ಬೆಂಗಳೂರು: ರಾಜ್ಯದ 2023-24ನೇ ಸಾಲಿನ ಬಜೆಟ್ (Karnataka Budget 2023) ನಿನ್ನೆ (ಜು.07) ರಂದು ಮಂಡನೆಯಾಗಿದ್ದು, ಆನ್‌ಲೈನ್ (Online) ಮೂಲಕ ವಿವಾಹ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಇದಕ್ಕೆ ಶ್ರೀರಾಮ ಸೇನೆ (Shriram sene) ವಿರೋಧ ವ್ಯಕ್ತಪಡಿಸಿದೆ. ಇತ್ತೀಚಿನ ವರ್ಷಗಳಲ್ಲಿ ಲವ್ ಜಿಹಾದ್ ಪ್ರಕರಣ ಹೆಚ್ಚಾಗಿವೆ. ನೂರಾರು ಪ್ರಕರಣಗಳು ಹೊರ ಬರುತ್ತಿವೆ. ಆನ್ ಲೈನ್ ವಿವಾಹ ನೋಂದಣಿ ಲವ್ ಜಿಹಾದ್ಗೆ ಕುಮ್ಮಕ್ಕು ಕೊಡಲಿದೆ. ತಂದೆ-ತಾಯಿಗೆ, ಸಮಾಜಕ್ಕೆ, ಸಂಘಟನೆಗಳಿಗೆ, ಹಿಂದೂಗಳಿಗೆ ಗೊತ್ತಾಗದ ಹಾಗೆ ಮುಸ್ಲಿಂ, ಕ್ರಿಶ್ಚಿಯನ್ನರು ಸಾರಾಗಟಾಗಿ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳುತ್ತಾರೆ. ಆನ್‌ಲೈನ್‌ನಲ್ಲಿ ವಿವಾಹ ನೋಂದಣಿ ಮಾಡುವ ಮೂಲಕ ಆನಂದವಾಗಿ ಲವ್ ಜಿಹಾದ್ ಮಾಡಿಕೊಂಡು ಮೆರೆಯಬಹುದು ಎಂದು ಪ್ರಮೋದ್ ಮುತಾಲಿಕ್ ಆಕ್ರೋಶ್ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಈಗಿರುವ, ರಿಜಿಸ್ಟರ್ ಕಚೇರಿಗಳಲ್ಲಿ ಒಂದು ತಿಂಗಳ ಮುಂಚೆ ಮಾಹಿತಿ ಕೊಡುವುದು. ಅವರ ವಿಳಾಸ, ಫೋಟೋಗಳನ್ನ ಹಾಕುವುದು ಯೋಗ್ಯವಾದ ವ್ಯವಸ್ಥೆಯಾಗಿದೆ. ಯಾರೂ ಯಾವುದೇ ರೀತಿಯ ಮೋಸ ವಂಚನೆ ಮಾಡಲು ಸಾಧ್ಯವಿಲ್ಲ. ಈ ಆನ್‌ಲೈನ್ ವಿವಾಹ ನೋಂದಣಿಯನ್ನು ರದ್ದು ಮಾಡಬೇಕು, ಜಾರಿ ಮಾಡಬಾರದು ಎಂದು ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಡಿಜಿಟಲ್ ಲೈಬ್ರರಿಗೆ ನೋಂದಾಯಿಸಿಕೊಂಡವರಲ್ಲಿ ಬೆಂಗಳೂರು ಪಸ್ಟ್, ಮೈಸೂರು ಸೆಕೆಂಡ್
ವಿವಾಹ ನೋಂದಣಿಗಾಗಿ ಉಪ ನೋಂದಣಾಧಿಕಾರಿಗಳ ಕಚೇರಿಗೆ ಅಲೆದಾಟ ತಪ್ಪಿಸಲು, ವಿವಾಹ ನೋಂದಣಿಯನ್ನು ಜನಸ್ನೇಹಿಯಾಗಿಸಲು ಕಾವೇರಿ 2.0 ತಂತ್ರಾಂಶದಲ್ಲಿ ಆನ್‌ಲೈನ್ ಮೂಲಕ ನೋಂದಣಿ ಮಾಡಲು ಮತ್ತು ಗ್ರಾಮ ಪಂಚಾಯಿತಿಗಳಲ್ಲಿನ ಬಾಪೂಜಿ ಸೇವಾ ಕೇಂದ್ರ ಹಾಗೂ ಗ್ರಾಮ-1 ಕೇಂದ್ರಗಳಲ್ಲಿಯೂ ಸಹ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲು ಸರ್ಕಾರ ಮುಂದಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:48 pm, Sat, 8 July 23