ಹೊಳೆನರಸೀಪುರಕ್ಕೆ ಪೊಲೀಸ್ ಠಾಣೆ ಬೇಕೆಂದು ಕೈಯಲ್ಲಿ ಅರ್ಜಿ ಹಿಡಿದು ಹಳೆಯ ಸ್ನೇಹಿತನ ಮನೆಗೆ ಬಂದ ಹೆಚ್​ಡಿ ರೇವಣ್ಣ

| Updated By: ಸಾಧು ಶ್ರೀನಾಥ್​

Updated on: Jun 15, 2021 | 12:26 PM

Holenarasipura police station: ಹೊಳೆನರಸೀಪುರದಲ್ಲಿ ಒಂದು ಪೊಲೀಸ್ ಠಾಣೆ ಆಗಬೇಕಿತ್ತು. ಅದಕ್ಕಾಗಿ ಬಂದಿದ್ದೆ ಅಷ್ಟೇ, ರಾಜಕೀಯದ ಬಗ್ಗೆ ಚರ್ಚಿಸಿಲ್ಲ ಎಂದು ಆರ್​ ಟಿ ನಗರದಲ್ಲಿರುವ ನಿವಾಸದಲ್ಲಿ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾದ ಬಳಿಕ ಮಾಜಿ ಸಚಿವ ಹೆಚ್.​ಡಿ. ರೇವಣ್ಣ ಹೇಳಿದ್ದಾರೆ.

ಹೊಳೆನರಸೀಪುರಕ್ಕೆ ಪೊಲೀಸ್ ಠಾಣೆ ಬೇಕೆಂದು ಕೈಯಲ್ಲಿ ಅರ್ಜಿ ಹಿಡಿದು ಹಳೆಯ ಸ್ನೇಹಿತನ ಮನೆಗೆ ಬಂದ ಹೆಚ್​ಡಿ ರೇವಣ್ಣ
ಹೊಳೆನರಸೀಪುರದಲ್ಲಿ ಪೊಲೀಸ್ ಠಾಣೆ ಆಗಬೇಕಿತ್ತು ಎಂದು ಕೈಯಲ್ಲಿ ಅರ್ಜಿ ಹಿಡಿದು ಹಳೆಯ ಸ್ನೇಹಿತನ ಮನೆಗೆ ಬಂದ ಮಾಜಿ ಸಚಿವ ಹೆಚ್​ಡಿ ರೇವಣ್ಣ
Follow us on

ಬೆಂಗಳೂರು: ಹಾಸನ ಜಿಲ್ಲೆಯಲ್ಲಿರುವ ತಾವು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರವಾದ ಹೊಳೆನರಸೀಪುರದಲ್ಲಿ ಪೊಲೀಸ್ ಠಾಣೆ ಆಗಬೇಕಿತ್ತು ಎಂದು ಮಾಜಿ ಸಚಿವ ಹೆಚ್​ಡಿ ರೇವಣ್ಣ ಅವರು ಕೈಯಲ್ಲಿ ಅರ್ಜಿ ಹಿಡಿದು ರಾಜ್ಯದ ಗೃಹ ಸಚಿವರೂ ಆದ ತಮ್ಮ ಹಳೆಯ ಸ್ನೇಹಿತ ಬಸವರಾಜ ಬೊಮ್ಮಾಯಿ ಅವರ ನಿವಾಸಕ್ಕೆ ಇಂದು ಬಂದಿದ್ದರು.

ಹೊಳೆನರಸೀಪುರದಲ್ಲಿ ಒಂದು ಪೊಲೀಸ್ ಠಾಣೆ ಆಗಬೇಕಿತ್ತು. ಅದಕ್ಕಾಗಿ ಬಂದಿದ್ದೆ ಅಷ್ಟೇ, ರಾಜಕೀಯದ ಬಗ್ಗೆ ಚರ್ಚಿಸಿಲ್ಲ ಎಂದು ಆರ್​ ಟಿ ನಗರದಲ್ಲಿರುವ ಸಚಿವ ಬಸವರಾಜ ಬೊಮ್ಮಾಯಿ ಅವರ ಖಾಸಗಿ ನಿವಾಸದಲ್ಲಿ ಭೇಟಿಯಾದ ಬಳಿಕ ಮಾಜಿ ಸಚಿವ ಹೆಚ್.​ಡಿ. ರೇವಣ್ಣ ಹೇಳಿದ್ದಾರೆ.

ಬಸವರಾಜ ಬೊಮ್ಮಾಯಿ ನಮ್ಮ ಹಳೆಯ ಸ್ನೇಹಿತ. ನಮ್ಮ ಪಕ್ಷದಲ್ಲಿ ಇದ್ದವರು. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಬದಲಾವಣೆಯ ವಿಚಾರ ನನಗೆ ಗೊತ್ತಿಲ್ಲ. ಸಿದ್ದರಾಮಯ್ಯ ಕ್ಷೇತ್ರ ಬದಲಾವಣೆ ವಿಚಾರವೂ ಗೊತ್ತಿಲ್ಲ. ಎಲ್ಲವನ್ನೂ 2023ಕ್ಕೆ ನೋಡೋಣ ಎಂದು ಮಾಜಿ ಸಚಿವ ಹೆಚ್.​ಡಿ. ರೇವಣ್ಣ ಬೆಂಗಳೂರಿನಲ್ಲಿ ಹೇಳಿದ್ದಾರೆ.

(JDS mla hd revanna pleads for police station in his home assembly constituency holenarasipura)

ಹಾಸನದಲ್ಲಿ ಶಿಷ್ಟಾಚಾರ ಪಕ್ಕಕ್ಕಿಟ್ಟು ಹೆಚ್ ಡಿ ರೇವಣ್ಣಗೆ ಪಕ್ಕ ಕೂಡಿಸಿಕೊಂಡು, ಸಭೆ ನಡೆಸಿದ ಮುಖ್ಯಮಂತ್ರಿ ಯಡಿಯೂರಪ್ಪ

Published On - 12:18 pm, Tue, 15 June 21