ಸ್ಟಿಂಗ್ ಆಪರೇಷನ್​​: ಜೆಡಿಎಸ್​ನ ಐಟಿ ಟೀಮ್ ಟಾರ್ಗೆಟ್; ಮೋಹನ್​ ಪತ್ನಿ ಮೇಲೆ ಪೋಲಿಸರಿಂದ ದೌರ್ಜನ್ಯ ಆರೋಪ

ಜೆಡಿಎಸ್ ವಕ್ತಾರ ಪ್ರದೀಪ್, ಸ್ಟಿಂಗ್ ಆಪರೇಷನ್ ತನಿಖೆ ಸಂಬಂಧ ಮೋಹನ್ ಪತ್ನಿ ಪವಿತ್ರಾ ಮೇಲೆ ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ. ನೋಟಿಸ್ ಇಲ್ಲದೆ ಮನೆ ಶೋಧಿಸಿ, ಮೊಬೈಲ್ ಹಾಗೂ ಪೆನ್ ಡ್ರೈವ್ ವಶಪಡಿಸಿಕೊಂಡಿದ್ದಾರೆ. ಮಹಿಳೆಯ ಗೌಪ್ಯತೆಗೆ ಧಕ್ಕೆ ತಂದಿರುವ ಪೊಲೀಸರ ಕ್ರಮವನ್ನು ಖಂಡಿಸಿದ್ದು, ನಿಜವಾದ ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಸ್ಟಿಂಗ್ ಆಪರೇಷನ್​​: ಜೆಡಿಎಸ್​ನ ಐಟಿ ಟೀಮ್ ಟಾರ್ಗೆಟ್; ಮೋಹನ್​ ಪತ್ನಿ ಮೇಲೆ ಪೋಲಿಸರಿಂದ ದೌರ್ಜನ್ಯ ಆರೋಪ
ಪ್ರದೀಪ್
Edited By:

Updated on: Oct 23, 2026 | 9:59 PM

ಬೆಂಗಳೂರು, ಅಕ್ಟೋಬರ್​​ 23: ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್​ ವಿಚಾರ ಸದ್ಯ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇದರಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆಂದು ಸ್ವತಃ ದೂರುದಾರ ಮಾಜಿ ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ. ಇನ್ನು ಈ ವಿಚಾರವಾಗಿ ಜೆಡಿಎಸ್​​ನ ಐಟಿ ವಿಂಗ್​​ನವರ ವಿಚಾರಣೆ ಕೂಡ ಮಾಡಲಾಗಿದೆ. ಆದರೆ ಅದು ಇನ್ನೂ ಮುಂದುವರೆದಿದ್ದು, ತೊಂದರೆ ಕೊಡುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯ ವಕ್ತಾರ ಮತ್ತು ಕಾನೂನು ಸಲಹೆಗಾರ ಪ್ರದೀಪ್​​ ಗಂಭೀರ ಆರೋಪ ಮಾಡಿದ್ದಾರೆ.

ಮೋಹನ್ ಹೆಂಡತಿ ಮೇಲೆ ಪೋಲಿಸರು ಅಟ್ಯಾಕ್ ಮಾಡಿದ್ದಾರೆ: ಪ್ರದೀಪ್

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರದೀಪ್, ‘ಸ್ಟಿಂಗ್ ಆಪರೇಷನ್ ಯಾವ ರೀತಿ ತನಿಖೆ ನಡೆಯುತ್ತಿದೆ ಎನ್ನುವುದು ಗಮನಿಸಿದ್ದೇನೆ. ಜೆಡಿಎಸ್​ನ ಐಟಿ ವಿಂಗ್​ನವರಿಗೆ ತೊಂದರೆ ಕೊಡುತ್ತಿದ್ದಾರೆ. ಐಟಿ ವಿಂಗ್​ನ ಮೋಹನ್ ಅವರ ಮನೆಯಲ್ಲಿ ಇಂದು ರಾತ್ರಿ 7.30ರವರೆಗೆ ಸರ್ಚ್ ಮಾಡಿದ್ದಾರೆ. ಮೋಹನ್ ಅವರ ಹೆಂಡತಿ ಪವಿತ್ರರ ಮೊಬೈಲ್ ಕೇಳುತ್ತಾರೆ. ಫೋನ್​ ಕೊಡದಿದ್ದಕ್ಕೆ ಪೋಲಿಸರು ಅಟ್ಯಾಕ್ ಮಾಡಿದ್ದಾರೆ. ಆ ಹೆಣ್ಣುಮಗಳಿಗೂ ಇದ್ದಕ್ಕೂ ಸಂಬಂಧವಿಲ್ಲ’ ಎಂದು ಅವರು ಹೇಳಿದರು.

ಇದನ್ನೂ ಓದಿ: ‘ಸ್ಟಿಂಗ್​ ಪ್ರಕರಣದಿಂದ ಸರ್ಕಾರಕ್ಕೆ ಡ್ಯಾಮೇಜ್’: ಶೀಘ್ರವೇ ತನಿಖೆ ಪೂರ್ಣ ಎಂದ ಗೃಹ ಸಚಿವ ಪ್ರಿಯಾಂಕ್​​ ಖರ್ಗೆ

‘ಮನೆ ಸರ್ಚ್​ ಮಾಡಲು ನೋಟಿಸ್ ಕೊಟ್ಟಿಲ್ಲ ಅಂದಿದ್ದಕ್ಕೆ ರಾತ್ರಿ 7:30ಕ್ಕೆ ಅವರ ಮನೆಯಲ್ಲೇ ನೋಟಿಸ್ ನೀಡಿದ್ದಾರೆ. ಪವಿತ್ರರ ಬೆಡ್ ರೂಂಗೆ ಬಲವಂತವಾಗಿ ನುಗ್ಗಿ ಅವರನ್ನು ಎಳೆದಾಡಿದ್ದಾರೆ. ಅವರ ಕೈಗೆ ತರಚಿದ ಗಾಯಗಳಾಗಿವೆ. ಮೋಹನ್ ಅವರ ತಾಯಿಯನ್ನು ಸಹ ಎಳೆದಾಡಿದ್ದಾರೆ. ಡಿಸಿಪಿ ಫೋನ್​​ ಮಾಡಿ ಆ ಮಹಿಳೆಯ ಮೊಬೈಲ್​​ನ್ನು ತೆಗೆದುಕೊಂಡು ಬರಲೇಬೇಕು ಅಂತಾ ಹೇಳುತ್ತಾರೆ‌. ಹಾಗಾಗಿ ಪೆನ್ ಡ್ರೈವ್, ಫೋನ್​ ತೆಗೆದುಕೊಂಡು ಹೋಗಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.

ಗೃಹಮಂತ್ರಿಗಳಿಗೆ ಸವಾಲು ಹಾಕಿದ ಪ್ರದೀಪ್

‘ತನಿಖೆ ಯಾವ ದಿಕ್ಕಿನಲ್ಲಿ ನಡೆಯುತ್ತಿದೆ. ಡಿಸಿಪಿ ಪೋಲಿಸರಿಗೆ ವಾರ್ನಿಂಗ್ ಮಾಡುತ್ತಾರೆ. ಐಟಿ ಸೆಲ್​​ನಾ, ಜೆಡಿಎಸ್​ನ್ನು ಈ ಸ್ಟಿಂಗ್​ನಲ್ಲಿ ಸಿಲುಕಿಸಬೇಕು ಎಂಬ ಉದ್ದೇಶವಿದೆ. ನಾನು ಗೃಹ ಮಂತ್ರಿಗಳಿಗೆ ಕೇಳುತ್ತೇನೆ. ಆ ಮಹಿಳೆ ಹತ್ತಿರ ಏನಾದರೂ ದಾಖಲೆಗಳಿದ್ದರೆ ನೀಡಲಿ. ಯಾವ ವ್ಯಕ್ತಿ ನಿಜವಾದ ಆರೋಪಿ ಇದ್ದಾನೆ, ಅವನನ್ನು ಈ ಸರ್ಕಾರ ಸುಮ್ಮನೆ ಬಿಟ್ಟಿದೆ. ಮೋಹನ ಅವರ ಹೆಸರು ಎಫ್​ಐಆರ್​ನಲ್ಲಿ ಇಲ್ಲ. ಈಗ ಅವರ ಮೊಬೈಲ್ ಕೊಟ್ಟಿದ್ದೇವೆ. ಒಂದು ದಾಖಲೆವಾದರೂ ತೋರಿಸಿ. ಹೆಣ್ಣುಮಗಳ ಗೌಪ್ಯತೆಗೆ ಧಕ್ಕೆ ಆಗಲ್ವಾ, ಮೋಹನ ಅವರ ದಾಖಲೆಗಳನ್ನು ಪರಿಶೀಲನೆ ಮಾಡಿಕೊಳ್ಳಿ. ಆದರೆ ಅವರ ಹೆಂಡತಿಯ ಫೋನ್​​ ಏಕೆ, ನಿಮಗೆ ತಾಕತ್ತಿದ್ದರೆ ಸರಿಯಾಗಿ ಕೆಲಸ ಮಾಡಿ. ಗೃಹಮಂತ್ರಿಗಳು ಏಕೆ ಸುಮ್ಮನಿದ್ದಾರಾ, ನಿಮಗೆ ತಾಕತ್ತಿದ್ದರೆ ಅವರನ್ನು ಅರೆಸ್ಟ್ ಮಾಡಿ’ ಎಂದು ಅವರು ಸವಾಲು ಹಾಕಿದ್ದಾರೆ.

ಮೋಹನ ಹೆಂಡತಿಯ ಮೇಲೆ ಪೊಲೀಸರಿಂದ ದೌರ್ಜನ್ಯ

‘ಮೋಹನ ಹೆಂಡತಿಯ ಮೇಲೆ ಪೊಲೀಸರಿಂದ ದೌರ್ಜನ್ಯವಾಗಿದೆ. ಐದು ಪೆನ್ ಡ್ರೈವ್ ತೆಗೆದುಕೊಂಡಿದ್ದಾರೆ. ಅವರ ಮದುವೆ ಸೇರಿದಂತೆ ಹಲವು ವಿಡಿಯೋಗಳು ಪೆನ್ ಡ್ರೈವ್​ನಲ್ಲಿವೆ. ಆ ಪೆನ್ ಡ್ರೈವ್​ನಲ್ಲಿ ಏನಿತ್ತು ಅಂತ ರಿಲೀಸ್ ಮಾಡಲಿ, ಅದರಲ್ಲಿ ಏನು ಇಲ್ಲ ಅಂದರೆ ನೀವು ಪರಿಹಾರ ಕಟ್ಟಿಕೊಡಬೇಕು. ಇಲ್ಲ ಈ ರಾಜ್ಯದ ಜನರ ಮುಂದೆ ನೀವು ಕ್ಷಮಾಪಣೆ ಕೇಳಿ’ ಎಂದರು. ಈ ವೇಳೆ ಪ್ರದೀಪ್, ಪೋಲಿಸರು ಮೋಹನ್ ಹೆಂಡತಿ ಮೇಲೆ ಹಲ್ಲೆ ಮಾಡಿದ ಆಡಿಯೋ ಬಿಡುಗಡೆ ಮಾಡಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಅನಿಲ್​ ಕಲ್ಕೆರೆ

ಅನಿಲ್ ಕಲ್ಕೆರೆ ಮೂಲತಃ ಬೆಂಗಳೂರಿನವರಾಗಿದ್ದು, ಕಳೆದ 11 ವರ್ಷಗಳಿಂದ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಬೆಂಗಳೂರು ರಾಜಕೀಯ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೆ.ಆರ್. ಪುರಂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಪೂರೈಸಿದ ಬಳಿಕ ಬೆಂಗಳೂರು ವಿಶ್ವವಿದ್ಯಾಲಯ (ಸೆಂಟ್ರಲ್ ಕಾಲೇಜು) ದಲ್ಲಿ Msc (ಮಾಸ್ ಕಮ್ಯುನಿಕೇಷನ್) ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. ಸೃಜನಶೀಲ ಬರವಣಿಗೆ ಜೊತೆಗೆ ವಿಧಾನಸೌಧದ ಆಡಳಿತಾತ್ಮಕ ಸುದ್ದಿಗಳೂ ಸೇರಿದಂತೆ, ರಾಜಕೀಯ ಪಕ್ಷಗಳು ಹಾಗೂ ರಾಜಕೀಯದ ಪ್ರಸಕ್ತ ವಿದ್ಯಮಾನಗಳನ್ನ ಒಳಗೊಂಡಂತಹ ಸುದ್ದಿಗಳತ್ತ ಗಮನ ಹರಿಸುತ್ತಿದ್ದಾರೆ. ಜೊತೆಗೆ ಪ್ರಜಾಪ್ರಭುತ್ವ ನಾಲ್ಕನೇ ಆಧಾರ ಸ್ತಂಭವಾಗಿ ಸಾಮಾನ್ಯಜನರ ಪರ ಧ್ವನಿಯಾಗಿ ಸರ್ಕಾರಕ್ಕೆ ಸಮಸ್ಯೆ ಮುಟ್ಟಿಸುವ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಮುಂದಿನ ದಿನಗಳಲ್ಲೂ ನಾಗರಿಕರ ಸೇವೆಯನ್ನೂ ಮುಂದುವರೆಸುವ ಗುರಿಯೊಂದಿಗೆ ಉತ್ತಮ ಸಮಾಜಕ್ಕಾಗಿ ಬದ್ಧನಾಗಿದ್ದಾರೆ.

Read More
Loading...
Unable to load recommendations.
Follow Us