ಖಾಸಗಿ ಬಸ್ ದರ ಹೆಚ್ಚಳ; KSRTC ಬಸ್​ಗೆ ಭಾರೀ ಡಿಮ್ಯಾಂಡ್, ಹೆಚ್ಚುವರಿ ಸಾರಿಗೆ ಬಸ್​ಗಳ ವ್ಯವಸ್ಥೆ

|

Updated on: May 09, 2023 | 3:36 PM

ಖಾಸಗಿ ಬಸ್​ ಟಿಕೆಟ್ ದರದಲ್ಲಿ ಭಾರೀ ಹೆಚ್ಚಳವಾದ ಹಿನ್ನೆಲೆ ಕೆಎಸ್​ಆರ್​ಟಿ ಬಸ್​ಗಳಿಗೆ ಬೇಡಿಕೆ ಹೆಚ್ಚಾಗಿದೆ. ಪರಿಣಾಮ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಸಾರಿಗೆ ಬಸ್​ಗಳನ್ನು ಕಲ್ಪಿಸಲಾಗಿದೆ.

ಖಾಸಗಿ ಬಸ್ ದರ ಹೆಚ್ಚಳ; KSRTC ಬಸ್​ಗೆ ಭಾರೀ ಡಿಮ್ಯಾಂಡ್, ಹೆಚ್ಚುವರಿ ಸಾರಿಗೆ ಬಸ್​ಗಳ ವ್ಯವಸ್ಥೆ
ಮತದಾನ ಹಿನ್ನೆಲೆ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಕೆಎಸ್​ಆರ್​ಟಿಸಿ ಬಸ್​ಗಳ ವ್ಯವಸ್ಥೆ
Follow us on

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ನಗರದಲ್ಲಿ ನೆಲೆಸಿರುವ ಅನೇಕರು ನಾಳೆ ಮತದಾನಕ್ಕೆ (Voting) ತವರೂರಿಗೆ ಹೋಗುತ್ತಿರುವ ಹಿನ್ನೆಲೆ ಹೆಚ್ಚುವರಿ ಸಾರಿಗೆ ಬಸ್​ಗಳನ್ನು ಕಲ್ಪಿಸಲಾಗಿದೆ. ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Elections 2023) ಹಿನ್ನೆಲೆ ಖಾಸಗಿ ಬಸ್​ ಮಾಲೀಕರು ಟಿಕೆಟ್ ದರವನ್ನು ದುಪ್ಪಟ್ಟು ಏರಿಕೆ ಮಾಡಿದ ಹಿನ್ನೆಲೆ ಅನೇಕರು ಕೆಎಸ್​ಆರ್​ಟಿಸಿ (KSRTC) ಕಡೆ ಮುಖಮಾಡಿದ್ದಾರೆ.

ಖಾಸಗಿ ಬಸ್​ ದರ ಹೆಚ್ಚಳದಿಂದ ಕಂಗಾಲಾದ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣಗಳಿಗೆ ಜಮಾಯಿಸಿದ್ದಾರೆ. ಇದರಿಂದಾಗಿ ಪ್ರಯಾಣಿಕರು ಪರದಾಡುವಂತಾಯಿತು. ಈ ಬಗ್ಗೆ ಟಿವಿ9 ವರದಿ ಮಾಡಿದ ಬೆನ್ನಲ್ಲೇ ಎಚ್ಚೆತ್ತ ಸಾರಿಗೆ ಇಲಾಖೆ ಅಧಿಕಾರಿಗಳು ಮೆಜೆಸ್ಟಿಕ್​​ನಿಂದ ವಿವಿಧ ಜಿಲ್ಲೆಗಳಿಗೆ ತೆರಳುವ ಪ್ರಯಾಣಿಕರಿಗೆ ಹೆಚ್ಚುವರಿ ಬಸ್​ ವ್ಯವಸ್ಥೆ ಕಲ್ಪಿಸಿದ್ದಾರೆ. ಒಟ್ಟು 32 ಬಸ್ಸುಗಳು ಹೆಚ್ಚುವರಿಯಾಗಿ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣಕ್ಕೆ ಬಂದಿವೆ.

ಇದನ್ನೂ ಓದಿ: ಕರ್ನಾಟಕ ಚುನವಾಣೆ: ಖಾಸಗಿ ಬಸ್ ಟಿಕೆಟ್ ದರ ಹೆಚ್ಚಳ; ಪ್ರಯಾಣಿಕರ ಆಕ್ರೋಶ

ಪ್ರಯಾಣಿಕರಿಗಾಗಿ ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್ ವ್ಯವಸ್ಥೆ ಮಾಡಲಾಗಿದ್ದು, ಈಗಾಗಲೇ ಬಳ್ಳಾರಿ, ಹಿರಿಯೂರು, ಚಳ್ಳಕೆರೆ ಕಡೆ ಹೆಚ್ಚುವರಿ ಬಸ್​ಗಳ ಓಡಾಟ ಆರಂಭವಾಗಿದೆ. ಈ ಭಾಗದ ಪ್ರಯಾಣಿಕರಿಗಾಗಿ 10 ಬಿಎಂಟಿಸಿ ಬಸ್ ವ್ಯವಸ್ಥೆ ಮಾಡಲಾಗಿದೆ. ಬಳ್ಳಾರಿ, ಹಿರಿಯೂರು, ಚಳ್ಳೆಕೆರೆ ಕಡೆ ಬಿಎಂಟಿಸಿ ಬಸ್​ ಸೇವೆ ಆರಂಭಗೊಂಡಿದ್ದು, ಹೆಚ್ಚುವರಿಯಾಗಿ ಕೆಎಸ್ಆರ್​ಟಿಸಿ ಬಸ್ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ.

ಹಿರಿಯೂರಿಗೆ ಬಿಎಂಟಿಸಿ ಮೊದಲ ಹೊರಟಿದ್ದು, ಚಳ್ಳಕೆರೆ ಮಾರ್ಗಕ್ಕೆ ಮತ್ತೊಂದು ಕೆಎಸ್ಆರ್​ಟಿಸಿ ಬಸ್ ವ್ಯವಸ್ಥೆ ಮಾಡಲಾಗಿದೆ. ಬೆಳಗಾವಿಗೂ ಹೆಚ್ಚುವರಿ ಬಸ್ ಹೊರಟಿದೆ. ತುಮಕೂರು,ಹಿರಿಯೂರು ಹಾಗೂ ಚಳ್ಳಕೆರೆ ಮಾರ್ಗವಾಗಿ ಈ ಬಸ್​ಗಳು ಹೊರಡಲಿವೆ. ಸದ್ಯ ನಿಲ್ದಾಣಕ್ಕೆ ಬರುತ್ತಿರುವ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ