ಸಿಗರೇಟ್​ ತುಂಡುಗಳನ್ನು ಎಲ್ಲೆಂದರಲ್ಲಿ ಬಿಸಾಡುವಂತಿಲ್ಲ: ದಂಡ ಕಟ್ಟಬೇಕಾದಿತು ಎಚ್ಚರ!

|

Updated on: Mar 08, 2023 | 6:38 PM

ಪರಿಸರ ಮೇಲೆ ದುಷ್ಪರಿಣಾಮ ಬೀರುತ್ತಿರುವ ಸಿಗರೇಟ್​ ತುಂಡುಗಳನ್ನು ಇನ್ನು ಮುಂದೆ ಎಲ್ಲಿ ಬೇಕೆಂದರಲ್ಲಿ ಬಿಸಾಡುವಂತಿಲ್ಲ. ಕಸ ಹಾಕುವವರಿಗೆ ದಂಡ ವಿಧಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ. ಇದಕ್ಕೆ ನಿರ್ಬಂಧ ಹೇರಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮುಂದಾಗಿದೆ.

ಸಿಗರೇಟ್​ ತುಂಡುಗಳನ್ನು ಎಲ್ಲೆಂದರಲ್ಲಿ ಬಿಸಾಡುವಂತಿಲ್ಲ: ದಂಡ ಕಟ್ಟಬೇಕಾದಿತು ಎಚ್ಚರ!
ಪ್ರಾತಿನಿಧಿಕ ಚಿತ್ರ
Image Credit source: britannica.com
Follow us on

ಬೆಂಗಳೂರು: ಪರಿಸರ ಮೇಲೆ ದುಷ್ಪರಿಣಾಮ ಬೀರುತ್ತಿರುವ ಸಿಗರೇಟ್​ ತುಂಡು (cigarette butts) ಗಳನ್ನು ಇನ್ನು ಮುಂದೆ ಎಲ್ಲಿ ಬೇಕೆಂದರಲ್ಲಿ ಬಿಸಾಡುವಂತಿಲ್ಲ. ಕಸ ಹಾಕುವವರಿಗೆ ದಂಡ ವಿಧಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ. ಇದಕ್ಕೆ ನಿರ್ಬಂಧ ಹೇರಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (Karnataka State Pollution Control Board) ಮುಂದಾಗಿದೆ. ಸಿಗರೇಟ್​ ಮತ್ತು ಬೀಡಿ ತುಂಡುಗಳ ವಿಲೇವಾರಿಗೆ ಮಾರ್ಗಸೂಚಿ ಬಿಡುಗಡೆ ಮಾಡಿವಂತೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ (CPCB) ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ನಿರ್ದೇಶನ ನೀಡಿತ್ತು. ಈ ಹಿನ್ನೆಲೆ ಆರೋಗ್ಯ, ನಗರಾಭಿವೃದ್ಧಿ, ಬಿಬಿಎಂಪಿ ಮತ್ತು ತಂಬಾಕು ತಯಾರಕರು ಸೇರಿದಂತೆ ಮಧ್ಯಸ್ಥಗಾರರನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಭೆ ಕರೆಯಲಾಗಿದೆ. ಉನ್ನತ ಅಧಿಕಾರ ಸಮಿಯನ್ನು ಸಹ ನಿಯೋಜನೆ ಮಾಡಲಾಗಿದ್ದು, ಪ್ರೊ. ಯು. ಎಸ್​. ವಿಶಾಲ್​ ರಾವ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ಸದ್ಯ ಈ ಸಮಿತಿ ಕೆಲವೊಂದು ನಿಯಮಗಳನ್ನು ರಚಿಸಿದೆ. ಸಿಗರೇಟ್​ ತುಂಡು ಕಸದ ದುಷ್ಪರಿಣಾಮದ ಬಗ್ಗೆ ಸಾರ್ವಜನಿಕವಾಗಿ ಜಾಗೃತಿ ಮೂಡಿಸುವುದು. ಪ್ರತಿ ಸಿಗರೇಟ್ ಪ್ಯಾಕ್‌ ಮೇಲೆ ಸುರಕ್ಷಿತವಾಗಿ ವಿಲೇವಾರಿ ಮಾಡುವ ಸೂಚನೆಗಳನ್ನು ಸ್ಪಷ್ಟವಾಗಿ ಒದಗಿಸಬೇಕು.

ಇದನ್ನೂ ಓದಿ: ಫಾಸ್ಟ್​ ಕಾರ್ಡ್​​ನಲ್ಲಿ ಹಣ ಇಲ್ಲದೇ ಮಾರಸಂದ್ರ ಟೋಲ್ ಬಳಿ ನಿಂತ ಬರೋಬ್ಬರಿ 15 ಬಿಎಂಟಿಸಿ ಇವಿ ಬಸ್​ಗಳು

ಸಾರ್ವಜನಿಕ ಸ್ಥಳ, ಹೊರಾಂಗಣ, ಒಳಾಂಗಣ ಮತ್ತು ಕೆಲಸದ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಲಾಗಿದೆ. ಸಿಗರೇಟ್​ ತುಂಡುಗಳ ಕಸ ಹಾಕುವುದನ್ನು ಸಹ ನಿಷೇಧಿಸಲಾಗಿದೆ. ಇನ್ನು ಈ ನಿಮಯಗಳನ್ನು ಉಲ್ಲಂಘಿಸಿದವರಿಗೆ ಸಂಬಂಧಪಟ್ಟ ಅಧಿಕಾರಿಗಳು ದಂಡ ಹಾಕಬಹುದು ಎಂದು ಉಲ್ಲೇಖಿಸಲಾಗಿದೆ.  ಸಿಗರೇಟ್​ ತುಂಡು ಕಸ ಹಾಕುವುದಕ್ಕೆ ದಂಡ ವಿಧಿಸಲು ಮತ್ತು ನಿಮಯಗಳನ್ನು ಜಾರಿಗೆ ತರಲು ಸ್ಥಳಿಯ ಅಧಿಕಾರಿಗಳಿ ಮಾಹಿತಿ ನೀಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:30 pm, Wed, 8 March 23