲೂ ಅತ್ಯಾಚಾರಕ್ಕೆ ಯತ್ನಿಸಲಾಗಿದೆ. ಸಂತ್ರಸ್ತ ಬಾಲಕಿಯರಿಂದ ಕುಟ್ಟ ಪೊಲೀಸ್ ಠಾಣೆಯಲ್ಲಿ‌ ದೂರು ದಾಖಲಾಗಿದ್ದು, ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಘಟನಾ‌ಸ್ಥಳಕ್ಕೆ ಕೊಡಗು ಎಸ್ಪಿ ರಾಮರಾಜನ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಜೂನ್ 9 ರಂದು ಮೂವರು ಸ್ನೇತರ ಜೊತೆ ರಸ್ತೆಯಲ್ಲಿ ಬಾಲಕಿಯರು ನಡೆದು ಸಾಗುತ್ತಿದ್ದರು. ಈ ವೇಳೆ ದಾರಿಯಲ್ಲಿ‌ ಬಂದ ಅಪರಿಚಿತ ಕಾರನ್ನು ಐವರು ಹತ್ತಿದ್ದಾರೆ. ನಾಗರಹೊಳೆಗೆ ಡ್ರಾಪ್‌ ನೀಡುವಂತೆ ಬಾಲಕಿಯರಿಂದ ವಿನಂತಿ ಮಾಡಲಾಗಿದೆ.

ಇದನ್ನೂ ಓದಿ: ವಿದ್ಯಾರ್ಥಿನಿಯರಿಗೆ ಮರ್ಮಾಂಗ ತೋರಿಸಿ ಎಸ್ಕೇಪ್ ಆಗುತ್ತಿದ್ದವನನ್ನು ಹುಡುಕಿ ಹಿಡಿದ ವಿವಿಪುರಂ ಪೊಲೀಸರು

ಮಾರುತಿ 800 ಕಾರಿನಲ್ಲಿ ನಾಗರಹೊಳೆ‌ ಕಡೆ ಬಾಲಕಿಯರು ತೆರಳಿದ್ದು, ದಾರಿ‌ ಮಧ್ಯೆ ಕಾಫಿ ತೋಟದಲ್ಲಿ ಓರ್ವ ಬಾಲಕಿ ಮೇಲೆ ನವೀಂದ್ರ, ಅಕ್ಷಯ್​ ಎಂಬುವವರಿಂದಲೇ ಅತ್ಯಾಚಾರ ಮಾಡಲಾಗಿದೆ. ಮತ್ತೋರ್ವ ಬಾಲಕಿ‌ ಮೇಲೆ ರಾಹುಲ್, ಮನು, ಸಂದೀಪ್​​ ಎಂಬುವವರಿಂದ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ತಮ್ಮ‌ ಜೊತೆಯಲ್ಲಿ‌ ಬಂದಿದ್ದ ಯುವಕರಿಂದಲೇ ಅತ್ಯಾಚಾರಕ್ಕೆ ಯತ್ನಿಸಿರುವುದು ದುರಂತ.

ವಿವಾಹಿತೆಗೆ ಜೀವ ಬೆದರಿಕೆ: ಅತ್ಯಾಚಾರ 

ವಿಜಯಪುರ: ಮನಗೂಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಯುವಕರಾದ ಆಕಾಶ ಹಡಗಲಿ, ಅಭಿಷೇಕ ಸಜ್ಜನ ಓರ್ವ ವಿವಾಹಿತೆಗೆ ಜೀವ ಬೆದರಿಕೆ ಹಾಕಿ ಆಕೆಯ ಮೇಲೆ ಅತ್ಯಾಚಾರ ಮಾಡಿರುವಂತಹ ಘಟನೆ ನಡೆದಿತ್ತು. ಇದನ್ನು ಮೊಬೈಲ್​ನಲ್ಲಿ ಚಿತ್ರೀಕರಿಸಿಕೊಂಡು ನಂತರ ಆ ಮಹಿಳೆಗೆ ಬೆದರಿಕೆ ಹಾಕಿ ನಿರಂತವಾಗಿ ದೈಹಿಕ ಶೋಷನೆ ಮಾಡಲಾಗಿತ್ತು. ಈ ವಿಚಾರ ಬಹಿರಂಗ ಮಾಡಿದರೆ ಕೊಲೆ ಮಾಡೋ ಬೆದರಿಕೆ ಹಾಕಿದ್ದಾರಂತೆ. ಸಾಲದೆಂಬಂತೆ ಈ ವಿಡಿಯೋವನ್ನು ವೈರಲ್ ಮಾಡಿದ್ದರು.

ಇದನ್ನೂ ಓದಿ: 5 ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ನವವಿವಾಹತೆಯ ಶವ ಪತ್ತೆ: ಪತಿ ವಿರುದ್ಧ ಕೊಲೆ ಆರೋಪ

ವೈರಲ್ ಆದ ವಿಡಿಯೋ ಅತ್ಯಾಚಾರಕ್ಕೀಡಾದ ಪತಿ ನೋಡಿ ಅದನ್ನು ಮನೆಯವರಿಗೆ ತಿಳಿಸಿದ್ಧಾನೆ. ಆಗ ವಿಚಾರ ಮಾಡಲಾಗಿದೆ. ಮನಗೂಳಿ ಪೊಲೀಸ್ ಠಾಣಾ ವ್ಯಾಪ್ತಿಯ ಆಕಾಶ ಹಡಗಲಿ, ಅಭಿಷೇಕ ಸಜ್ಜನ ಎಂಬಿಬ್ಬರು ನನಗೆ ಜೀವ ಬೆದರಿಕೆ ಹಾಕಿ ನಿರಂತರ ಅತ್ಯಾಚಾರ ಮಾಡಿದ್ದಾರೆ. ಈ ವಿಚಾರ ಹೊರಗಡೆ ಹೇಳಿದರೆ ಕೊಲೆ ಮಾಡೋದಾಗಿ ಜೀವ ಬೆದರಿಕೆ ಹಾಕಿದ್ದರು. ಭಯದಿಂದ ಈ ವಿಚಾರವನ್ನು ನಾನು ಎಲ್ಲಿಯೂ ಹೇಳಿಲ್ಲಾ ಎಂದು ಮಹಿಳೆ ವಿಷಯ ಮನೆಯವರಿಗೆ ತಿಳಿಸಿದ್ದರು.

ಮನಗೂಳಿ ಪೊಲೀಸ್ ಸಬ್ ಇನ್ಸಪೆಕ್ಟರ್ ಶ್ರೀಕಾಂತ ಕಾಂಬಳೆ ಹಾಗೂ ತಂಡ ಈ ಕೃತ್ಯವನ್ನು ಎಸಗಿರೋ ಆಕಾಶ ಹಡಗಲಿ, ಅಭಿಷೇಕ ಸಜ್ಜನ ಹಾಗೂ ಇವರಿಗೆ ಕೃತ್ಯಕ್ಕೆ ಕುಮ್ಮಕ್ಕು ನೀಡಿ ಸಹಾಯ ಮಾಡಿದ ಸೋಮಪ್ಪ ಸಜ್ಜನ ಹಾಗೂ ಜಯಶ್ರೀ ಹಡಗಲಿ ಎಂಬುವವರನ್ನು ಬಂಧಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:19 pm, Wed, 10 July 24

ತಾಜಾ ಸುದ್ದಿ
ಶಿರೂರು ದುರಂತ ನಡೆದು ವಾರ ಕಳೆದರೂ ಪತ್ತೆಯಾಗದ ಇನ್ನೂ ಮೂರು ದೇಹಗಳು
ಶಿರೂರು ದುರಂತ ನಡೆದು ವಾರ ಕಳೆದರೂ ಪತ್ತೆಯಾಗದ ಇನ್ನೂ ಮೂರು ದೇಹಗಳು
ಪ್ರೀಮಿಯಂ ಸ್ಮಾರ್ಟ್​ವಾಚ್ ಲಾಂಚ್ ಮಾಡಿದ ಸ್ಯಾಮ್​ಸಂಗ್
ಪ್ರೀಮಿಯಂ ಸ್ಮಾರ್ಟ್​ವಾಚ್ ಲಾಂಚ್ ಮಾಡಿದ ಸ್ಯಾಮ್​ಸಂಗ್
ಸಿಎಂ ಸಿದ್ದರಾಮಯ್ಯ ರಾಜೀನಾಮೆ ಅಗ್ರಹಿಸಿ ವಿರೋಧ ಪಕ್ಷದ ಸದಸ್ಯರಿಂದ ಸಭಾತ್ಯಾಗ
ಸಿಎಂ ಸಿದ್ದರಾಮಯ್ಯ ರಾಜೀನಾಮೆ ಅಗ್ರಹಿಸಿ ವಿರೋಧ ಪಕ್ಷದ ಸದಸ್ಯರಿಂದ ಸಭಾತ್ಯಾಗ
ಪ್ರೀತಿ ಪ್ರಾರಂಭದಲ್ಲೇ ಸೋನಲ್-ತರುಣ್ ಪ್ರೀ-ವೆಡ್ಡಿಂಗ್ ವಿಡಿಯೋ
ಪ್ರೀತಿ ಪ್ರಾರಂಭದಲ್ಲೇ ಸೋನಲ್-ತರುಣ್ ಪ್ರೀ-ವೆಡ್ಡಿಂಗ್ ವಿಡಿಯೋ
ವಿಧಾನಮಂಡಲ ಅಧಿವೇಶನ ಪುನರಾರಂಭ; ಇಲ್ಲಿ ಲೈವ್ ವೀಕ್ಷಿಸಿ
ವಿಧಾನಮಂಡಲ ಅಧಿವೇಶನ ಪುನರಾರಂಭ; ಇಲ್ಲಿ ಲೈವ್ ವೀಕ್ಷಿಸಿ
ಬೆಂಗಳೂರು: ಡಬಲ್ ಡೆಕ್ಕರ್ ಫ್ಲೈಓವರ್ ಮೇಲೆ ಬಿ ದಯಾನಂದ್​ ಬುಲೆಟ್ ರೈಡ್​​
ಬೆಂಗಳೂರು: ಡಬಲ್ ಡೆಕ್ಕರ್ ಫ್ಲೈಓವರ್ ಮೇಲೆ ಬಿ ದಯಾನಂದ್​ ಬುಲೆಟ್ ರೈಡ್​​
ಬಾಸ್ ಎಂದು ಹೋಗಿದ್ದೇ ತಪ್ಪಾಯ್ತು; ಪ್ರದೋಶ್ ಸಿಕ್ಕಿಬಿದ್ದಿದ್ದು ಹೀಗೆ
ಬಾಸ್ ಎಂದು ಹೋಗಿದ್ದೇ ತಪ್ಪಾಯ್ತು; ಪ್ರದೋಶ್ ಸಿಕ್ಕಿಬಿದ್ದಿದ್ದು ಹೀಗೆ
Daily Devotional: ಶತ್ರು ಕಾಟದಿಂದ ಪಾರಾಗಲು ಗೃಹಿಣಿಯರು ಈ ಕಾರ್ಯ ಮಾಡಿ
Daily Devotional: ಶತ್ರು ಕಾಟದಿಂದ ಪಾರಾಗಲು ಗೃಹಿಣಿಯರು ಈ ಕಾರ್ಯ ಮಾಡಿ
Nithya Bhavishya: ಈ ರಾಶಿಯವರಿಗೆ ಮೋಸ ಆಗುವ ಸಾಧ್ಯತೆ ಹೆಚ್ಚಿದೆ, ಎಚ್ಚರ
Nithya Bhavishya: ಈ ರಾಶಿಯವರಿಗೆ ಮೋಸ ಆಗುವ ಸಾಧ್ಯತೆ ಹೆಚ್ಚಿದೆ, ಎಚ್ಚರ
ಚಾಮರಾಜನಗರ: ಸೆಲ್ಫಿ ಶೋಕಿಗೆ ಡೆಡ್ಲಿ ಸ್ಪಾಟ್ ತಲುಪಿ ಪ್ರವಾಸಿಗರ ಹುಚ್ಚಾಟ!
ಚಾಮರಾಜನಗರ: ಸೆಲ್ಫಿ ಶೋಕಿಗೆ ಡೆಡ್ಲಿ ಸ್ಪಾಟ್ ತಲುಪಿ ಪ್ರವಾಸಿಗರ ಹುಚ್ಚಾಟ!