ಜೂನ್ 21 ರಿಂದ ಅನ್​ಲಾಕ್ 2.O ಜಾರಿಗೆ ಗ್ರಿನ್ ಸಿಗ್ನಲ್ ನೀಡಿದ ತಾಂತ್ರಿಕ ಸಲಹಾ ಸಮಿತಿ: ಏನಿರುತ್ತೆ, ಏನಿರುವುದಿಲ್ಲ? ಇಲ್ಲಿದೆ ವಿವರ

Unlock 2.0 in Karnataka: ಜೂನ್ 21 ರಿಂದ ಕರ್ನಾಟಕದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ಗಳನ್ನು ಸಹ ಓಪನ್ ಮಾಡಲು ತಾಂತ್ರಿಕ ಸಲಹಾ ಸಮಿತಿಯಿಂದ‌ ಗ್ರಿನ್ ಸಿಗ್ನಲ್ ದೊರೆತಿದೆ. ಆದರೆ ಥಿಯೇಟರ್, ಪಬ್, ಬಾರ್, ಜಿಮ್, ಸ್ವಿಮ್ಮಿಂಗ್ ಪೂಲ್, ಕ್ರೀಡಾಂಗಣಗಳು ಯಥಾಸ್ಥಿತಿ ಕ್ಲೋಸ್ ಆಗಿರಲಿವೆ. ಇವುಗಳನ್ನೆಲ್ಲ ಓಪನ್‌ ಮಾಡಲು ಮೂರನೇ ಹಂತದ ಅನ್​ಲಾಕ್ ವರೆಗೂ ಕಾಯಲು ತೀರ್ಮಾನ ಮಾಡಲಾಗಿದೆ.

ಜೂನ್ 21 ರಿಂದ ಅನ್​ಲಾಕ್ 2.O ಜಾರಿಗೆ ಗ್ರಿನ್ ಸಿಗ್ನಲ್ ನೀಡಿದ ತಾಂತ್ರಿಕ ಸಲಹಾ ಸಮಿತಿ: ಏನಿರುತ್ತೆ, ಏನಿರುವುದಿಲ್ಲ? ಇಲ್ಲಿದೆ ವಿವರ
ಅನ್​ಲಾಕ್ 3.O
Follow us
| Updated By: ಸಾಧು ಶ್ರೀನಾಥ್​

Updated on:Jun 15, 2021 | 11:07 AM

ಬೆಂಗಳೂರು: ಕೊರೊನಾ ಸೋಂಕನ್ನು ನಿಯಂತ್ರಿಸಲು ತಾಂತ್ರಿಕ ಸಲಹಾ ಸಮಿತಿ ನೀಡಿದ್ದ ಸಲಹೆಯನ್ನು ಪರಿಗಣಿಸಿ ರಾಜ್ಯ ಸರ್ಕಾರ ಎರಡನೆಯ ಅಲೆಯ ವೇಳೆ ಇಡೀ ರಾಜ್ಯದಲ್ಲಿ ಲಾಕ್​ಡೌನ್​ ಘೋಷಿಸಿತ್ತು. ಅದೀಗ ಹಂತಹಂತವಾಗಿ ಅನ್​ಲಾಕ್​ ಆಗುತ್ತಿದೆ. ಜೂನ್ 21 ರಿಂದ ಅನ್​ಲಾಕ್ 2.O ಜಾರಿಗೆ ತಾಂತ್ರಿಕ ಸಲಹಾ ಸಮಿತಿ ಇದೀಗ ಗ್ರಿನ್ ಸಿಗ್ನಲ್ ನೀಡಿದೆ. ಹಾಗಾಗಿ ರಾಜ್ಯದಲ್ಲಿ ಜೂನ್ 21 ರಿಂದ ಏನೆಲ್ಲಾ ಮುಕ್ತವಾಗಿ ಇರುತ್ತೆ, ಯಾವುದಕ್ಕೆಲ್ಲ ನಿರ್ಬಂಧವಿರುತ್ತದೆ ಎಂಬುದರ ವಿವರ ಮಾಹಿತಿ ಇಲ್ಲಿದೆ:

ಕರ್ನಾಟಕದಲ್ಲಿ ಎರಡನೇ ಹಂತದ ಅನ್​ಲಾಕ್​ಗೆ ಇದೀಗ ದಿನಾಂಕ ನಿಗದಿಯಾಗಿದ್ದು, ಜೂನ್ 21 ರಿಂದ ಅನ್​ಲಾಕ್ 2.O ಜಾರಿಗೆ ಬರುತ್ತದೆ. ಜೂನ್ 21 ರಿಂದ ಮಾಲ್, ಹೋಟೆಲ್, ಚಿಕ್ಕ‌ಚಿಕ್ಕ ಮಾರುಕಟ್ಟೆ, ಹೇರ್​ ಕಟ್​ ಶಾಪ್, ಮದುವೆ ಸಮಾರಂಭಕ್ಕೆ 50 ಜನರಿಗೆ ಅವಕಾಶ ನೀಡಿ ಮುಕ್ತಗೊಳಿಸಲಾಗುವುದು.

ಬಟ್ಟೆ ಅಂಗಡಿ, ಚಿನ್ನದಂಗಡಿ ಸೇರಿದಂತೆ ಎಲ್ಲಾ ಬಗೆಯ ವಾಣಿಜ್ಯ ಮಳಿಗೆಗಳು ಸಹ ಜೂನ್ 21 ರಿಂದ ಓಪನ್ ಆಗಲಿವೆ. ದಿನಕ್ಕೆ ಎಂಟು ಗಂಟೆಗಳ ಕಾಲ ವ್ಯಾಪಾರ ವಹಿವಾಟು ಮಾಡಲು ಅವಕಾಶ ನೀಡಲಾಗುವುದು. ಹೋಟೆಲ್ ಮತ್ತು ರೆಸ್ಟೋರೆಂಟ್ ಗಳಲ್ಲಿ ಶೇ.50 ರಷ್ಟು ಗ್ರಾಹಕರಿಗೆ ಪ್ರವೇಶ ಅವಕಾಶ ನೀಡಲಾಗಿದೆ.

ರಾಜ್ಯದಲ್ಲಿ ಅನ್‌ಲಾಕ್ 2.O ಜಾರಿಯಾಗುವ ಹಿನ್ನೆಲೆಯಲ್ಲಿ ಜೂ.21ರಿಂದ ಕರ್ನಾಟಕದಲ್ಲಿ ಬಸ್ ಸಂಚಾರ ಆರಂಭವಾಗುವ ಸಾಧ್ಯತೆಯಿದೆ. ಶೇ.50ರಷ್ಟು ಪ್ರಯಾಣಿಕರೊಂದಿಗೆ ಬಸ್ ಸಂಚಾರವಾಗುವ ಸಾಧ್ಯತೆ ಇದೆ.

ಈ ಕೆಳಗಿನ ವಹಿವಾಟು ನಡೆಸಲು ಮೂರನೇ ಹಂತದ ಅನ್​ಲಾಕ್ ವರೆಗೂ ಕಾಯಬೇಕು

ಶಾಪಿಂಗ್ ಕಾಂಪ್ಲೆಕ್ಸ್ ಗಳನ್ನು ಸಹ ಓಪನ್ ಮಾಡಲು ತಾಂತ್ರಿಕ ಸಲಹಾ ಸಮಿತಿಯಿಂದ‌ ಗ್ರಿನ್ ಸಿಗ್ನಲ್ ದೊರೆತಿದೆ. ಆದರೆ ಥಿಯೇಟರ್, ಪಬ್, ಬಾರ್, ಜಿಮ್, ಸ್ವಿಮ್ಮಿಂಗ್ ಪೂಲ್, ಕ್ರೀಡಾಂಗಣಗಳು ಯಥಾಸ್ಥಿತಿ ಕ್ಲೋಸ್ ಆಗಿರಲಿವೆ. ಇವುಗಳನ್ನೆಲ್ಲ ಓಪನ್‌ ಮಾಡಲು ಮೂರನೇ ಹಂತದ ಅನ್​ಲಾಕ್ ವರೆಗೂ ಕಾಯಲು ತೀರ್ಮಾನ ಮಾಡಲಾಗಿದೆ.

(covid 19 unlock 2 point 0 to begin from june 21 technical committee gives green signal to karnataka government)

ಅನ್​ಲಾಕ್​ ಮಾಡುವುದಕ್ಕೆ ಮೊದಲು ಇರಲಿ ಎಚ್ಚರ..ಕೊರೊನಾ ಇನ್ನೂ ನಿರ್ಮೂಲನಗೊಂಡಿಲ್ಲ: ತಜ್ಞರಿಂದ ಎಚ್ಚರಿಕೆ

Published On - 11:02 am, Tue, 15 June 21

ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು