ನನ್ನ ಮೇಲೆ ಎಷ್ಟು ಕೇಸ್ ಹಾಕಿಸುತ್ತೀರಿ ಹಾಕಿ, ನಿಮಗೆ ತಾಕತ್ ಇದ್ರೆ ಪ್ರಕರಣ ದಾಖಲಿಸಿ: ಶಾಸಕ ರೇಣುಕಾಚಾರ್ಯ ಸವಾಲು
ಅಧಿಕಾರಗಳ ಮೇಲೆ ಒತ್ತಡ ಏರಿ ನನ್ನ ಮೇಲೆ ಪ್ರಕರಣ ದಾಖಲಿಸುವ ಕೆಲಸ ಮಾಜಿ ಶಾಸಕರು ಮಾಡುತ್ತಿದ್ದಾರೆ. ನಾನು ಬಂಡೆ ಇದ್ದಂತೆ, ಇಂತಹ ಯಾವುದಕ್ಕೂ ಬಗ್ಗುವುದಿಲ್ಲ, ಜಗ್ಗುವುದಿಲ್ಲ. ನನ್ನ ಮೇಲೆ ಎಷ್ಟು ಕೇಸ್ ಹಾಕಿಸುತ್ತೀರಿ ಹಾಕಿ ಎಂದು ಶಾಸಕ ರೇಣುಕಾಚಾರ್ಯ ಬಹಿರಂಗ ಸವಾಲು ಹಾಕಿದ್ದಾರೆ.
ದಾವಣಗೆರೆ: ಕೊವಿಡ್ ಕೇರ್ ಸೆಂಟರ್ನಲ್ಲಿ ಹೋಮ ಮಾಡಿದ ವಿಚಾರವಾಗಿ ಮಾಜಿ ಶಾಸಕ ಶಾಂತನಗೌಡಗೆ ಶಾಸಕ ರೇಣುಕಾಚಾರ್ಯ ಸವಾಲು ಹಾಕಿದ್ದಾರೆ. ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಅರಬಗಟ್ಟೆ ಗ್ರಾಮದಲ್ಲಿ ನನ್ನ ಕುಟುಂಬದ ಒಳಿತಿಗಾಗಿ ನಾನು ಹೋಮ ಮಾಡಿಸಿಲ್ಲ. ಅವಳಿ ತಾಲೂಕಿನ ಒಳಿತಿಗಾಗಿ ಹೋಮ ಮಾಡಿಸಿದ್ದೇನೆ. ಕೊವಿಡ್ ಕೇರ್ ಸೆಂಟರ್ನಲ್ಲಿ ಮೋಜು ಮಸ್ತಿ ಮಾಡಲು ನಾನು ವಾಸ್ತವ್ಯ ಮಾಡಿಲ್ಲ. ಇದ್ದರೂ ಇಲ್ಲೇ ಮಣ್ಣಾದರೂ ಇಲ್ಲೇ ಎಂದು ಕೊವಿಡ್ ಸೋಂಕಿತರ ಜತೆ ಉಳಿದುಕೊಂಡಿದ್ದೇನೆ ಎಂದು ಶಾಸಕ ರೇಣುಕಾಚಾರ್ಯ ತಿಳಿಸಿದ್ದಾರೆ.
ಅಧಿಕಾರಗಳ ಮೇಲೆ ಒತ್ತಡ ಏರಿ ನನ್ನ ಮೇಲೆ ಪ್ರಕರಣ ದಾಖಲಿಸುವ ಕೆಲಸ ಮಾಜಿ ಶಾಸಕರು ಮಾಡುತ್ತಿದ್ದಾರೆ. ನಾನು ಬಂಡೆ ಇದ್ದಂತೆ, ಇಂತಹ ಯಾವುದಕ್ಕೂ ಬಗ್ಗುವುದಿಲ್ಲ, ಜಗ್ಗುವುದಿಲ್ಲ. ನನ್ನ ಮೇಲೆ ಎಷ್ಟು ಕೇಸ್ ಹಾಕಿಸುತ್ತೀರಿ ಹಾಕಿ ಎಂದು ಶಾಸಕ ರೇಣುಕಾಚಾರ್ಯ ಬಹಿರಂಗ ಸವಾಲು ಹಾಕಿದ್ದಾರೆ.
ಕೊವಿಡ್ ಕೇರ್ ಸೆಂಟರ್ನಲ್ಲಿ ಹೋಮ ಮಾಡಲು ನಮಗೂ ಅವಕಾಶ ನೀಡಿ ಎಂದು ಹೊನ್ನಾಳಿ ಕ್ಷೇತ್ರದ ಮಾಜಿ ಶಾಸಕ ಡಿಜಿ ಶಾಂತನಗೌಡ ಅವರು ಜಿಲ್ಲಾಧಿಕಾರಿಗಳಿಗೆ ನಿನ್ನೆ ಆಗ್ರಹಿದ್ದರು. ಅವರ ಆರೋಪವನ್ನು ಸವಾಲಾಗಿ ತೆಗೆದುಕೊಂಡಿರುವ ಶಾಸಕ ರೇಣುಕಾಚಾರ್ಯ ಇಂದು ತಮ್ಮ ವಿರುದ್ಧ ಎಷ್ಟು ಪ್ರಕರಣ ದಾಖಲಿಸುತ್ತೀರೋ ದಾಖಲಿಸಿ ಎಂದು ಸವಾಲು ಒಡ್ಡಿದ್ದಾರೆ.
ರೇಣುಕಾಚಾರ್ಯ ದಂಪತಿಯಿಂದ ಹೋಮ, ಹೋಳಿಗೆ ಊಟ ಮನುಕುಲಕ್ಕೆ ಮಾರಕವಾಗಿ ಕಾಡುತ್ತಿರುವ ಕೊರೊನಾ ಸೋಂಕು ನಿವಾರಣೆಗಾಗಿ ಧನ್ವಂತರಿ ಹೋಮ ಹಾಗು ನನ್ನ ಜನತೆಯ ಆರೋಗ್ಯ ವೃದ್ಧಿಗಾಗಿ ಮೃತ್ಯುಂಜಯ ಹೋಮವನ್ನು ಅರಬಗಟ್ಟೆ ಕೊವಿಡ್ ಕೇರ್ ಸೆಂಟರ್ ನಲ್ಲಿ ನಡೆಸಲಾಗುತ್ತಿದ್ದು ನಂತರ ಮದ್ಯಾಹ್ನ ಎಲ್ಲಾ ಕೊವಿಡ್ ಸೋಂಕಿತ ಬಂಧುಗಳಿಗೆ ಹಾಗು ಸಿಬ್ಬಂದಿಗಳಿಗೆ ಹೋಳಿಗೆ ಊಟದ ವ್ಯವಸ್ಥೆ ಮಾಡಿದ್ದೇನೆ ಎಂದು ಶಾಸಕ ರೇಣುಕಾಚಾರ್ಯ ಹೇಳಿದ್ದರು.
ಇದನ್ನೂ ಓದಿ: Hassan Airport: ಆದಷ್ಟು ಬೇಗ ದೇವೇಗೌಡರ ಜತೆ ಹಾಸನ ವಿಮಾನ ನಿಲ್ದಾಣದ ಶಂಕುಸ್ಥಾಪನೆ ಮಾಡುವೆ: ಸಿಎಂ ಯಡಿಯೂರಪ್ಪ
ಹಳ್ಳಿಗಳಿಂದ ಬೆಂಗಳೂರಿಗೆ ಜನರು; ವಾಪಸ್ಸಾಗುವವರಿಗೆ ಕೊವಿಡ್ ಪರೀಕ್ಷೆ ಇಲ್ಲದ ಕಾರಣ ಹೆಚ್ಚಿದ ಆತಂಕ
(If you have the power you can make case on me says Honnali MLA Renukacharya about home at covid care centre)
Published On - 6:36 pm, Sun, 13 June 21