5 ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ನವವಿವಾಹತೆಯ ಶವ ಪತ್ತೆ: ಪತಿ ವಿರುದ್ಧ ಕೊಲೆ ಆರೋಪ
5 ತಿಂಗಳ ಹಿಂದೆಯಷ್ಟೇ ಮದುವೆ ಆಗಿದ್ದ ನವವಿವಾಹಿತೆ ಗಂಡನ ಮನೆಯಲ್ಲಿ ಶವವಾಗಿ ಪತ್ತೆ ಆಗಿರುವಂತಹ ಘಟನೆ ಕಲಬುರಗಿ ನಗರದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ನಡೆದಿದೆ. ಮೃತ ರಂಜಿತಾ ಕುಟುಂಬದವರು ಆಕೆಯ ಗಂಡನ ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ. ಸದ್ಯ ನವವಿವಾಹಿತೆಯ ಪತಿ, ಅತ್ತೆ, ಮಾವನನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕಲಬುರಗಿ, ಜುಲೈ 08: ನೇಣುಬಿಗಿದ ಸ್ಥಿತಿಯಲ್ಲಿ ನವವಿವಾಹಿತೆಯ ಶವ (dead body) ಪತಿ ಮನೆಯಲ್ಲಿ ಪತ್ತೆ ಆಗಿರುವಂತಹ ಘಟನೆ ನಗರದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ನಡೆದಿದೆ. ಅವರಾದ(ಬಿ) ಗ್ರಾಮದ ನವವಿವಾಹತೆ ರಂಜಿತಾ(25) ಮೃತ ನವವಿವಾಹಿತೆ. ಪತಿ (husband) ಉಮೇಶ್ ಕಟ್ಟಿಮನಿ ವಿರುದ್ಧ ಮೃತ ರಂಜಿತಾ ಕುಟುಂಬದವರಿಂದ ಕೊಲೆ ಆರೋಪ ಮಾಡಿದ್ದಾರೆ. ಉಮೇಶ್ ನೀರಾವರಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಆಗಿದ್ದು, 5 ತಿಂಗಳ ಹಿಂದೆಯಷ್ಟೇ ಮದುವೆ ಆಗಿತ್ತು.
ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಸದ್ಯ ರಂಜಿತಾ ಪತಿ, ಅತ್ತೆ, ಮಾವನನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕಲಬುರಗಿಯ ಸ್ಟೇಷನ್ ಬಜಾರ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಸಾಲಭಾದೆ ತಾಳಲಾರದೇ ವಿಷ ಸೇವಿಸಿ ರೈತ ಆತ್ಮಹತ್ಯೆ
ದಾವಣಗೆರೆ: ಸಾಲಭಾದೆ ತಾಳಲಾರದೇ ವಿಷ ಸೇವಿಸಿ ರೈತ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಬೆಳಗುತ್ತಿ ಗ್ರಾಮದಲ್ಲಿ ನಡೆದಿದೆ. ಬೆಳಗುತ್ತಿ ಗ್ರಾಮದ ಸೋಮಸುಂದರ ರಾಜ್ ಅರಸ್ (60) ಮೃತ ರೈತ.
ಇದನ್ನೂ ಓದಿ: ಧರ್ಮಸ್ಥಳ ಸಂಘದ ಸೇವಾ ಪ್ರತಿನಿಧಿ ಪೂಜಾ ಶವ ಪತ್ತೆ, ಕೊಲೆ ಮಾಡಿ ಆಗುಂಬೆ ಅರಣ್ಯದಲ್ಲಿ ಬಿಸಾಡಿದ್ದ ಸ್ನೇಹಿತ
ಸತತ ಮಳೆ ಕೊರತೆಯಿಂದ ಕೃಷಿಗೆ ಮಾಡಿದ ಸಾಲಕ್ಕೆ ಮನನೊಂದು ಳೆ ನಾಶಕ್ಕೆ ಬಳಸುವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಗುತ್ತಿ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 2 ಲಕ್ಷ, ಎಲ್‌ಎನ್‌ಟಿ ಫೈನಾನ್ ನಲ್ಲಿ 1 ಲಕ್ಷ, ಗ್ರಾಮೀಣ ಕೂಟ ಫೈನಾನ್ಸ್‌ನಲ್ಲಿ 1 ಲಕ್ಷ, ಧರ್ಮಸ್ಥಳ ಸಂಘದಲ್ಲಿ 1 ಲಕ್ಷ ಸೇರಿದಂತೆ ಕೈ ಗಡ 10 ಲಕ್ಷ ರೂ. ಸಾಲ ಮಾಡಿದ್ದರು. ಸಾಲಗಾರರ ಕಾಟ ಹೆಚ್ಚಾದ ಹಿನ್ನಲೆ ಜಮೀನಿನಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನ್ಯಾಮತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮನೆಯ ಮುಂದೆ ನಿಲ್ಲಿಸಿದ್ದ ಸೈಕಲ್ ಕ್ಷಣದಲ್ಲಿ ಕಳ್ಳತನ
ದಾವಣಗೆರೆ ನಗರದ ನಿಜಲಿಂಗಪ್ಪ ಬಡವಾಣೆಯ ಮನೆಯ ಮುಂದೆ ನಿಲ್ಲಿಸಿದ್ದ ಸೈಕಲ್ ಅನ್ನು ಕಳ್ಳತನ ಮಾಡಿರುವಂತಹ ಘಟನೆ ನಿನ್ನೆ ಸಂಜೆ ನಡೆದಿದೆ. ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆ ಆಗಿದೆ. ಮನೆಯ ಮಾಲೀಕ ಕಿರಣ ಎಂಬುವರಿಗೆ ಸೇರಿದ ಹತ್ತು ಸಾವಿರ ರೂ. ಮೌಲ್ಯದ ಸೈಕಲ್ ಕಳ್ಳತನವಾಗಿದೆ. ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.