RCB vs RR: ಆರ್​ಸಿಬಿ ಗೆಲುವಿಗೆ ದೇಗುಲಗಳಲ್ಲಿ ಪೂಜೆ, ಬೆಂಗಳೂರಿನ ಪಬ್​​ಗಳಲ್ಲಿ ಕ್ರಿಕೆಟ್ ಪ್ರೇಮಿಗಳಿಗೆ ಸ್ಪೆಷಲ್ ಡಿಸ್ಕೌಂಟ್!

| Updated By: Ganapathi Sharma

Updated on: May 22, 2024 | 8:03 AM

ಆರ್​ಸಿಬಿಯ ಅನೇಕ ಅಭಿಮಾನಿಗಳು ದೇವರ ಮೊರೆ ಹೋಗಿದ್ದು, ಶಕ್ತಿ ದೇವತೆ ಬನಶಂಕರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿಸಿದ್ದಾರೆ. ಮತ್ತೊಂದೆಡೆ ಮ್ಯಾಚ್ ಎಂಜಾಯ್ ಮಾಡಲು ಬೆಂಗಳೂರಿನ ಪಬ್​ಗಳು ಆರ್​​ಸಿಬಿ ಅಭಿಮಾನಿಗಳಿಗೆ ಭರ್ಜರಿ ಆಫರ್​ಗಳನ್ನು ನೀಡಿವೆ. ಜತೆಗೆ ಮ್ಯಾಚ್ ಲೈವ್​ಸ್ಟ್ರೀಮಿಂಗ್​ಗೆ ದೊಡ್ಡ ಸ್ಕ್ರೀನ್​ಗಳ ವ್ಯವಸ್ಥೆಯನ್ನೂ ಮಾಡಿವೆ.

RCB vs RR: ಆರ್​ಸಿಬಿ ಗೆಲುವಿಗೆ ದೇಗುಲಗಳಲ್ಲಿ ಪೂಜೆ, ಬೆಂಗಳೂರಿನ ಪಬ್​​ಗಳಲ್ಲಿ ಕ್ರಿಕೆಟ್ ಪ್ರೇಮಿಗಳಿಗೆ ಸ್ಪೆಷಲ್ ಡಿಸ್ಕೌಂಟ್!
ಬೆಂಗಳೂರಿನ ಬನಶಂಕರಿ ದೇಗುಲದಲ್ಲಿ ಆರ್​ಸಿಬಿ ಅಭಿಮಾನಿಗಳಿಂದ ಪೂಜೆ
Follow us on

ಬೆಂಗಳೂರು, ಮೇ 21: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಐಪಿಎಲ್ ಪ್ಲೇಆಫ್ (IPL Eliminator) ಪ್ರವೇಶಿಸಿದ್ದು, ಇಂದು ನಿರ್ಣಾಯಕ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ (RR) ತಂಡದ ವಿರುದ್ಧ ಸೆಣಸಾಡಲಿದೆ. ಸತತ 6 ಸೋಲುಗಳ ನಂತರ ಸತತ 6 ಗೆಲುವು ಕಂಡಿರುವ ಆರ್‌ಸಿಬಿ ತಂಡ ಇದೀಗ ಕಪ್ ಗೆಲ್ಲುವ ಫೇವರಿಟ್ ತಂಡವಾಗಿ ಕೂಡ ಗುರುತಿಸಿಕೊಂಡಿದೆ. ಹೀಗಾಗಿ ಮ್ಯಾಚ್ ಗೆಲ್ಲಲು ಅಭಿಮಾನಿಗಳು ಒಂದು ಕಡೆ ದೇವರ ಮೊರೆ ಹೋದರೆ, ಇನ್ನೊಂದಷ್ಟು ಮಂದಿ ಮ್ಯಾಚ್ ಎಂಜಾಯ್ ಮಾಡಲು ಪಬ್ ಕ್ಲಬ್ ಕಡೆ ಮುಖ ಮಾಡುವ ಸಾಧ್ಯತೆ ಇದೆ. ಹೀಗಾಗಿ ಬೆಂಗಳೂರಿನ ಪಬ್​ಗಳು ಕೂಡ ಅನೇಕ ಆಫರ್​ಗಳನ್ನು ಗ್ರಾಹಕರಿಗೆ ನೀಡಿವೆ.

ಆರ್​ಸಿಬಿಯ ಅನೇಕ ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ. ಮ್ಯಾಚ್ ಗೆಲ್ಸಮ್ಮಾ ಎಂದು ದೇವಸ್ಥಾನಗಳಲ್ಲಿ ಪೂಜೆಗೆ ಮುಂದಾಗಿದ್ದಾರೆ. ಪಂದ್ಯಕ್ಕೆ ಯಾವುದೇ ಅಡ್ಡಿಯಾಗದಿರಲಿ ಎಂದು ಶಕ್ತಿ ದೇವತೆ ಬನಶಂಕರಿಯ ಮೊರೆ ಹೋಗಿರುವ ಅಭಿಮಾನಿಗಳು ಮಂಗಳವಾರ ರಾತ್ರಿ ಹಾಗೂ ಬುಧವಾರ ಬೆಳಗ್ಗೆ ಬನಶಂಕರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿಸಿದ್ದಾರೆ.

ಬೆಂಗಳೂರಿನ ಪಬ್​ಗಳು ಕ್ರಿಕೆಟ್ ಅಭಿಮಾನಿಗಳಿಗೆ ಸಖತ್​ ಆಫರ್ ನೀಡಿದ್ದು, ಸಿಲಿಕಾನ್ ಸಿಟಿಯ ಪಬ್​​ಗಳಲ್ಲಿ ಭರ್ಜರಿ ಸಿದ್ಧತೆ ಶುರು ಮಾಡಲಾಗಿದೆ. ಆರ್​​​ಸಿಬಿ ಫ್ಲ್ಯಾಗ್​ಗಳನ್ನು ಹಾಕಿ ಸಿದ್ಧತೆ ಮಾಡಲಾಗಿದೆ. ಮ್ಯಾಚ್ ಎಂಜಾಯ್ ಮಾಡಲು ಎಲ್​​ಇಡಿ ಸ್ಕ್ರೀನ್ ಅಳವಡಿಕೆ ಮಾಡಲಾಗುತ್ತಿದ್ದು, ಅಭಿಮಾನಿಗಳಿಗೆ ಮ್ಯಾಚ್ ಲೈವ್ ಸ್ಟ್ರೀಮಿಂಗ್ ನೋಡಲು ವ್ಯವಸ್ಥೆ ಮಾಡಿಕೊಂಡಿವೆ.

ಬಸವನಗುಡಿಯ ಸೋಹೋ ಪಬ್ ಸೇರಿದ್ದಂತೆ ಅನೇಕ ಪಬ್ ಗಳಲ್ಲಿ ಸಿದ್ಧತೆ ಮಾಲಾಗಿದ್ದು ಮ್ಯಾಚ್​​ಗೆ ಕೆಲವು ಡಿಸ್ಕೌಂಟ್ ಕೂಡಾ ನೀಡಿವೆ. 1+1 ಆಫರ್​ ಜೊತೆಗೆ 3+1 ಆಫರ್ ಕೂಡಾ ನೀಡಲಾಗಿದ್ದು ಎಕ್ಸಕ್ಲೂಸಿವ್ ಆಗಿ ಆರ್​​ಸಿಬಿ ಅಭಿಮಾನಿಗಳಿಗೆ ಬಿಲ್ ಮೇಲೆ ಶೇ 10ರಷ್ಟು ಡಿಸ್ಕೌಂಟ್ ಕೂಡಾ ನೀಡುವುದಾಗಿ ಘೋಷಣೆ ಮಾಡಿವೆ.

ಬೆಂಗಳೂರಿನ ಬಹುತೇಕ ಪಬ್​​ಗಳಲ್ಲಿ ಮ್ಯಾಚ್ ಎಂಜಾಯ್ ಮಾಡಲು ಆರ್​ಸಿಬಿ ಅಭಿಮಾನಿಗಳು ಸೀಟ್ ಬುಕ್ಕಿಂಗ್ ಕೂಡ ಮಾಡುತ್ತಿದ್ದಾರೆ ಎಂಬುದು ತಿಳಿದುಬಂದಿದೆ.

ಇದನ್ನೂ ಓದಿ: ಇಂದು ನಿರ್ಣಾಯಕ ಪಂದ್ಯದಲ್ಲಿ RCB vs RR ಮುಖಾಮುಖಿ

ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂದು ನಡೆಯಲಿರುವ ಐಪಿಎಲ್ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಎದುರಿಸಲಿರುವ ಆರ್​​ಸಿಬಿಗೆ ಈ ಪಂದ್ಯ ನಿರ್ಣಾಯಕವಾಗಿದೆ. ಪಂದ್ಯದಲ್ಲಿ ಗೆಲ್ಲುವ ತಂಡ 2ನೇ ಕ್ವಾಲಿಫೈಯರ್​ಗೆ ಪ್ರವೇಶಿಸಿದರೆ, ಸೋಲುವ ತಂಡ ಐಪಿಎಲ್​ನಿಂದ ಹೊರಬೀಳಲಿದೆ. ಹೀಗಾಗಿ ಉಭಯ ತಂಡಗಳಿಗೂ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ