SP ರಿಷ್ಯಂತ್‌ಗೆ ಅವಾಜ್ ಹಾಕಿದ್ದ ವಿಡಿಯೋ ವೈರಲ್ ಆಗುತ್ತಿದ್ದಂತೆ ಉಲ್ಟಾ ಹೊಡೆದ ಶಾಸಕ ರೇಣುಕಾಚಾರ್ಯ, ಹೇಳಿದ್ದೇನು ಗೊತ್ತಾ?
ಅಕ್ರಮ ಮರಳು ಅಡ್ಡೆ ಮೇಲೆ ದಾಳಿ ಮಾಡಿಸಿದ್ದಕ್ಕಾಗಿ ದಾವಣಗೆರೆ SP ರಿಷ್ಯಂತ್ ವಿರುದ್ಧ ಶಾಸಕ ರೇಣುಕಾಚಾರ್ಯ ಅವಾಜ್ ಹಾಕಿದ್ದರು. ಸಿಪಿಐ ದೇವರಾಜ್ಗೆ ಕರೆ ಮಾಡಿ ಅಸಮಾಧಾನ ಹೊರ ಹಾಕಿದ್ದರು. ದಾಳಿ ಮಾಡಿದ್ದೀರಾ, ದೊಡ್ಡ ಹೀರೋ ಏನ್ರಿ, ಮಟ್ಕಾ ಆಡೋರನ್ನ ಜೂಜಾಡೋರನ್ನು ಹಿಡೀರಿ, ಇಲ್ಲಿ ಸ್ಟಂಟ್ ಮಾಡೋಕೆ ಬಂದ್ರೆ ನಡೆಯಲ್ಲ.
ದಾವಣಗೆರೆ: ಎಸ್ಪಿಗೆ ಶಾಸಕ ರೇಣುಕಾಚಾರ್ಯ ಅವಾಜ್ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿ ತಮ್ಮ ಹೇಳಿಕೆ ಬಗ್ಗೆ ರೇಣುಕಾಚಾರ್ಯ ಉಲ್ಟಾ ಹೊಡೆದಿದ್ದಾರೆ. ಅಕ್ರಮ ಮರಳು ಅಡ್ಡೆ ಮೇಲೆ ದಾಳಿ ಮಾಡಿಸಿದ್ದಕ್ಕಾಗಿ ದಾವಣಗೆರೆ SP ರಿಷ್ಯಂತ್ ವಿರುದ್ಧ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಕ್ಷೇತ್ರದ ಬಿಜೆಪಿ ಶಾಸಕ ರೇಣುಕಾಚಾರ್ಯ ಅವಾಜ್ ಹಾಕಿದ್ದರು. ಇನ್ನು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ರೇಣುಕಾಚಾರ್ಯ ವರ್ತನೆ ಬಗ್ಗೆ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದರು. ಸದ್ಯ ಈಗ ರೇಣುಕಾಚಾರ್ಯ ಉಲ್ಟಾ ಹೊಡೆದಿದ್ದಾರೆ.
ಪೊಲೀಸರಿಗೆ ಆವಾಜ್ ಎಂಬ ವರದಿ ಸತ್ಯಕ್ಕೆ ದೂರದ ವಿಚಾರ ಎಂದು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ‘ತಾಕತ್ತಿದ್ದರೆ ಬಂದು ಮುಟ್ಟಿ ನೋಡಲಿ ಎಂದು ದಾವಣಗೆರೆ SP ರಿಷ್ಯಂತ್‌ಗೆ ಆವಾಜ್ ಹಾಕಿದ್ದ ವಿಡಿಯೋ ವೈರಲ್ ಆಗುತ್ತಿದ್ದಂತೆ ಈ ವರದಿ ಸತ್ಯಕ್ಕೆ ದೂರದ ವಿಚಾರ ಎಂದು ಜಾರಿಕೊಂಡಿದ್ದಾರೆ.
ಅಕ್ರಮ ಮರಳು ಅಡ್ಡೆ ಮೇಲೆ ದಾಳಿ ಮಾಡಿಸಿದ್ದಕ್ಕಾಗಿ ದಾವಣಗೆರೆ SP ರಿಷ್ಯಂತ್ ವಿರುದ್ಧ ಶಾಸಕ ರೇಣುಕಾಚಾರ್ಯ ಅವಾಜ್ ಹಾಕಿದ್ದರು. ಸಿಪಿಐ ದೇವರಾಜ್ಗೆ ಕರೆ ಮಾಡಿ ಅಸಮಾಧಾನ ಹೊರ ಹಾಕಿದ್ದರು. ದಾಳಿ ಮಾಡಿದ್ದೀರಾ, ದೊಡ್ಡ ಹೀರೋ ಏನ್ರಿ, ಮಟ್ಕಾ ಆಡೋರನ್ನ ಜೂಜಾಡೋರನ್ನು ಹಿಡೀರಿ, ಇಲ್ಲಿ ಸ್ಟಂಟ್ ಮಾಡೋಕೆ ಬಂದ್ರೆ ನಡೆಯಲ್ಲ. ಮರಳು ಗಣಿಗಾರಿಕೆ ಮಾಡೋರು ಅತ್ಯಾಚಾರ ಕೊಲೆ ಮಾಡಿದ್ದಾರಾ? ಹೊಟ್ಟೆ ಪಾಡಿಗೆ ಮರಳು ಗಣಿಗಾರಿಕೆ ಮಾಡುತ್ತಿದ್ದಾರೆ. ಅವರ ತಂಟೆಗೆ ಬಂದ್ರೆ ನಾನು ಸುಮ್ಮನಿರಲ್ಲ. ನಿಮಗೆ ತಾಕತ್ತಿದ್ದರೆ ಬಂದು ಸೀಜ್ ಮಾಡಿ ನೋಡೋಣ. ತಾಕತ್ತಿದ್ದರೆ ಬಂದು ಮುಟ್ಟಿ ನೋಡಲಿ ಎಂದು ಎಸ್‌ಪಿ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದರು. ಆದರೆ ವಿಡಿಯೋ ವೈರಲ್ ಬಳಿಕ ಉಲ್ಟಾ ಹೊಡೆದಿದ್ದಾರೆ.
ಇದನ್ನೂ ಓದಿ: ನನ್ನ ಮೇಲೆ ಎಷ್ಟು ಕೇಸ್ ಹಾಕಿಸುತ್ತೀರಿ ಹಾಕಿ, ನಿಮಗೆ ತಾಕತ್ ಇದ್ರೆ ಪ್ರಕರಣ ದಾಖಲಿಸಿ: ಶಾಸಕ ರೇಣುಕಾಚಾರ್ಯ ಸವಾಲು