Jayanagar History; ಇತ್ತೀಚೆಗಷ್ಟೇ 75 ನೇ ವರ್ಷಾಚರಣೆ ಮಾಡಿದ್ದ ಜಯನಗರ ಹೀಗಿತ್ತು ನೋಡಿ!

‘ಇತ್ತೀಚೆಗಷ್ಟೇ ಜಯನಗರಕ್ಕೆ 75 ವರ್ಷ ತುಂಬಿತು. ನಾವು ಇಲ್ಲಿ ಕಾಣುವ ಸಂಕೀರ್ಣವನ್ನು 1976 ರಲ್ಲಿ ನಿರ್ಮಿಸಲಾಯಿತು, ಅದು ಒಮ್ಮೆ ಆಟದ ಮೈದಾನವಾಗಿತ್ತು. ಅಲ್ಲದೆ, ಚಿತ್ರದಲ್ಲಿನ ಡಬಲ್ ಡೆಕ್ಕರ್‌ನ ಬಸ್ ಸಂಖ್ಯೆಯನ್ನು ನೀವು ಊಹಿಸಬಹುದೇ?’ ಎಂದು ಸಾಮಾಜಿಕ ಮಾಧ್ಯಮ ಎಕ್ಸ್​​ (ಈ ಹಿಂದೆ ಟ್ವಿಟರ್) ಹ್ಯಾಂಡಲ್​ ‘ವಿಕೆಟಿಕೆವಿ’ಯಲ್ಲಿ ಪೋಸ್ಟ್ ಮಾಡಲಾಗಿದೆ.

Jayanagar History; ಇತ್ತೀಚೆಗಷ್ಟೇ 75 ನೇ ವರ್ಷಾಚರಣೆ ಮಾಡಿದ್ದ ಜಯನಗರ ಹೀಗಿತ್ತು ನೋಡಿ!
‘ವಿಕೆಟಿಕೆವಿ’ ಎಕ್ಸ್​​ ಹ್ಯಾಂಡಲ್​ನಲ್ಲಿ ಪೋಸ್ಟ್ ಮಾಡಲಾಗಿರುವ ಚಿತ್ರ
Image Credit source: Twitter

Updated on: Sep 13, 2023 | 8:46 PM

ಬೆಂಗಳೂರು, ಸೆಪ್ಟೆಂಬರ್ 13: ಬೆಂಗಳೂರಿನ (Bangalore) ಅತ್ಯಂತ ಪ್ರಮುಖ ಪ್ರದೇಶಗಳಲ್ಲೊಂದಾದ ಜಯನಗರ (Jayanagar) ಇತ್ತೀಚೆಗಷ್ಟೇ ವಜ್ರ ಮಹೋತ್ಸವವನ್ನು ಆಚರಿಸಿಕೊಂಡಿದೆ. 75ನೇ ವರ್ಷ ಪೂರೈಸಿರುವ ಜಯನಗರ 1976ರಲ್ಲಿ ಹೇಗಿತ್ತು ಎಂಬುದನ್ನು ಸಾಮಾಜಿಕ ಮಾಧ್ಯಮ ಎಕ್ಸ್​ ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದು, ಸ್ವಾರಸ್ಯಕರ ಸಂದೇಶಗಳ ವಿನಿಮಯಕ್ಕೆ ಕಾರಣವಾಗಿದೆ. ಅಂದಹಾಗೆ, 2023ರ ಆಗಸ್ಟ್ 20 ರಂದು ಬೆಂಗಳೂರಿನ ಅತ್ಯಂತ ಹಳೆಯ ಮತ್ತು ಪ್ರಮುಖ ಪ್ರದೇಶಗಳಲ್ಲಿ ಒಂದಾದ ಜಯನಗರವು ತನ್ನ 75 ನೇ ವಾರ್ಷಿಕೋತ್ಸವವನ್ನು ಆಚರಿಸಿದೆ.

‘ಇತ್ತೀಚೆಗಷ್ಟೇ ಜಯನಗರಕ್ಕೆ 75 ವರ್ಷ ತುಂಬಿತು. ನಾವು ಇಲ್ಲಿ ಕಾಣುವ ಸಂಕೀರ್ಣವನ್ನು 1976 ರಲ್ಲಿ ನಿರ್ಮಿಸಲಾಯಿತು, ಅದು ಒಮ್ಮೆ ಆಟದ ಮೈದಾನವಾಗಿತ್ತು. ಅಲ್ಲದೆ, ಚಿತ್ರದಲ್ಲಿನ ಡಬಲ್ ಡೆಕ್ಕರ್‌ನ ಬಸ್ ಸಂಖ್ಯೆಯನ್ನು ನೀವು ಊಹಿಸಬಹುದೇ?’ ಎಂದು ಸಾಮಾಜಿಕ ಮಾಧ್ಯಮ ಎಕ್ಸ್​​ (ಈ ಹಿಂದೆ ಟ್ವಿಟರ್) ಹ್ಯಾಂಡಲ್​ ‘ವಿಕೆಟಿಕೆವಿ’ಯಲ್ಲಿ ಪೋಸ್ಟ್ ಮಾಡಲಾಗಿದೆ. ಇದಕ್ಕೆ ಹಲವು ಮಂದಿ ತಮ್ಮದೇ ಆದ ಊಹೆಗಳ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

‘ವಿಕೆಟಿಕೆವಿ’ ಎಕ್ಸ್​​ ಹ್ಯಾಂಡಲ್​ನಲ್ಲಿ ಮಾಡಲಾಗಿರುವ ಪೋಸ್ಟ್

ಜಯನಗರ ಸ್ಥಾಪನೆಯಾಗಿದ್ದು ಯಾವಾಗ?

ದೇಶವು ಸ್ವಾತಂತ್ರ್ಯ ಪಡೆದ ಕೇವಲ ಒಂದು ವರ್ಷದ ನಂತರ ಜಯನಗರವನ್ನು ಸ್ಥಾಪಿಸಲಾಯಿತು. ಇದಕ್ಕೆ 1948 ರ ಆಗಸ್ಟ್ 20 ರಂದು ಶಂಕುಸ್ಥಾಪನೆ ಮಾಡಲಾಗಿತ್ತು. ಬೆಂಗಳೂರಿನ ಮೊದಲ ಯೋಜಿತ ವಸತಿ ಪ್ರದೇಶಗಳಲ್ಲಿ ಒಂದೆಂದು ಜಯನಗರವನ್ನು ಘೋಷಿಸಲಾಗಿತ್ತು.

ಇಂದು ಜಯನಗರವು ಹೆಚ್ಚು ಬೇಡಿಕೆಯಿರುವ ವಸತಿ ಪ್ರದೇಶವಾಗಿದೆ. ಶಾಪಿಂಗ್ ಮಾಲ್‌ಗಳು ಮತ್ತು ಶಿಕ್ಷಣ ಸಂಸ್ಥೆಗಳಿಂದ ಹಿಡಿದು ರಸ್ತೆಬದಿಯ ತಿನಿಸುಗಳು ಮತ್ತು ದುಬಾರಿ ಹೋಟೆಲ್‌ಗಳವರೆಗೆ ವಾಣಿಜ್ಯ ಸಂಸ್ಥೆಗಳ ಸಂಕೀರ್ಣವನ್ನು ಹೊಂದಿದೆ. ಈ ಸ್ಥಳವು ಹಲವಾರು ಪೂಜಾ ಸ್ಥಳಗಳನ್ನು ಹೊಂದಿದೆ. ಆಕರ್ಷಕ ಬೀದಿಗಳು, ವಿಶೇಷವಾಗಿ ವಾರಾಂತ್ಯದಲ್ಲಿ ವಿರಾಮವಾಗಿ ಅಡ್ಡಾಡಲು ಸಾಂಪ್ರದಾಯಿಕ ಸ್ಥಳವಾಗಿದೆ.

ಇದನ್ನೂ ಓದಿ: ಬೆಂಗಳೂರು: ಆಗಸ್ಟ್ ತಿಂಗಳಲ್ಲಿ ಟಿಕೆಟ್ ಇಲ್ಲದೆ ಪಯಾಣಿಸಿದ 3208 ಪ್ರಯಾಣಿಕರಿಗೆ ದಂಡ ಹಾಕಿದ ಕೆಎಸ್ಆರ್​ಟಿಸಿ; ಬಂದ ಮೊತ್ತವೆಷ್ಟು ಗೊತ್ತಾ?

ಒಂದರಿಂದ ಒಂಬತ್ತರವರೆಗಿನ ಸಂಖ್ಯೆಯ ಹತ್ತು ಬ್ಲಾಕ್‌ಗಳನ್ನು ಒಳಗೊಂಡಿದೆ. ಹೆಚ್ಚುವರಿ ನಾಲ್ಕನೇ ಟಿ ಬ್ಲಾಕ್ (ತಾಯಪ್ಪ ಬ್ಲಾಕ್), ಜಯನಗರದ ಮೂರನೇ ಮತ್ತು ನಾಲ್ಕನೇ ಬ್ಲಾಕ್‌ಗಳು ವಾಣಿಜ್ಯ ಕೇಂದ್ರಗಳಾಗಿ ಪ್ರವರ್ಧಮಾನಕ್ಕೆ ಬಂದಿವೆ. ಉಳಿದ ಬ್ಲಾಕ್‌ಗಳು ವಸತಿ ಮತ್ತು ವಾಣಿಜ್ಯ ಸ್ಥಳಗಳ ಮಿಶ್ರಣವಾಗಿವೆ.

ಈ ಪ್ರದೇಶದಲ್ಲಿ ಹಲವಾರು ಚಲನಚಿತ್ರ ತಾರೆಯರು, ರಾಜಕಾರಣಿಗಳು, ಐಎಎಸ್ ಅಧಿಕಾರಿಗಳು ಮತ್ತು ವಿಜ್ಞಾನಿಗಳು ಸೇರಿದಂತೆ ಗಣ್ಯ ವ್ಯಕ್ತಿಗಳು ನೆಲೆಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ