ಬೆಂಗಳೂರು: ನಡುರಸ್ತೆಯಲ್ಲೇ ಯುವತಿಯ ಬಟ್ಟೆ ಎಳೆದಾಡಿದ್ದ ಆರೋಪಿ 500 ಸಿಸಿಟಿವಿ ಪರಿಶೀಲನೆ ಬಳಿಕ ಸಿಕ್ಕಿಬಿದ್ದ

| Updated By: ರಮೇಶ್ ಬಿ. ಜವಳಗೇರಾ

Updated on: Nov 24, 2023 | 10:50 AM

ನವೆಂಬರ್ 6ರಂದು ಬೆಂಗಳೂರಿನ ಜಯನಗರದ ಡಿಸಿಪಿ ಕಚೇರಿ ಬಳಿ ಯುವತಿಯ ಬಟ್ಟೆ ಎಳೆದಾಡಿ ಕಿರುಕುಳ ನೀಡಿದ್ದ ಆರೋಪಿ ಸಿಕ್ಕಿಬಿದ್ದಿದ್ದಾನೆ. ಕೃತ್ಯ ಬಗ್ಗೆ ಕೇಸ್ ದಾಖಲಾದ ಬಗ್ಗೆಯೂ ಅರಿವಿಲ್ಲದೇ ಆರೋಪಿ ಮನೆಯಲ್ಲಿದ್ದ. ಇತ್ತನ ಪೊಲೀಸರು ಸಾಲು-ಸಾಲು ಸಿಸಿಟಿವಿಗಳನ್ನು ಪರಿಶೀಲನೆ ಮಾಡಿ ಆರೋಪಿಯ ಮನೆ ಬಾಗಿಲು ಬಡೆದಿದ್ದಾರೆ.

ಬೆಂಗಳೂರು: ನಡುರಸ್ತೆಯಲ್ಲೇ ಯುವತಿಯ ಬಟ್ಟೆ ಎಳೆದಾಡಿದ್ದ ಆರೋಪಿ 500 ಸಿಸಿಟಿವಿ ಪರಿಶೀಲನೆ ಬಳಿಕ ಸಿಕ್ಕಿಬಿದ್ದ
ಹರೀಶ್, ಬಂಧಿತ ಆರೋಪಿ
Follow us on

ಬೆಂಗಳೂರು, (ನವೆಂಬರ್ 24): ಬೆಂಗಳೂರಿನ (Bengaluru) ಜಯನಗರದ ಡಿಸಿಪಿ ಕಚೇರಿ ಎದುರೇ ಯುವತಿ ಬಟ್ಟೆ ಎಳೆದಾಡಿ ಲೈಂಗಿಕ ಕಿರುಕುಳ(sexual harassment) ನೀಡಿದ್ದ ಆರೋಪಿ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ಬರೋಬ್ಬರಿ 500 ಸಿಸಿಟಿವಿಗಳ ಪರಿಶೀಲನೆ ಮಾಡಿ ಆರೋಪಿ ಬಿನ್ನಿಪೇಟೆಯ ಹರೀಶ್ (22) ಎನ್ನುವಾತನ್ನು ಜಯನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದೇ ನವೆಂಬರ್ 6ರಂದು ಜಯನಗರದ ದಕ್ಷಿಣ ವಿಭಾಗದ ಡಿಸಿಪಿ ಕಚೇರಿ ಮುಂಭಾಗದ ನಡುರಸ್ತೆಯಲ್ಲಿ ಹರೀಶ್, ಯುವತಿಯೋರ್ವಳ ಬಟ್ಟೆ ಎಳೆದಾಡಿ ಕಿರುಕುಳ ನೀಡಿದ್ದ. ಕೃತ್ಯ ಎಸಗಿದ ಬಳಿಕ ತನಗೆ ಏನು ಗೊತ್ತಿಲ್ಲದಂತೆ ಇದ್ದ. ಇತ್ತ ಸಂತ್ರಸ್ತೆ ಯುವತಿ ಜಯನಗರ ಪೊಲೀಸ್​ ಠಾಣೆಗೆ ದೂರು ನೀಡಿದ್ದಳು, ಈ ದೂರಿ ಮೇರೆಗೆ ಎಫ್​ಐಆರ್ ದಾಖಲಿಸಿಕೊಂಡಿದ್ದ ಜಯನಗರ ಪೊಲೀಸರು, ಬರೋಬ್ಬರಿ 500 ಸಿಸಿಟಿವಿಗಳ ಬೆನ್ನತ್ತಿ ಆರೋಪಿ ಹರೀಶ್​ನನ್ನು ಬಂಧಿಸಿದ್ದಾರೆ. ಈಗ ಆರೋಪಿ ಹರೀಶ್, ಪೊಲೀಸರಿಗೆ ತಪ್ಪಾಯ್ತು ಎಂದು ಅಂಗಲಾಚಿ ಬೇಡಿಕೊಳ್ಳುತ್ತಿದ್ದಾನೆ. ಆದರೂ ಪೊಲೀಸರು ಈ ರೀತಿಯ ಕೃತ್ಯ ಎಸಗಿದ್ಯಾಕೆ? ಆಕೆಗೆ ಹಾಗೂ ಆರೋಪಿಗೆ ಏನು ಸಂಬಂಧ? ಎನ್ನುವುದನ್ನು ಪತ್ತೆ ಮಾಡಲು ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಡಿಸಿಪಿ ಕಚೇರಿ ಎದುರು ಯುವತಿಯ ಬಟ್ಟೆ ಎಳೆದಾಡಿ, ಕಿರುಕುಳ ನೀಡಿದ ಯುವಕ

ಘಟನೆ ಹಿನ್ನಲೆ

ನವೆಂಬರ್ 06ರಂದು ಬೆಂಗಳೂರಿನ ಜಯನಗರದ ಸೌತ್‌ ಎಂಡ್‌ ಸರ್ಕಲ್‌ನಲ್ಲಿ ಬಳಿ ಇರುವ ಉಪ ಪೊಲೀಸ್ ಆಯುಕ್ತರ ಕಚೇರಿ ಸಮೀಪವೇ ಈ ದುರ್ಘಟನೆ ನಡೆದಿತ್ತು. ಯುವತಿ ಕೆಲಸ ಮುಗಿಸಿ ರಾತ್ರಿ ಸುಮಾರು 10:40ರ ಸುಮಾರಿಗೆ ಕೂಡ್ಲುಗೇಟ್‌ನಿಂದ ಬಸವನಗುಡಿ ಕಡೆ ಬರುತ್ತಿದ್ದರು. ಈ ವೇಳೆ ವೈಟ್ ಸ್ವೆಟ್ ಶರ್ಟ್ ಹಾಗೂ ಹ್ಯಾಟ್ ಧರಿಸಿಕೊಂಡು ಬಂದಿದ್ದ ಬಂಧಿತ ಹರೀಶ್ ,ಯುವತಿಯನ್ನು ಸ್ವಲ್ಪ ದೂರ ಹಿಂಬಾಲಿಸಿದ್ದ. ಬಳಿಕ ಸೌತ್‌ ಎಂಡ್ ಸರ್ಕಲ್ ಬಳಿ ಏಕಾಏಕಿ ಅಡ್ಡಗಟ್ಟಿ ಬಳಿಕ ಯುವತಿಯ ಬಟ್ಟೆ ಹಿಡಿದು ಎಳೆದಾಡಿ ಲೈಂಗಿಕ ಕಿರುಕುಳ ನೀಡಿದ್ದ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ