ಅನ್ಲಾಕ್ ಮಾಡುವುದಕ್ಕೆ ಮೊದಲು ಇರಲಿ ಎಚ್ಚರ..ಕೊರೊನಾ ಇನ್ನೂ ನಿರ್ಮೂಲನಗೊಂಡಿಲ್ಲ: ತಜ್ಞರಿಂದ ಎಚ್ಚರಿಕೆ
ದೆಹಲಿ: ದೇಶದಲ್ಲಿ ಕೊರೊನಾ ಎರಡನೇ ಅಲೆ ನಿಧಾನವಾಗಿ ಕಡಿಮೆಯಾಗುತ್ತ ಬರುತ್ತಿದ್ದಂತೆ, ಹಲವು ರಾಜ್ಯಗಲ್ಲಿ ಲಾಕ್ಡೌನ್, ಕರ್ಫ್ಯೂ ನಿಯಮಗಳನ್ನು ಸಡಿಲಿಸಲಾಗುತ್ತಿದೆ. ಆದರೆ ಈ ಮಧ್ಯೆ ಕೊರೊನಾ ಟಾಸ್ಕ್ಫೋರ್ಸ್ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಒಮ್ಮೆಲೆ ಅನ್ಲಾಕ್ ಮಾಡುವುದರಿಂದ ಮತ್ತಷ್ಟು ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಂಡಂತೆ ಆಗುತ್ತದೆ. ಹಾಗೇ, ಜನರೂ ಕೂಡ ಜವಾಬ್ದಾರಿಯಿಂದ ವರ್ತಿಸಬೇಕು. ತಮ್ಮ ಪ್ರದೇಶದಲ್ಲಿ ಕೊರೊನಾ ವೈರಸ್ ಸೋಂಕು ಎಷ್ಟರಮಟ್ಟಿಗೆ ಕಡಿಮೆಯಾಗಿದೆ ಎಂಬುದನ್ನು ತಿಳಿಯಬೇಕು. ಅನ್ಲಾಕ್ ಆದ ತಕ್ಷಣ ಮತ್ತೆ ನಿರ್ಲಕ್ಷ್ಯ ತೋರಬಾರದು ಎಂದೂ ತಿಳಿಸಿದ್ದಾರೆ. ಈ ಬಗ್ಗೆ ಮಾತನಾಡಿದ […]
ದೆಹಲಿ: ದೇಶದಲ್ಲಿ ಕೊರೊನಾ ಎರಡನೇ ಅಲೆ ನಿಧಾನವಾಗಿ ಕಡಿಮೆಯಾಗುತ್ತ ಬರುತ್ತಿದ್ದಂತೆ, ಹಲವು ರಾಜ್ಯಗಲ್ಲಿ ಲಾಕ್ಡೌನ್, ಕರ್ಫ್ಯೂ ನಿಯಮಗಳನ್ನು ಸಡಿಲಿಸಲಾಗುತ್ತಿದೆ. ಆದರೆ ಈ ಮಧ್ಯೆ ಕೊರೊನಾ ಟಾಸ್ಕ್ಫೋರ್ಸ್ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಒಮ್ಮೆಲೆ ಅನ್ಲಾಕ್ ಮಾಡುವುದರಿಂದ ಮತ್ತಷ್ಟು ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಂಡಂತೆ ಆಗುತ್ತದೆ. ಹಾಗೇ, ಜನರೂ ಕೂಡ ಜವಾಬ್ದಾರಿಯಿಂದ ವರ್ತಿಸಬೇಕು. ತಮ್ಮ ಪ್ರದೇಶದಲ್ಲಿ ಕೊರೊನಾ ವೈರಸ್ ಸೋಂಕು ಎಷ್ಟರಮಟ್ಟಿಗೆ ಕಡಿಮೆಯಾಗಿದೆ ಎಂಬುದನ್ನು ತಿಳಿಯಬೇಕು. ಅನ್ಲಾಕ್ ಆದ ತಕ್ಷಣ ಮತ್ತೆ ನಿರ್ಲಕ್ಷ್ಯ ತೋರಬಾರದು ಎಂದೂ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ದೆಹಲಿ ಏಮ್ಸ್ (AIIMS) ಆಸ್ಪತ್ರೆಯ ಮೆಡಿಸಿನ್ ಡಿಪಾರ್ಟ್ಮೆಂಟ್ನ ಮುಖ್ಯಸ್ಥ ಡಾ. ನವೀತ್ ವಿಗ್, ಕೊವಿಡ್ 19 ಸೋಂಕನ್ನು ನಿಯಂತ್ರಣ ಮಾಡಲು ಪ್ರತಿಯೊಬ್ಬರೂ ಶ್ರದ್ಧೆಯಿಂದ ಶ್ರಮವಹಿಸಬೇಕು ಎಂದಿದ್ದಾರೆ. ತುಂಬ ನಿಧಾನವಾಗಿ ಅನ್ಲಾಕ್ ಪ್ರಕ್ರಿಯೆ ಮಾಡಬೇಕು. ಅದರಲ್ಲೂ ಹಾಟ್ಸ್ಫಾಟ್ಗಳ ಬಗ್ಗೆ ಮತ್ತಷ್ಟು ನಿಗಾ ವಹಿಸಬೇಕು. ಪ್ರತಿಯೊಬ್ಬರೂ ವೈಯಕ್ತಿಕ, ಕೌಟುಂಬಿಕ ಸುರಕ್ಷತೆಯ ಬಗ್ಗೆ ಗಮನಕೊಡಬೇಕು. ಕೊವಿಡ್ 19 ಸೋಂಕು ಇನ್ನೂ ನಿರ್ಮೂಲನ ಗೊಂಡಿಲ್ಲ. ದೇಶದಲ್ಲಿ ಇನ್ನೂ 10 ಸಾವಿರ ಸಕ್ರಿಯ ಪ್ರಕರಣಗಳು ಇವೆ ಎಂದು ಎಚ್ಚರಿಸಿದ್ದಾರೆ.
ಅನ್ಲಾಕ್ ಮಾಡುವಾಗ ಸ್ಥಳೀಯವಾಗಿ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಯಾವೆಲ್ಲ ಪ್ರದೇಶಗಳು, ನಗರಗಳು ಕೊರೊನಾ ಹಾಟ್ಸ್ಫಾಟ್ ಎನ್ನಿಸಿಕೊಂಡಿವೆಯೋ ಅಲ್ಲೆಲ್ಲ ಲಾಕ್ಡೌನ್ ಮುಂದುವರಿಸಬೇಕು. ಹಾಗೇ, ಕೊರೊನಾ ಮೂರನೇ ಅಲೆ ಬಗ್ಗೆ ಯಾರೂ ಗಾಬರಿ ಪಡುವುದು, ಭಯಗೊಳ್ಳುವ ಅಗತ್ಯವಿಲ್ಲ ಎಂದು ಡಾ. ನವೀತ್ ವಿಗ್ ಹೇಳಿದ್ದಾರೆ. ಕೊರೊನಾ ಶುರುವಾದ ಮೇಲೆ ಅನೇಕ ಅಧ್ಯಯನಗಳು ಹೊರಬೀಳುತ್ತಿವೆ. ಜನರು ಲಸಿಕೆ ಪಡೆದರೆ ಮಾತ್ರ ಕೊರೊನಾದಿಂದ ಪಾರಾಗಬಹುದೆಂದೇ ಎಲ್ಲ ಅಧ್ಯಯನಗಳೂ ಹೇಳುತ್ತಿವೆ. ದೇಶವನ್ನು ಕೊರೊನಾ ಮುಕ್ತ ಮಾಡಲು ಲಸಿಕೆಯೊಂದೇ ಮಾರ್ಗ. ಕೊರೊನಾ ವ್ಯಾಕ್ಸಿನ್ ಪಡೆದವರಿಗೆ ಸೋಂಕಿನ ಅಪಾಯ ಇರುವುದಿಲ್ಲ ಎಂದಿದ್ದಾರೆ.
ಇದನ್ನೂ ಓದಿ: SSR Death Anniversary: ಸಾಯುವುದಕ್ಕೂ ಮೊದಲು ಎರಡು ಗಂಟೆಗಳ ಕಾಲ ತಮ್ಮ ಹೆಸರನ್ನೇ ಗೂಗಲ್ ಮಾಡಿದ್ದ ಸುಶಾಂತ್?