ವೈಟ್ ಬೋರ್ಡ್​ನಲ್ಲಿ ಟ್ರಾವೆಲ್ಸ್ ನಡೆಸ್ತಿದ್ದ ಕಾರು ಮಾಲೀಕರಿಗೆ ಆರ್​ಟಿಓ ಶಾಕ್; 40 ಕ್ಕೂ ಹೆಚ್ಚು ವಾಹನಗಳು ಸೀಜ್, 200ಕ್ಕೂ ಹೆಚ್ಚು ಕೇಸ್ ದಾಖಲು

| Updated By: Digi Tech Desk

Updated on: Jun 28, 2024 | 4:01 PM

ಇಂದು ಬೆಳ್ಳಂಬೆಳಗ್ಗೆ ಬೆಂಗಳೂರಿನಲ್ಲಿ ಫೀಲ್ಡ್​ಗಿಳಿದಿದ್ದ ಆರ್​ಟಿಓ ಅಧಿಕಾರಿಗಳು, ಹತ್ತು ತಂಡಗಳಾಗಿ ಕಾರ್ಯಾಚರಣೆ ನಡೆಸಿದ್ದು, ವೈಟ್ ಬೋರ್ಡ್(White Board)​ನಲ್ಲಿ ಟ್ರಾವೆಲ್ಸ್ ನಡೆಸುತ್ತಿದ್ದ ಕಾರು ಮಾಲೀಕರಿಗೆ ಶಾಕ್ ಕೊಟ್ಟಿದ್ದಾರೆ. ಜೊತೆಗೆ ನಲವತ್ತಕ್ಕೂ ಹೆಚ್ಚು ವಾಹನ ಗಳನ್ನು ಸೀಜ್ ಮಾಡಿ, ಇನ್ನೂರಕ್ಕೂ ಹೆಚ್ಚು ಕೇಸ್ ದಾಖಲಿಸಲಾಗಿದೆ.

ವೈಟ್ ಬೋರ್ಡ್​ನಲ್ಲಿ ಟ್ರಾವೆಲ್ಸ್ ನಡೆಸ್ತಿದ್ದ ಕಾರು ಮಾಲೀಕರಿಗೆ ಆರ್​ಟಿಓ ಶಾಕ್; 40 ಕ್ಕೂ ಹೆಚ್ಚು ವಾಹನಗಳು ಸೀಜ್, 200ಕ್ಕೂ ಹೆಚ್ಚು ಕೇಸ್ ದಾಖಲು
ವೈಟ್ ಬೋರ್ಡ್​ನಲ್ಲಿ ಟ್ರಾವೆಲ್ಸ್ ನಡೆಸ್ತಿದ್ದ ಕಾರು ಮಾಲೀಕರಿಗೆ ಆರ್​ಟಿಓ ಶಾಕ್
Follow us on

ಬೆಂಗಳೂರು, ಜೂ.28: ವೈಟ್ ಬೋರ್ಡ್(White Board)​ನಲ್ಲಿ ಟ್ರಾವೆಲ್ಸ್ ನಡೆಸುತ್ತಿದ್ದ ಕಾರು ಮಾಲೀಕರಿಗೆ ಆರ್​ಟಿಓ(RTO) ಶಾಕ್ ಕೊಟ್ಟಿದ್ದು, ಅನಧಿಕೃತವಾಗಿ ಸಂಚಾರ ಮಾಡ್ತಿದ್ದ ಬಿಎಂಡಬ್ಲೂ, ವೋಲ್ವೋ, ಎಲೆಕ್ಟ್ರಿಕ್ ಬಿವೈಡಿ ಸೇರಿದಂತೆ ನಲವತ್ತಕ್ಕೂ ಹೆಚ್ಚು ವಾಹನ ಗಳನ್ನು ಸೀಜ್ ಮಾಡಿದ್ದಾರೆ. ಜೊತೆಗೆ ಇನ್ನೂರಕ್ಕೂ ಹೆಚ್ಚು ಕೇಸ್ ದಾಖಲಿಸಲಾಗಿದೆ. ಆ್ಯಪ್​ಗಳ ಮೂಲಕ ಅನಧಿಕೃತವಾಗಿ ವೈಟ್ ಬೋರ್ಡ್ ಕಾರುಗಳನ್ನು ಬಾಡಿಗೆಗೆ ನೀಡಲಾಗುತ್ತಿತ್ತು. ಇದೀಗ ಎಚ್ಚೆತ್ತ ಆರ್​ಟಿಓ ಅಧಿಕಾರಿಗಳು ಕಾರು ಮಾಲೀಕರಿಗೆ ಬಿಸಿ ಮುಟ್ಟಿಸಿದ್ದಾರೆ.

ಇಂದು ಬೆಳ್ಳಂಬೆಳಗ್ಗೆ ಬೆಂಗಳೂರಿನಲ್ಲಿ ಫೀಲ್ಡ್​ಗಿಳಿದಿದ್ದ ಆರ್​ಟಿಓ ಅಧಿಕಾರಿಗಳು, ಹತ್ತು ತಂಡಗಳಾಗಿ ಕಾರ್ಯಾಚರಣೆ ನಡೆಸಿದ್ದಾರೆ. ತೆರಿಗೆ ಕಟ್ಟದ, ವಾಹನಗಳ ಮೇಲೆ ಅನಧಿಕೃತವಾಗಿ ಅಡ್ವರ್ಟೈಸ್ಮೆಂಟ್ ಹಾಕಿದ, ಹೆಚ್ಚುವರಿ ಲೈಟ್ಸ್, ಬಸ್ ಮೇಲೆ ಹೆವಿ ಲೋಡ್ ಸೇರಿದಂತೆ ಎಲ್ಲಾ ವಾಹನಗಳನ್ನು ಸೀಜ್ ಮಾಡಿದ್ದಾರೆ. ಸಿಲಿಕಾನ್ ಸಿಟಿಯ ಸಾಕಷ್ಟು ಕಾರು ಮಾಲೀಕರು ತಮ್ಮ ವೈಟ್ ಬೋರ್ಡ್ ಕಾರುಗಳಲ್ಲಿ ಟ್ರಾವೆಲ್ಸ್ ನಡೆಸುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಇಂದಿನಿಂದ ಅಂತಹ ವಾಹನಗಳನ್ನು ಸೀಜ್ ಮಾಡಲು ಆರ್ಟಿಓ ಅಧಿಕಾರಿಗಳು ಮುಂದಾಗಿದ್ದಾರೆ.

ಇದನ್ನೂ ಓದಿ:ಆಟೋ ಚಾಲಕ-ಬೈಕ್ ಟ್ಯಾಕ್ಸಿ ಪ್ರಯಾಣಿಕನ ಮಧ್ಯೆ ಜಟಾಪಟಿ; ಇಬ್ಬರನ್ನೂ ಕಬ್ಬನ್ ಪಾರ್ಕ್ ಠಾಣೆಗೆ ಕರೆದೊಯ್ದ ಪೊಲೀಸರು

ಇನ್ನು ನಿಯಮಗಳ ಪ್ರಕಾರ ವೈಟ್ ಬೋರ್ಡ್ ವಾಹನಗಳಿರೋದು ಸ್ವಂತಕ್ಕೆ, ಯೆಲ್ಲೋ ಬೋರ್ಡ್ ವಾಹನಳನ್ನ ಮಾತ್ರ ಬಾಡಿಗೆ ಹೊಡೆಯಲು ಬಿಡಬೇಕು. ಆದರೆ, ಟ್ರಾವೆಲ್ಸ್​ ಮಾಲೀಕರು ರೂಲ್ಸ್​ ಬ್ರೇಕ್​ ಮಾಡಿ ವಾಹನ ಚಲಾವಣೆ ಮಾಡಿದ್ದು, ಇಂತಹವರಿಗೆ ಆರ್​ಟಿಓ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:05 pm, Fri, 28 June 24